ಮಿಜೋರಾಂ ಮೂಲಕ ಅಡಿಕೆ ಕಳ್ಳಸಾಗಣೆ ನಡೆಯುತ್ತಿದ್ದರೂ ಸರ್ಕಾರದ ನಿಷ್ಕ್ರಿಯತೆ ಕುರಿತು ಹೈಕೋರ್ಟ್ ಪ್ರಶ್ನಿಸಿದೆ. 2021 ರಲ್ಲಿ ದಾಖಲಾದ ಎಫ್‌ಐಆರ್‌ನ ಮೇಲೆ ಏಕೆ ಕ್ರಮಕೈಗೊಂಡಿಲ್ಲ ಎಂದು ನ್ಯಾಯಾಲಯವು ಪ್ರಶ್ನಿಸಿದೆ. ಸುದೀರ್ಘ ಸಮಯದ ಬಳಿಕವೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಗೌಹಾಟಿ ಹೈಕೋರ್ಟ್‌ನ ನ್ಯಾಯ ಪೀಠವು ಕೇಳಿದೆ.
ಅಡಿಕೆ ಸಾಗಾಟದ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಮಿಜೋರಾಂ ಸಾಮಾಜಿಕ ಕಾರ್ಯಕರ್ತ ವನ್ರಾಮ್ ಚುವಾಂಗಿ ಅವರು ಸಲ್ಲಿಸಿದ್ದರು. ಮಿಜೋರಾಂನಿಂದ ಇತರ ಪ್ರದೇಶಗಳಿಗೆ ಅಡಿಕೆ ಕಳ್ಳಸಾಗಣೆ ನಡೆಯುತ್ತಿರುವುದು ಕಂಡುಬರುತ್ತಿದೆ. ಈ ಅಕ್ರಮ ಸಾಗಾಟ ತಡೆಯುವ ಬಗ್ಗೆ ಮನವಿ ಮಾಡಲಾಗಿದ್ದರೂ ನಿರಂತರ ಸಾಗಾಟವಾಗುತ್ತಿತ್ತು. ಈ ಸಮಸ್ಯೆ ಎತ್ತಿ ತೋರಿಸಿದೆ ಮತ್ತು ಈ ಅಕ್ರಮ ವ್ಯಾಪಾರವನ್ನು ಪರಿಹರಿಸುವಲ್ಲಿ ರಾಜ್ಯದ ನಿಷ್ಕ್ರಿಯತೆಯನ್ನು ಆರೋಪಿಸಿದೆ. ಸಂಬಂಧಪಟ್ಟ ಇಲಾಖೆಯು ನಕಲಿ ಇ-ವೇ ಬಿಲ್‌ಗಳನ್ನು ನೀಡಿ ಕಳ್ಳಸಾಗಣೆ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.ಜನವರಿ 22, 2024 ರಂದು ನ್ಯಾಯಾಲಯದ ಆದೇಶದಲ್ಲಿ, ಸಂಬಂಧಪಟ್ಟ ಇಲಾಖೆಗಳ ಇ-ವೇ ಬಿಲ್‌ಗಳ ವಿತರಣೆಯಲ್ಲಿನ ಅಕ್ರಮಗಳ ಬಗ್ಗೆ ಹೈಕೋರ್ಟ್ ಈಗಾಗಲೇ ತನ್ನ ಕಳವಳವನ್ನು ವ್ಯಕ್ತಪಡಿಸಿದೆ.
ಮೂರು ವರ್ಷಗಳಿಂದ ಸಮಸ್ಯೆ ಬಗೆಹರಿಯದೆ ಕಾಲಹರಣ ಮಾಡಿದ್ದರೂ 2024ರ ಜನವರಿ 22ರಿಂದ ನ್ಯಾಯಾಲಯದ ಆದೇಶವನ್ನು ಏಕೆ ಸಂಪೂರ್ಣವಾಗಿ ಪಾಲಿಸಿಲ್ಲ ಎಂಬುದನ್ನು ವಿವರಿಸಿ ವೈಯಕ್ತಿಕ ಅಫಿಡವಿಟ್ ಸಲ್ಲಿಸುವಂತೆ ಮಿಜೋರಾಂನ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. 2021 ರಲ್ಲಿ ಅರ್ಜಿದಾರರು ಸಲ್ಲಿಸಿದ ಎಫ್‌ಐಆರ್ ಅನ್ನು ದಾಖಲಿಸಲು ವಿಫಲವಾದ ಬಗ್ಗೆ ವಿವರಿಸುವ ವೈಯಕ್ತಿಕ ಅಫಿಡವಿಟ್ ಅನ್ನು ಸಲ್ಲಿಸಲು ಚಂಫೈ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿಗೆ ಆದೇಶಿಸಲಾಗಿದೆ.
ಮಳೆ ಕೊರತೆ ಮತ್ತು ಜಲವಿದ್ಯುತ್ ಉತ್ಪಾದನೆ ಕುಸಿತದ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ…
ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ಅಕ್ಟೋಬರ್…
ಪಿಎಂ-ಕುಸುಮ್ ಯೋಜನೆಯಡಿ ರೈತರ ನೀರಾವರಿ ಪಂಪ್‌ಗಳಿಗೆ ಸೌರಶಕ್ತಿ ಅಳವಡಿಸುವ ಮೂಲಕ ಡೀಸೆಲ್ ಅವಲಂಬನೆ…
ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡು…
ಕರ್ನಾಟಕದ 111 ತಾಲೂಕುಗಳ ವ್ಯಾಪ್ತಿಯ 531 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು,…
ಹವಾಮಾನ ಬದಲಾವಣೆಯಿಂದ ಪಶ್ಚಿಮ ಘಟ್ಟದ ನೀಲಗಿರಿ ಜೀವಗೋಳದಲ್ಲಿನ ಕಾಡು ಪರಿಸರ ವ್ಯವಸ್ಥೆಗಳು ಅಸ್ಥಿರವಾಗುವ…