ಅಮೆರಿಕದ ಹಲವು ರಾಜ್ಯಗಳಲ್ಲಿ ಅತ್ಯಂತ ಪ್ರಬಲ ಚಂಡಮಾರುತ ಹಾಗೂ ಸುಳಿಗಾಳಿ ಉಂಟಾಗಿದ್ದು, ಈವರೆಗೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದ್ದು, 40 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಶುಕ್ರವಾರ ಆರಂಭವಾದ ಚಂಡಮಾರುತವು ಮಿಸ್ಸೋರಿ , ಆರ್ಕಾನ್ಸಾ ಹಾಗೂ ಕಾನ್ ಸಾಸ್ ರಾಜ್ಯಗಳಲ್ಲಿ ಹೆಚ್ಚಿನ ಅನಾಹುತ ಸೃಷ್ಟಿಸಿದೆ. ಭಾರೀ ವೇಗದಲ್ಲಿ ಬೀಸುತ್ತಿರುವ ಸುಳಿಗಾಳಿಯು ಹಲವು ಪ್ರದೇಶಗಳಲ್ಲಿನ ಮನೆಗಳನ್ನು ಧ್ವಂಸಮಾಡಿದ್ದು, 50ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಮಿನಿಸೋಟಾ ಹಾಗೂ ದಕ್ಷಿಣ ಡಕೋಟಾ ರಾಜ್ಯಗಳಲ್ಲೂ ಭಾರೀ ಪ್ರಮಾಣದ ಅನಾಹುತ ಸಂಭವಿಸಿದೆ. ಧೂಳಿನೊಂದಿಗೆ ಗಂಟೆಗೆ 80 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಿತ್ತು.ಚಂಡಮಾರುತದ ಬಗ್ಗೆ ಸರ್ಕಾರ ಮೊದಲೇ ನಿರೀಕ್ಷಿಸಿ, ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. ಹಾಗಾಗಿ ಹಾನಿಯ ಪ್ರಮಾಣ ತಗ್ಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel