ಕಳೆದ ಹಲವು ದಿನಗಳಿಂದ ಸಂಪಾಜೆ, ಕಲ್ಲುಗುಂಡಿ ಸ್ಥಳೀಯ ಪ್ರದೇಶಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ಪ್ರದೇಶದ ಜನರ ಹಾಗೂ ಸಾರ್ವಜನಿಕ ಸೊತ್ತುಗಳ ರಕ್ಷಣೆ ಮತ್ತು ಸಹಾಯಕ್ಕೆ ನಿರಂತರವಾಗಿ ದಣಿವರಿಯದೆ ಎಸ್ ಎಸ್ ಎಫ್ ಮತ್ತು ಎಸ್ ವೈ ಎಸ್ ತುರ್ತು ಸೇವಾ ತಂಡ ಸುಳ್ಯ ನಿರಂತರ ಸೇವಾ ಕಾರ್ಯ ಮಾಡುತ್ತಿದೆ.
ತೀವ್ರ ಮಳೆಯ ಪರಿಣಾಮ ಕಲ್ಲುಗುಂಡಿ ಮಸೀದಿ ತಡೆಗೋಡೆ ಕಳಚಿ ಬಿದ್ದಿದ್ದು ಅದರ ಅವಶೇಷಗಳನ್ನು, ಕಲ್ಲುಗಳನ್ನೂ ಬದಿಗಿಟ್ಟು ಸ್ಥಳ ಅಚ್ಚುಕಟ್ಟಾಗಿಡಲು ಸಹಕರಿಸಿದರು. ಕಲ್ಲುಗುಂಡಿ ಬಾಲಂಬಿ ಸೇತುವೆಯಲ್ಲಿ ಸಿಲುಕಿದ್ದ ಭಾರೀ ಗಾತ್ರದ ಮರ ಮತ್ತು ಬಿದಿರುಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಸಿ ಕ್ರೈನ್ ಮುಖಾಂತರ ಬೃಹದಾಕಾರದ ಮರದ ದಿಮ್ಮಿಗಳನ್ನು ಮೇಲಕ್ಕೆತ್ತಿದರು. ನೀರಿನಲ್ಲಿ ಬಂದ ಬಿದಿರುಗಳ ಸಹಿತವಿರುವ ಬಲ್ಲೆಗಳು ಸೇತುವೆಯ ನೀರು ಹೋಗುವ ದ್ವಾರವನ್ನು ಮುಚ್ಚಿದನ್ನು ಗಮನಿಸಿದ ಕಾರ್ಯಕರ್ತರು ಅವುಗಳನ್ನು ತೆರವುಗೊಳಿಸಿ ಶುಚೀಕರಿಸಿದರು.
ಕಲ್ಲುಗುಂಡಿಯಲ್ಲಿ ಸತತವಾಗಿ ಎಸ್ಸೆಸ್ಸಫ್ ಹಾಗೂ ಎಸ್ ವೈ ಎಸ್ ತುರ್ತು ಸೇವಾ ತಂಡದ ಕಾರ್ಯಕರ್ತರು ಸೇವಾ ಕಾರ್ಯಾಚರಣೆಯಲ್ಲಿ ತೊಡಗಿಸಿದ್ದಾರೆ. ಈ ಕಾರ್ಯಾಚರಣೆಗೆ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್ ಸಹಿತ ಜನಪ್ರತಿನಿಧಿಗಳು ಸಾಥ್ ಕೊಟ್ಟಿದ್ದರು. ಸಾರ್ವಜನಿಕರು ಕಾರ್ಯಕರ್ತರ ಶ್ರಮದಾನವನ್ನು ಅಭಿನಂದಿಸಿದ್ದಾರೆ.