ಚುನಾವಣೆಗಷ್ಟೇ ಅಲ್ಲ ಪುತ್ತಿಲ ಸಾಮಾಜಿಕ ಕೆಲಸ…! | ಸುಳ್ಯದಲ್ಲಿ ಮನೆ ಹಸ್ತಾಂತರ ಮಾಡಿದ ಪುತ್ತಿಲ ಪರಿವಾರ |

May 28, 2024
8:48 PM
ಚುನಾವಣೆಗಷ್ಟೇ ಸಾಮಾಜಿಕ ಕೆಲಸವನ್ನು ಸೀಮಿತಗೊಳಿಸದೆ ಗ್ರಾಮೀಣ ಭಾಗಕ್ಕೂ ಸೇವಾ ಕಾರ್ಯವನ್ನು ಅರುಣ್‌ ಕುಮಾರ್‌ ಪುತ್ತಿಲ ನೇತೃತ್ವದ ಪುತ್ತಿಲ ಪರಿವಾರ ವಿಸ್ತರಿಸಿದೆ.

ಚುನಾವಣೆ ಸಮಯದಲ್ಲಿ ಹಾಗೂ  ಅದಕ್ಕೆ ಕೆಲವು ಸಮಯದ ಮೊದಲು ಸಾಮಾಜಿಕ ಚಟುವಟಿಕೆ ನಡೆಸಿ ಟಿಕೆಟ್‌ ಪಡೆಯುವುದೇ ಸಾಮಾಜಿಕ ಕೆಲಸ ಎಂಬ ವಾತಾವರಣ ಇದೆ. ಆದರೆ ವರ್ಷದ ಹಿಂದೆ ಆರಂಭವಾದ ಪುತ್ತಿಲ ಪರಿವಾರ, ಅದನ್ನು ದಾಟಿ ಸಾಮಾಜಿಕ ಸೇವೆ ನಿರಂತರ ಎಂದು ಸಾರಿದೆ. ಸುಳ್ಯದಲ್ಲಿ ಮನೆ ಹಸ್ತಾಂತರ ಕಾರ್ಯದ ಮೂಲಕ ಗ್ರಾಮೀಣ ಭಾಗದಲ್ಲೂ ಸೇವೆ ಇದೆ ಎನ್ನುವುದನ್ನು ಪುತ್ತಿಲ ಪರಿವಾರ ಮಾಡಿ ತೋರಿಸಿದೆ. 

Advertisement

ಕಳೆದ ವರ್ಷ ಪುತ್ತೂರಿನಲ್ಲಿ ಆರಂಭಗೊಂಡ ಅರುಣ್‌ ಕುಮಾರ್‌ ಪುತ್ತಿಲ ನೇತೃತ್ವದ ಪುತ್ತಿಲ ಪರಿವಾರ ಹಲವು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿದೆ, ಮಾಡುತ್ತಿದೆ. ಹೀಗಾಗಿ ಅನೇಕರು ಸಾಮಾಜಿಕ ಕೆಲಸ ಕಾರ್ಯಗಳ ಆಸಕ್ತರು ಅರುಣ್‌ ಕುಮಾರ್‌ ಪುತ್ತಿಲ ಹಾಗೂ ಪುತ್ತಿಲ ಪರಿವಾರವನ್ನು ನೆಚ್ಚಿಕೊಂಡಿದ್ದರು. ಯಾವುದೇ ಪ್ರತಿಫಲಾಕ್ಷೆ ಇಲ್ಲದೆ ಸೇವೆ ನಡೆಸುವ, ಕೆಲಸ ಮಾಡುವ ಅರುಣ್‌ ಕುಮಾರ್‌ ಪುತ್ತಿಲ ಅವರು ಹಾಗೂ ಅವರ ನೇತೃತ್ವದ ಪುತ್ತಿಲ ಪರಿವಾರ ಬೆಳವಣಿಗೆ ಆದ ಕಾರಣವೂ ಅದೇ. ಚುನಾವಣೆಗೆ ಸೀಮತಿವಾಗಿ ಕೆಲಸ ಮಾಡದೆ ನಿರಂತರವಾಗಿ ಜನರಿಗೆ ನೆರವಾಗುವುದು ಈ ಪರಿವಾರದ ವಿಶೇಷತೆ. ಇದೀಗ ಸುಳ್ಯದಲ್ಲಿ ಮನೆ ಹಸ್ತಾಂತರ ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ ಕಡೆಗೂ ತಮ್ಮ ಸೇವೆಯನ್ನು ವಿಸ್ತರಣೆ ಮಾಡುತ್ತಿದ್ದಾರೆ.

ಹಿಂದೆ ಇದ್ದ ಮನೆ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಸುಳ್ಯ ನಗರ ಪಂಚಾಯತ್ ಸಹಕಾರದಲ್ಲಿ ಸುಳ್ಯದ ಪೈಚಾರಿನಲ್ಲಿ ಸುಮತಿ ಎಂಬವರಿಗೆ ನೂತನವಾಗಿ ನಿರ್ಮಿಸಿದ ಮನೆ ‘ಸೇವಾಶ್ರಯ’ದ ಹಸ್ತಾಂತರ ಕಾರ್ಯಕ್ರಮ ಈಚೆಗೆ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸ್ಥಾಪಕ ಅರುಣ್ ಕುಮಾ‌ರ್ ಪುತ್ತಿಲ ಮಾತನಾಡಿ , ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಲ್ಪನೆಯಂತೆ ಸೇವೆ ಎಂಬ ಯಜ್ಞದಲ್ಲಿ ಸವಿದೆಯಂತೆ ಉರಿದು ಸಮಾಜದಲ್ಲಿ ಮತ್ತೊಬ್ಬರಿಗೆ ಸಹಾಯ ಮಾಡುವುದೇ ನಮ್ಮ ಜೀವನದ ಭಾಗವಾಗಿರಬೇಕು. ಈ ಮೂಲಕ ನಮ್ಮ ಜೀವನ ಸಾರ್ಥಕವಾಗಿಸಬೇಕು ಎಂದರು.

ಸೇವೆಯ ಕಲ್ಪನೆಯ ಮೂಲಕ ಕಷ್ಟದಲ್ಲಿ ಇರುವವರಿಗೆ ಸಹಾಯ ನೀಡಬೇಕೆಂಬ ಕಾರಣದಿಂದ ಎಲ್ಲರ ಸಹಕಾರದಲ್ಲಿ ಈ ಮನೆ ನಿರ್ಮಾಣ ಮಾಡಲಾಗಿದೆ. ಅಶಕ್ತರ, ಶೋಷಿತರ ಪರವಾಗಿ ನಿಂತು ಅವರ ಸಂತೋಷ ನಮ್ಮಸಂತೋಷ ಎಂದು ತಿಳಿದು ಸೇವೆ ಮಾಡಿದಾಗ ಬದುಕಿನಲ್ಲಿ ನೆಮ್ಮದಿಯನ್ನು ದೊರೆಯಲು ಸಾಧ್ಯ ಈ ರೀತಿಯ ಸೇವೆಯಿಂದ ಬದುಕಿನಲ್ಲಿ ನೆಮ್ಮದಿ ಮತ್ತು ಸಾರ್ಥಕತೆ ಪಡೆಯಲು ಸಾಧ್ಯ ಎಂದ ಅವರು ಮನುಷ್ಯತ್ವ, ಹೃದಯ ಶ್ರೀಮಂತಿಕೆ ಎಲ್ಲರಲ್ಲಿ ಇರಲಿ, ಆ ಮೂಲಕ ಹಿರಿಯರ ಕಲ್ಪನೆ ಸಾಕಾರಗೊಳ್ಳುತ್ತದೆ ಎಂದರು.ಸೂರಿಲ್ಲದವರಿಗೆ ಸೂರು ಒದಗಿಸಿ ಕೊಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಪ್ರಯತ್ನ ಇನ್ನಷ್ಟು ಆಗಬೇಕಾಗಿದೆ. ಆ ಮೂಲಕ ಎಲ್ಲರ ಬಾಳಿನಲ್ಲಿಯೂ ಪ್ರೀತಿ, ವಿಶ್ವಾಸ, ಸಂತಸ ನೆಲೆಯಾಗಲಿ ಎಂದು ಅವರು ಆಶಿಸಿದರು.

ನೂತನ ಮನೆ ಹಸ್ತಾಂತರ

ಮನೆಯ ಕೀಯನ್ನು  ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್‌.ಎನ್.ಮನ್ಮಥ  ಹಸ್ತಾಂತರ ಮಾಡಿದರು. ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ , ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ, ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್‌ ಕಂಠಿ, ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ, ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು , ಸಂತೋಷ್ ಜಾಕೆ, ಸಂತೋಷ್ ಕುತ್ತಮೊಟ್ಟೆ, ಡಾ.ಸಾಯಿರಾಂ, ಪುತ್ತಿಲ ಪರಿವಾರ ನಗರ ಸೇವಾ ಟ್ರಸ್ಟ್ ನ ಅಧ್ಯಕ್ಷ ಅನಿಲ್ ತೆಂಕಿಲ, ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಕಾರ್ಯದರ್ಶಿ ರವಿಕುಮಾರ್ ರೈ ತಿಂಗಳಾಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸುಳ್ಯ ತಾಲೂಕು ಅಧ್ಯಕ್ಷ ದಿನೇಶ್ ಅಡ್ಯಾರ್ , ಕಾರ್ಯದರ್ಶಿ ಸುಧಾಕರ ಬಾಟೋಳಿ, ಸದಸ್ಯರಾದ ಸಾತ್ವಿಕ್, ಪುಷ್ಪಾದರ, ಪದ್ಮನಾಭ ಬೀಡು, ಸುಕೇಶ್ ಅಡ್ಕಾರ್ , ಸುನಿಲ್ ಕೇರ್ಪಳ, ಸತೀಶ್ ಕೆಮನಬಳ್ಳಿ ವಸಂತ ನಾಯಕ್‌ ಅಜೇರು, ವಿನಯಚಂದ್ರ ಮೊದಲಾದವರಿದ್ದರು.

ಮನೆ ಹಸ್ತಾಂತರ ಕಾರ್ಯಕ್ರಮ
ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೇತುವಿನಿಂದ 18 ತಿಂಗಳು ಈ ರಾಶಿಯವರಿಗೆಲ್ಲಾ ಉತ್ತಮವಾಗಲಿದೆ |
May 14, 2025
7:29 AM
by: ದ ರೂರಲ್ ಮಿರರ್.ಕಾಂ
ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ
May 13, 2025
6:53 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group