ಸ್ವಚ್ಛ ಭಾರತ ಈ ದೇಶದ ಕನಸು. ಇದೇ ಒಂದು ಆಂದೋಲನವಾಗಿದೆ, ಅಭಿಯಾನವಾಗಿದೆ. ಅದೇ ಮಾದರಿಯಲ್ಲಿ ನಡೆದರೆ ಬೆಳ್ಳಾರೆ ಪೇಟೆ ಈಗ ಸದ್ದಾಗುತ್ತಿದೆ. ಅದು ಸ್ವಚ್ಛತೆಗಾಗಿ ನಡೆಯುತ್ತಿರುವ ಸದ್ದು. ಕಸ ಹೆಕ್ಕುವುದು , ತ್ಯಾಜ್ಯ ವಿಲೇವಾರಿ ಮಾತ್ರವೇ ಸ್ವಚ್ಛತೆ ಭಾಗವಲ್ಲ, ಸಮರ್ಪಕ ಒಳಚರಂಡಿ ವ್ಯವಸ್ಥೆಯೂ ಸ್ವಚ್ಛತೆಯ ಭಾಗ ಎಂದು ಎಚ್ಚರಿಸುತ್ತಾರೆ ಸಾಮಾಜಿಕ ಕಾರ್ಯಕರ್ತರು. ಈ ಬಗ್ಗೆ ವರದಿ ಇಲ್ಲಿದೆ….
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಪೇಟೆಯಲ್ಲಿ ಕಳೆದ ವರ್ಷಗಳಿಂದ ಚರಂಡಿ ಅವ್ಯವಸ್ಥೆ ಇದೆ. ಇದರಿಂದಾಗಿ ಜನರು ನಿತ್ಯವೂ ಸಂಕಷ್ಟ ಅನುಭವಿಸುವಂತಾಗಿದೆ. ಇಲಾಖೆಗಳು, ಸ್ಥಳೀಯ ಪಂಚಾಯತ್ ಸೇರಿದಂತೆ ಯಾರೊಬ್ಬರೂ ಗಂಭೀರವಾಗಿ ಈ ಸಮಸ್ಯೆ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಜನರ ಆರೋಪ.
Sewage water problem. In Bellare City of #Sullia Taluk. #ruralmirror#SaveWater #WorldWaterDay #Sullia #Karnataka @CMofKarnataka @AngaraSBJP @DCDK9 @karkalasunil @KotasBJP pic.twitter.com/JIxJqBn5Zt
— theruralmirror (@ruralmirror) March 22, 2022
Advertisement
ಬೆಳ್ಳಾರೆ ಪೇಟೆಯಲ್ಲಿ ಕಳೆದ 4 ವರ್ಷದಿಂದ ಚರಂಡಿ ಅವ್ಯವಸ್ಥೆಇದೆ. ಇದರಿಂದಾಗಿ ನಿತ್ಯ ನರಕಯಾತನೆಯನ್ನು ಪೇಟೆಯ ಜನರು ಅನುಭವಿಸುತ್ತಿದ್ದಾರೆ. ಬೆಳ್ಳಾರೆ ಮೇಲಿನ ಪೇಟೆಯಿಂದ ಕೆಳಗಿನ ಪೇಟೆಯ ತನಕ ಇರುವ ಎಲ್ಲಾ ಹೋಟೆಲ್ ಗಳ ಹಾಗೂ ಅಂಗಡಿಗಳ ಸೇರಿದಂತೆ ಇತರ ನೀರುಗಳನ್ನು ಅನಿವಾರ್ಯವಾಗಿ ನೇರವಾಗಿ ಚರಂಡಿಗೆ ಬಿಡುತ್ತಾರೆ. ಚರಂಡಿ ಕಾಮಗಾರಿ ಮಾಡುವಾಗ ನೀರು ಸರಾಗವಾಗಿ ಹೋಗುವ ರೀತಿಯಲ್ಲಿ ಮಾಡದೆ ಕಾಮಗಾರಿ ಮಾಡಿರುವುದರಿಂದ , ಕೊಳಚೆ ನೀರು ಚರಂಡಿಯಲ್ಲಿ ಶೇಖರಣೆಯಾಗುತ್ತಿದೆ ಎನ್ನುವುದು ಈಗಿನ ಅಭಿಪ್ರಾಯವಾಗಿದೆ. ಹೀಗಾಗಿ ಈಗ ಪೇಟೆಯಲ್ಲಿ ವೀಪರೀತ ಸೊಳ್ಳೆ ಕಾಟ ಹಾಗೂ ದುರ್ನಾತ ಬೀರುತ್ತಿದೆ ಎಂದು ಜನರು ಹೇಳುತ್ತಾರೆ. ಆದರೆ ಕಟ್ಟಡದ ಮಾಲಕರು ಕೊಳಚೆ ನೀರಿನ ಪರೀಕ್ಷಾ ವರದಿಯನ್ನು ಗ್ರಾಮ ಪಂಚಾಯತ್ ಗೆ ಸಲ್ಲಿಸಿ, ಒಳ ಚರಂಡಿಗೆ ಕೊಳಚೆ ನೀರನ್ನು ಬಿಡಲು ಅನುಮತಿ ಪಡೆದು ನೀರು ಬಿಡುತ್ತಾರೆ. ಆದರೂ ವಾಸನೆ ಬರುತ್ತಿರುವುದು ಹೇಗೆ ಎನ್ನುವುದು ಪ್ರಶ್ನೆಯಾಗಿದೆ.
ಒಳ ಚರಂಡಿ ಎಂದು ಮಾಡಿರುವ ಕಾಮಗಾರಿಗೆ ಮುಚ್ಚಿಗೆಯನ್ನು ಹಾಕಿರುವುದಿಲ್ಲ. ಒಳ ಚರಂಡಿ ವ್ಯವಸ್ಥೆ ಇದ್ದರೂ, ಮಳೆ ನೀರು ಮಾತ್ರ ರಸ್ತೆಯಲ್ಲಿಯೇ ಹರಿಯುವ ಸ್ಥಿತಿ ಇದೆ. ಇದರಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತದೆ. ಇದರ ಬಗ್ಗೆ ಮಾಧ್ಯಮಗಳು ಎಚ್ಚರಿಸಿದರೂ ಸ್ಥಳೀಯ ಪಂಚಾಯತ್ ಎಚ್ಚೆತ್ತುಕೊಂಡಿಲ್ಲ ಎನ್ನುವುದು ಜನರ ಆರೋಪ. ಈ ಬಗ್ಗೆ ಮೌಖಿಕವಾಗಿ, ಈ ಮೇಲ್ ಮೂಲಕ ಅಧಿಕಾರಿಗಳಿಗೆ ಮಾಹಿತಿ ಹಾಗೂ ದೂರು ನೀಡಿದರೂ, ಸಮಸ್ಯೆ ಬಗೆಹರಿದಿಲ್ಲ. ಕಳೆದ ವಾರ ಆರೋಗ್ಯ ಅಧಿಕಾರಿಯೊಬ್ಬರು ಬಂದು ಭೇಟಿ ನೀಡಿದ್ದಾರೆ. ಹೀಗಿದ್ದರೂ ಯಾವುದೇ ಕ್ರಮವಾಗಿಲ್ಲ ಎನ್ನುವುದೇ ಅಚ್ಚರಿ.