ಪುತ್ತೂರಿನಲ್ಲಿ ಹಲಸು ಹಣ್ಣು ಮೇಳ | ಸಮಗ್ರ ಕೃಷಿ ಉದ್ಯಮಶೀಲತೆಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶ

May 12, 2024
11:34 AM

ಹಲಸು(Jack Fruit) ಹಾಗು ಪ್ರದೇಶದ ಇತರ ಸಕಾಲಿಕ ಹಣ್ಣುಗಳ(Fruit) ಕೃಷಿಗೆ(Agriculture) ಮತ್ತು ಕೃಷಿಕರಿಗೆ, ಹಣ್ಣು ಸಂಸ್ಕರಣೆ ಹಾಗು ಮೌಲ್ಯವರ್ಧನೆಗೆ, ಸಾಂಪ್ರದಾಯಿಕ ಹಣ್ಣು, ಅಡುಗೆ, ಆಹಾರ, ಅದರ ಜತೆಗೆ ಸಮಗ್ರ ಕೃಷಿ ಉದ್ಯಮಶೀಲತೆಗೆ(Business) ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಉದ್ದೇಶದಿಂದ ನವತೇಜ, ಪುತ್ತೂರು(Puttur) ಸ್ಥಳೀಯ ಪ್ರಗತಿಪರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುತ್ತಾ ಇರುವ ಹಲಸು ಹಣ್ಣು ಮೇಳದ(Jack Fruit Mela) ಏಳನೇ ಆವೃತ್ತಿ ಇದೇ ಮೇ ತಿಂಗಳ 24-25-26 ರಂದು ಪುತ್ತೂರಿನ ಜೈನ ಭವನದಲ್ಲಿ ನಡೆಯಲಿದೆ.

Advertisement
Advertisement

ಈ ಮೂರು ದಿನಗಳ ಹಣ್ಣು ಮೇಳದಲ್ಲಿ ವಿವಿಧ ಹಣ್ಣುಗಳ ಗಿಡಗಳು, ಪ್ರಾದೇಶಿಕ ಹಾಗು ದೇಸಿ ವಿದೇಶಿ ಹಣ್ಣುಗಳ ಪ್ರದರ್ಶನ ಹಾಗು ಮಾರಾಟ, ಹಣ್ಣು ಹಾಗು ಕೃಷಿ ಉದ್ಯಮ, ಸ್ವಾದಿಷ್ಟ ಆಹಾರ ಮೇಳ ಹೀಗೆ ಸುಮಾರು 60 ವಿವಿಧ ಮಳಿಗೆಗಳು ಇರಲಿವೆ. ಸೀಮಿತ ಸ್ಥಳ, ಉತ್ತಮ ವ್ಯವಸ್ಥೆ ಎರಡನ್ನೂ ಗಮನ ಇಟ್ಟುಕೊಂಡು ನಿಯಮಿತ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಉದ್ದೇಶ ಆಧಾರದಲ್ಲಿ ಹಲಸು – ಹಣ್ಣು – ಕೃಷಿ – ಆಹಾರ ಸಂಬಂಧ ಉದ್ಯಮ ಪ್ರಸ್ತುತಿಗಳಿಗೆ ಪ್ರಾಶಸ್ತ್ಯ ಆಧಾರದಲ್ಲಿ ಹಂಚಿಕೆ ಮಾಡಲಾಗುತ್ತದೆ.

Advertisement

ಈಗಾಗಲೇ ಹಂತ ಹಂತವಾಗಿ ಸ್ಥಳೀಯ ಸಮುದಾಯದಲ್ಲಿ ಉತ್ತಮ ಪ್ರಚಾರ ಪಡೆಯುತ್ತಾ, ಸಾರ್ವಜನಿಕರ ಪ್ರೋತ್ಸಾಹ ಹೆಚ್ಚುತ್ತಾ ಬೆಳೆದಿರುವ ಹಲಸು ಹಣ್ಣು ಮೇಳಕ್ಕೆ ಈ ವರ್ಷ ಇನ್ನೂ ಉತ್ತಮ ರೀತಿಯ ಸಾರ್ವಜನಿಕ ಸ್ಪಂದನೆ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಅದಕ್ಕೆ ಪೂರಕ ಸಿದ್ಧತೆ, ಪ್ರಚಾರ ಮಾಡುತ್ತಾ ಇದ್ದೇವೆ. ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು ಮಳಿಗೆಗಳ ಮಾಹಿತಿ ಹಾಗು ಖಚಿತ ಮಾಡುವ ಬಗ್ಗೆ ಕೂಡಲೇ ಸುಹಾಸ್ ಮರಿಕೆ 948-053-5708 ಅವರನ್ನು ಸಂಪರ್ಕಿಸಬೇಕು ಎಂದು ವಿನಂತಿ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಇಂದು ಕಾರ್ಗಿಲ್ ವಿಜಯೋತ್ಸವ ದಿನ : ನೂರಾರು ಸೈನಿಕರ ಪ್ರಾಣ ತ್ಯಾಗಕ್ಕೊಂದು ನಮನ
July 26, 2024
11:51 PM
by: The Rural Mirror ಸುದ್ದಿಜಾಲ
ನಮ್ಮ ಪ್ರಧಾನಿಯವರು ಹೇಳಿದಂತೆ ಅಟಕ್ ನಾ, ಲಟ್ ಕಾನಾ, ಬಟ್ ಕಾನಾ ಮಾತು ನಡೆಯುತ್ತಿಲ್ಲ : ರೈತರು ಇಂತ ಕಡೆ ಪ್ರಶ್ನಿಸುವಂತಾಗಬೇಕು
July 26, 2024
11:35 PM
by: The Rural Mirror ಸುದ್ದಿಜಾಲ
ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ಕೋರಿ ನಿರ್ಣಯ ಅಂಗೀಕರಿಸಿದ ರಾಜ್ಯ ಸರ್ಕಾರ : ಕೇಂದ್ರ ಸರ್ಕಾಕ್ಕೆ ಕೋರಿಕೆ
July 26, 2024
3:33 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 26-07-2024 | ಕರಾವಳಿ ಜಿಲ್ಲೆಗಳಲ್ಲಿ ಮುಂದುವರಿದ ಮಳೆ | ಜುಲೈ 31 ರ ತನಕವೂ ಗಾಳಿ ಸಹಿತ ಮಳೆ ಸಾಧ್ಯತೆ |
July 26, 2024
12:40 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror