ಶಬರಿಮಲೆಯಲ್ಲಿ ಮಂಡಲ ಪೂಜಾ ಅವಧಿಯ ಸಿದ್ಧತೆಗಳ ಅಂತಿಮ ಪರಿಶೀಲನೆಯು ತಿರುವನಂತಪುರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಇದೇ 15ರಂದು ಆರಂಭವಾಗಲಿರುವ ಮಂಡಲ ಮಕರ ವಿಳಕ್ಕು ಯಾತ್ರೆಗೆ ಪೂರ್ವಭಾವಿಯಾಗಿ ವಿವಿಧ ಇಲಾಖೆಗಳು ಪೂರ್ವಸಿದ್ಧತಾ ಕಾರ್ಯಗಳನ್ನು ಚುರುಕುಗೊಳಿಸಿವೆ. ಭದ್ರತಾ ವ್ಯವಸ್ಥೆಗಾಗಿ ಸನ್ನಿಧಾನಂ ಮತ್ತು ಸುತ್ತಮುತ್ತ 13,000 ಪೊಲೀಸರನ್ನು ನಿಯೋಜಿಸಲಾಗಿದೆ. ಆರೋಗ್ಯ ಇಲಾಖೆಯು ಸನ್ನಿಧಾನಂ, ನಿಲಕ್ಕಲ್ ಮತ್ತು ಪಂಪಾದಲ್ಲಿ 24 ಗಂಟೆಯೂ ಸೇವೆಯನ್ನು ಒದಗಿಸಲಿದೆ. ಕೆಎಸ್‌ಆರ್‌ಟಿಸಿ ಅಡಿಯಲ್ಲಿ ಸುಮಾರು 450 ಬಸ್‌ಗಳು ಕಾರ್ಯನಿರ್ವಹಿಸಲಿವೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel