ರಾಜ್ಯದಲ್ಲಿ ಕಾಡಲಿದೆ ಜಲಕ್ಷಾಮ | ಬೆಂಗಳೂರು, ಮೈಸೂರಿನಲ್ಲಿ ಎಚ್ಚರ | ಹನಿ ಹನಿ ನೀರಿಗೂ ತತ್ವಾರ ಸಾಧ್ಯತೆ |

February 22, 2024
12:28 PM
ಜಲಕ್ಷಾಮ ಎದುರಿಸಲು ರಾಜ್ಯದಲ್ಲಿ ಸಿದ್ಧತೆ ನಡೆಸಬೇಕಾಗಿದೆ. ರಾಜ್ಯದ ವಿವಿದೆಡೆ ನೀರಿನ ಸಮಸ್ಯೆ ಆರಂಭವಾಗಿದೆ.ರಾಜ್ಯದ 223 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, 7,082 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಬಹುದೆಂದು ಗುರುತಿಸಲಾಗಿದೆ.

ರಾಜ್ಯದಲ್ಲಿ ಈ ಬಾರಿ ವರುಣ(Rain) ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೀರಿನ ಬವಣೆ (Water scarcity)ಎದುರಿಸಬೇಕಾಗಿದೆ. ಇನ್ನು ಮಳೆ ಆರಂಭಕ್ಕೆ 3-4 ತಿಂಗಳು ಬಾಕಿ ಇದ್ದು ಈಗಲೇ ಜೀವಜಲಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಈ ಬಾರಿ ಕಾವೇರಿ ಜಲಾನಯನ(Cauvery belt) ಪ್ರದೇಶದಲ್ಲಿ ಕಡಿಮೆ ಮಳೆ ಬಿದ್ದ ಹಿನ್ನೆಲೆ ಬೆಂಗಳೂರು(Bengaluru), ಮೈಸೂರಿಗರಿಗೆ(Mysore) ಜಲಕ್ಷಾಮ ಎದುರಾಗುವ ಮುನ್ಸೂಚನೆ ಇದೆ. ಉಳಿದಂತೆ ರಾಜ್ಯದ ಸುಮಾರು 3000 ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಪೆಬ್ರವರಿ ತಿಂಗಳಲ್ಲೇ ನೀರಿನ ಆತಂಕ ಶುರುವಾಗಿದೆ.

Advertisement
Advertisement

ಜೀವನಾಡಿ KRS ಡ್ಯಾಂ ನೀರು ಬರಿದಾಗ್ತಿದ್ದು ಬೆಂಗಳೂರು, ಮೈಸೂರಿಗರು ಇನ್ನು ಎಚ್ಚರದಿಂದಿರಬೇಕು. ಮಿತವಾಗಿ ನೀರು ಬಳಸದಿದ್ದರೆ ನೀರಿನ ಗಂಡಾಂತರ ಕಾದಿದೆ. ಕೆಆರ್​​ಎಸ್​​​ ಡ್ಯಾಂನಲ್ಲಿ ಈಗ ಕೇವಲ 16 ಟಿಎಂಸಿ ನೀರು ಮಾತ್ರ ಇದ್ದು, ಅದರಲ್ಲಿ 5 ಟಿಎಂಸಿ ನೀರು ಫೆಬ್ರವರಿ, ಮಾರ್ಚ್‌ನಲ್ಲಿ ತಮಿಳುನಾಡಿಗೆ ಬಿಡಬೇಕು. ಬಳಿಕ ಕೇವಲ 11 ಟಿಎಂಸಿ ಉಳಿಯುತ್ತೆ.

Advertisement

11 ಟಿಎಂಸಿಯಲ್ಲಿ 8 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ. ಈ ನೀರನ್ನು ಬಳಕೆ ಮಾಡಿಕೊಳ್ಳಲು ಆಗೋದಿಲ್ಲ. ಪ್ರತಿ ತಿಂಗಳು ಮೈಸೂರು, ಬೆಂಗಳೂರಿಗೆ 2 ಟಿಎಂಸಿ ಬೇಕಿದೆ. ಹೀಗಾಗಿ ಡ್ಯಾಂನಲ್ಲಿರೋದು ಕೇವಲ 2 ತಿಂಗಳಿಗಾಗುವಷ್ಟು ನೀರು ಇರೋದರಿಂದ ಬೆಂಗಳೂರು, ಮೈಸೂರಿಗರಿಗೆ ಜಲಕ್ಷಾಮ ಎದುರಾಗುವ ಮುನ್ಸೂಚನೆ ಇದೆ.

ಈಗಾಗಲೇ ಕಾವೇರಿ ಜಲನಯನ ಪ್ರದೇಶದಲ್ಲಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ. ಅಲ್ಲಿನ ಯಾವುದೇ ರೈತರು ಬಿತ್ತನೆ ಕಾರ್ಯವನ್ನು ಕೂಡ ಮಾಡಿಲ್ಲ. ನೀರಿನ ಅಭಾವದಿಂದ ರೈತರು ಕೈ ಚೆಲ್ಲಿ ಅಸಹಾಯಕಾರಿ ಕುಳಿತಿದ್ದಾರೆ. ಮತ್ತೊಂದು ಕಡೆ ಕುಡಿಯುವ ನೀರಿಗೂ ಅಭಾವ ಎದುರಾಗಿದೆ. ಒಂದು ತಿಂಗಳಿನಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಕಷ್ಟ ಆಗಲಿದೆ, ಈ ನಡುವೆ ವರುಣ ಕೃಪೆ ತೋರಿದರೆ ಜನರು ನಿಟ್ಟುಸಿರು ಬಿಡಬಹುದು.

Advertisement

ಜಾತ್ರೆಗಾಗಿ ನೀರು: ‘ಕೃಷಿಗೆ ಬಳಸಬೇಡಿ; ಫೆಬ್ರವರಿ 26 ರಂದು ಮೈಲಾರಲಿಂಗೇಶನ ಜಾತ್ರೆ ನಡೆಯಲಿದೆ. ಹೀಗಾಗಿ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಡಲಾಗಿದೆ. ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳಿಗೆ ಬಳಸಬಾರದು ಅಂತಾ ವಿಜಯನಗರ ಜಿಲ್ಲಾಡಳಿತ ಹಾಗೂ ಹೂವಿನಹಡಗಲಿ ತಾಲೂಕು ಆಡಳಿತದಿಂದ ಆದೇಶ ಹೊರಡಿಸಲಾಗಿದೆ.

News18 Kannada

Advertisement

ಫೆ.18 ರಿಂದ 23ರವರೆಗೆ ನಿತ್ಯ 500 ಕ್ಯೂಸೆಕ್ ನೀರು ಹರಿಸಲು ಆದೇಶ ಹೊರಡಿಸಲಾಗಿದೆ. ಹಿಂಗಾರು – ಮುಂಗಾರಿನಲ್ಲಿ ಮಳೆ ಸಮರ್ಪಕ ಬಂದಿಲ್ಲ. ಬೇಸಿಗೆ ಮುನ್ನವೇ ಬತ್ತಿ ನದಿ ಹೋಗಿದೆ. ಇದರಿಂದ ಮೈಲಾರ ಜಾತ್ರೆಗೆ ಬರುವ ಭಕ್ತರಿಗೆ ಭಾರೀ ತೊಂದರೆ ಆಗುತ್ತೆ ಅನ್ನೋ ಕಾರಣಕ್ಕೆ ಜಾತ್ರೆ ಮತ್ತು ಕುಡಿಯುನ ನೀರಿನ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತಿದೆ. ಜನ-ಜಾನುವಾರುಗಳಿಗೆ ನೀರಿನ ಅಭಾವ ಆಗದಂತೆ ಕ್ರಮ ಕೈಗೊಂಡಿದ್ದೇವೆ. ನದಿ ತೀರದ ರೈತರು ಸಹಕರಿಸಬೇಕು ಎಂದ ಹೂವಿನಹಡಗಲಿ ತಹಶೀಲ್ದಾರ್ ಕಾರ್ತಿಕ್ ಮನವಿ ಮಾಡಿದ್ದಾರೆ.

ರಾಜ್ಯದ 223 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, 7,082 ಗ್ರಾಮಗಳಲ್ಲಿ ಹಾಗೂ 1,193 ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಬಹುದೆಂದು ಗುರುತಿಸಲಾಗಿದೆ, ಪರಿಸ್ಥಿತಿ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಶಾಸಕ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರವನ್ನು ಸಚಿವರು ನೀಡಿದ್ದಾರೆ.

Advertisement

ಪ್ರಸ್ತುತ 18 ಜಿಲ್ಲೆಗಳ 46 ತಾಲೂಕುಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು 46 ಗ್ರಾಮಗಳಿಗೆ 58 ಟ್ಯಾಂಕರ್‌ ಗಳ ಮೂಲಕ ಹಾಗೂ 156 ಗ್ರಾಮಗಳಲ್ಲಿ 183 ಖಾಸಗಿ ಬೋರ್ವೆಲ್ ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಕುಡಿಯುವ ನೀರು ಪೂರೈಸಲಾಗುತ್ತಿದೆ. ಅಲ್ಲದೆ, 4 ನಗರ ಸ್ಥಳೀಯ ಸಂಸ್ಥೆಗಳಲ್ಲಿನ 46 ವಾರ್ಡ್ ಗಳಲ್ಲಿ 12 ಟ್ಯಾಂಕರ್ ಗಳ ಮೂಲಕ ತುರ್ತು ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದಿದ್ದಾರೆ.

ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಒದಗಿಸಲು ಸಿದ್ಧತೆ ನಡೆಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಒಟ್ಟು 6,416 ಖಾಸಗಿ ಬೋರ್ವೆಲ್ ಗಳನ್ನು ಗುರುತಿಸಿದ್ದು, ಅವುಗಳಲ್ಲಿ 2,654 ಬೋರ್ವೆಲ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

ಕೊಪ್ಪಳದಂತಹ ಪ್ರದೇಶದ ಕೆಲವು ಕಡೆ ಇನ್ನಷ್ಟು ಪರಿಸ್ಥಿತಿ ಗಂಭೀರವಾಗಿದೆ. ಇಲ್ಲಿನ ಜಮಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ ಜನರು ಊರ ಮುಂದಿರುವ  ಕೈ ಬೋರ್‌ನಿಂದ ನೀರು ತರಬೇಕು. ಗ್ರಾಮದಲ್ಲಿ ಹಾಕಲಾದ ಪೈಪ್‌ ಒಡೆದು ಹೋಗಿವೆ ಎನ್ನುತ್ತಾರೆ ಗ್ರಾಮಸ್ಥರು. ನೀರಿನ ಸಮಸ್ಯೆ ಇರುವುದರಿಂದ ಜನರು ಗ್ರಾಮದ ಮುಂದೇ ಇರುವ ಕೈ ಬೋರಿಗೆ ಬರುತ್ತಿದ್ದಾರೆ. ನೀರಿನ ಅಂತರ್ಜಲ ಕಡಿಮೆ ಇರುವುದರಿಂದ ಗಂಟೆಗೊಂದು ಬಿಂದಿಗೆ ತುಂಬುತ್ತವೆ. ನೀರಿಗಾಗಿ ಆಗಮಿಸಿ ಜನರು ಗಂಟೆಗಟ್ಟಲೆ ನೀರಿಗಾಗಿ ಬಿಸಿಲಿನಲ್ಲಿ ಕುಳಿತು ಕಾಯಬೇಕು.

ಬೆಂಗಳೂರಿನಲ್ಲಿ ಕೆಲವು ಕಡೆ ನೀರಿನ ಸಮಸ್ಯೆ ಇದೆ. ಪೀಣ್ಯದ ಕೆಲವು ಕಡೆ ಟ್ಯಾಂಕರ್‌ ನೀರಿನ ಜನರು ಮೊರೆ ಹೋಗಿದ್ದಾರೆ. ಒಂದು ಟ್ಯಾಂಕರ್‌ ನೀರಿನ ಬೆಲೆ ಕೆಲವು ಕಡೆ 2500 ರೂಪಾಯಿ ಇದೆ.  ಆರ್‌.ಆರ್‌. ನಗರದಲ್ಲಿ ಜನರು ಖಾಸಗಿ ಪೂರೈಕೆದಾರರಿಂದ 6,500 ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕರ್‌ಅನ್ನು 2,500 ರೂ. ಪಾವತಿಸಿ ಖರೀದಿಸಿದ್ದಾರೆ. ಕೊಳವೆಬಾವಿಯಲ್ಲಿ ನೀರಿನ ಮಟ್ಟ ಅಷ್ಟೊಂದು ಪ್ರಮಾಣದಲ್ಲಿ ಇಳಿಕೆಯಾಗಿದೆ.

Advertisement

 

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |
April 28, 2024
9:26 PM
by: ಪ್ರಬಂಧ ಅಂಬುತೀರ್ಥ
ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ
April 28, 2024
9:24 PM
by: The Rural Mirror ಸುದ್ದಿಜಾಲ
ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |
April 28, 2024
4:55 PM
by: The Rural Mirror ಸುದ್ದಿಜಾಲ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |
April 28, 2024
4:40 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror