ಪ್ರತಿ ವರ್ಷ ವಾಡಿಕೆಯಂತೆ ಮುಂಗಾರು ಮಳೆ (Mansoon Rain)ಬಂದರೆ ರಾಜ್ಯ ಹಾಗೂ ದೇಶ ಸುಭೀಕ್ಷವಾಗಿರುತ್ತದೆ. ಆದರೆ ಈ ಬಾರಿ ತೀರಾ ಬರಗಾಲದ (Drought) ಛಾಯೆ ರಾಜ್ಯದಲ್ಲಿ ಆವರಿಸಿದೆ. ಮಳೆ, ಬೆಳೆ ಇಲ್ಲದೆ ಜನ ತತ್ತರಿಸಿ ಹೋಗಿದ್ದಾರೆ. ಮಳೆಗಾಲದಲ್ಲೇ ನೀರಿಗೆ ತೀವ್ರ ತತ್ವಾರ ಆರಂಭವಾಗಿದೆ. ಇನ್ನು ಬೆಳೆ, ಜಾನುವಾರಗಳ ಕಥೆ ಕೇಳೋದೆ ಬೇಡ.
ರಾಜ್ಯ ಸರ್ಕಾರ ಒಟ್ಟು 161 ತಾಲೂಕುಗಳನ್ನು ತೀವ್ರ ಬರಪೀಡಿತ ಎಂದ ಘೋಷಣೆ ಮಾಡಿದೆ. ಜೊತೆಗೆ 34 ತಾಲೂಕುಗಳನ್ನು ಸಾಧಾರಣ ಬರ ಪೀಡಿತ ಎಂದು ಘೋಷಣೆ ಮಾಡಿದೆ. ಈ ಪೈಕಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ತಾಲೂಕುಗಳು ಸಹ ಸೇರಿವೆ.
ಬೆಂಗಳೂರಲ್ಲಿ ಬರದ ಘೋಷಣೆಯ ಬೆನ್ನಲ್ಲೇ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗುವ ಹಿನ್ನೆಲೆ ರಾಜಧಾನಿಯಲ್ಲಿ ಭಾರೀ ಮಳೆಯ ಸೂಚನೆ ನೀಡಲಾಗಿದೆ. ಪ್ರತಿ ಗಂಟೆಗೆ 35ರಿಂದ 40 ಕಿ.ಮೀ ಬಿರುಗಾಳಿ ಬೀಸಲಿದೆ. ಆಂಧ್ರಪ್ರದೇಶ, ತಮಿಳುನಾಡು ಮೂಲಕ ರಾಜ್ಯಕ್ಕೆ ಮಳೆ ಪ್ರವೇಶವಾಗಲಿದೆ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಿಗೂ ಸಹ ಮಳೆ ಆಗುವ ಸಾಧ್ಯತೆ ಇದೆ.