#Drought| ಉತ್ತರ ಕರ್ನಾಟಕದಲ್ಲಿ ಬರದ ಛಾಯೆ: ಒಣಗುತ್ತಿದೆ ಬೆಳೆ : ಕಾಪಾಡಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋದ ರೈತ

July 11, 2023
12:38 PM
ಉತ್ತರ ಕರ್ನಾಟಕದಲ್ಲಿ ವರುಣ ದೇವ ಇನ್ನೂ ಕೃಪೆ ತೋರಿಲ್ಲ. ಮಳೆಗಾಗಿ ರೈತರು ಪರಿತಪಿಸುತ್ತಿರುವ ಸ್ಥಿತಿ ಬಂದಿದೆ. ಬೆಳೆ ಉಳಿಸಿಕೊಳ್ಳಲು ಪರದಾಟ ನಡೆಸಬೇಕಾಗಿದೆ.

ಉತ್ತರ ಭಾರತ, ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದ ಜನ ಪರದಾಡುತ್ತಿದ್ರೆ, ನಮ್ಮ ಕರ್ನಾಕಟದ ಉತ್ತರ ಭಾಗದಲ್ಲಿ ಮಳೆ ಇಲ್ಲದೆ ಜನ ಪರಿತಪಿಸುವಂತಾಗಿದೆ. ತಾವು ಬಿತ್ತಿದ ಬೆಳೆ ಕಾಪಾಡಿಕೊಳ್ಳಲು ಕೃತಕ ನೀರಿನ ಪರ್ಯಾಯ ಕಂಡುಕೊಳ್ಳಬೇಕಾಗಿದೆ. ಬಿಸಿಲುನಾಡು ರಾಯಚೂರಿನಲ್ಲಿ ಬರದ ಛಾಯೆ ಆವರಿಸಿದೆ. ಮುಂಗಾರು #Mansoon ನಂಬಿ ಬಿತ್ತನೆ ಮಾಡಿದ್ದ ರೈತರಿಗೆ ಮಳೆ ಕೈ ಕೊಟ್ಟ ಹಿನ್ನೆಲೆ ಬೆಳೆ ಒಣಗಿ ಹೋಗ್ತಿವೆ. ಬೆಳೆ ಹಾಳಾಗುವ ಭಯ ರೈತರಲ್ಲಿ#Farmers ಶುರುವಾಗಿದೆ. ಇದೇ ಕಾರಣಕ್ಕೆ ಕಷ್ಟ ಪಟ್ಟು ಬೆಳೆದ ಬೆಳೆ ಕಾಪಾಡಲು ರೈತಾಪಿ ಜನ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

Advertisement
Advertisement
Advertisement

ಸಿದ್ದಾರೆಡ್ಡಿ ಅನ್ನೋ ರೈತ ತಮ್ಮ 15 ಎಕರೆ ಪ್ರದೇಶದಲ್ಲಿ  ಹತ್ತಿ ಗಿಡಗಳ ಬೆಳೆದಿದ್ದಾರೆ. ಮಳೆ ಬಾರದ ಹಿನ್ನೆಲೆ ಹತ್ತಿ ಗಿಡಗಳಿಗೆ ಕೃತಕವಾಗಿ ನೀರು ಉಣಿಸೊ ಕೆಲಸ ಮಾಡಬೇಕಾಗಿದೆ. ಈ ಭಾಗದಲ್ಲಿ ನೀರಿಲ್ಲದ ಹಿನ್ನೆಲೆ ಸಾವಿರಾರು ರೂ ಖರ್ಚು ಮಾಡಿ ಒಂದು ಟ್ಯಾಂಕರ್ ನೀರನ್ನ ತಂದು ಹತ್ತಿ ಗಿಡಗಳಿಗೆ ನೀರು ಉಣಿಸಲಾಗ್ತಿದೆ. ಒಂದು ಎಕರೆಗೆ 10-15 ಆಳುಗಳ ಬೇಕೇಬೇಕು. ಪ್ರತಿ ಆಳಿಗೆ ತಲಾ 400 ನಂತೆ 15 ಆಳುಗಳ ಮೂಲಕ ಟ್ಯಾಂಕರ್ ನಿಂದ ನೀರು ತಂದು ತಂಬಿಗೆಗಳ ಮೂಲಕ 15 ಎಕರೆ ಹೊಲದಲ್ಲಿ ಒಂದೊಂದು ಗಿಡಕ್ಕೂ ನೀರು ಉಣಿಸಲಾಗ್ತಿದೆ. ಒಂದು ಹತ್ತಿ ಗಿಡಕ್ಕೆ ಅರ್ಧ ತಂಬಿಗೆಯಷ್ಟು ನೀರನ್ನ ಹಾಕೋ ಮೂಲಕ ಬೆಳೆ ರಕ್ಷಣೆಗೆ ರೈತ ಸಿದ್ದಾರೆಡ್ಡಿ ಮುಂದಾಗಿದ್ದಾರೆ. ಹೀಗೆ ಅನಿವಾರ್ಯವಾಗಿ ನೀರನ್ನ ಉಣಿಸಬೇಕಿದೆ. ಇದಕ್ಕೆ ಎಕರೆಗೆ ಸರಿಸುಮಾರು ನಾಲ್ಕೈದು ಸಾವಿರ ಖರ್ಚಾಗತ್ತೆ. ಈ ಬಗ್ಗೆ ಹೊಸ ಸರ್ಕಾರ ರೈತರ ಕಾಳಜಿ ಮಾಡಬೇಕಿದೆ ಎಂದು ರೈತರು ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ.

Advertisement

ಬರೀ ಇದಷ್ಟೇ ಅಲ್ಲ ಅನೇಕ ಕಡೆ ಮಳೆಯಿಲ್ಲದ ಹಿನ್ನೆಲೆ ಬಿತ್ತನೆ ಮಾಡಲಾಗಿದ್ದ ಹತ್ತಿ ಬೀಜ ಮೊಳಕೆಯೊಡೆದಿಲ್ಲ. ಮಣ್ಣಲ್ಲೇ ನಾಶವಾಗಿವೆ. ಹೀಗಾಗಿ ಇದೇ ಕೂಲಿ ಆಳುಗಳ ಮೂಲಕ ಎಲ್ಲೆಲ್ಲಿ ಹತ್ತಿ ಬೀಜ ಮೊಳಕೆಯೊಡೆದಿಲ್ವೋ ಅಲ್ಲಲ್ಲಿ ಹೊಸ ಬೀಜಗಳನ್ನ ಹಾಕೋ ಮೂಲಕ ನಾಟಿ ಮಾಡಲಾಗ್ತಿದೆ. ಹೀಗೆ ಮಳೆರಾಯ ಕೈಕೊಟ್ಟ ಹಿನ್ನೆಲೆ ರೈತರು ಕಂಗಾಲಾಗಿದ್ದು ಹೆಚ್ಚುವರಿ ಖರ್ಚು ಮಾಡಿ ಹತ್ತಿ ಗಿಡಗಳಿಗೆ ಕೃತಕವಾಗಿ ನೀರನ್ನ ಉಣಿಸುತ್ತಿದ್ದಾರೆ. ಆದ್ರೆ ಇದಿರಂದ ಒಳ್ಳೆ ಬೆಳೆ ಬರಬಹುದು ಇಲ್ಲಾ ಬಾರದೆಯೂ ಇರಬಹುದು ಅಂತ ದೇವರ ಮೇಲೆ ಭಾರ ಹಾಕಿ ಕೂತಿದ್ದಾರೆ ರೈತರು.

(ಕೃಪೆ : ಅಂತರ್ಜಾಲ)

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗದಗದ ಲಕ್ಕುಂಡಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮಕ್ಕೆ ಚಾಲನೆ
November 25, 2024
7:33 AM
by: The Rural Mirror ಸುದ್ದಿಜಾಲ
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ
November 25, 2024
7:26 AM
by: The Rural Mirror ಸುದ್ದಿಜಾಲ
ಮಲೆನಾಡಿನಲ್ಲಿ ಕಾಡಾನೆ ಹಾವಳಿ ತಡೆಗೆ ಅಧಿವೇಶನದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ
November 25, 2024
7:15 AM
by: The Rural Mirror ಸುದ್ದಿಜಾಲ
ಅಡಿಕೆ ಹಳದಿ ಎಲೆರೋಗ ಬಾಧಿಸಿದ ನಂತರದ ಕೃಷಿ ಬದುಕು ಹೇಗೆ ? ಕೃಷಿಕರು ಸವಾಲನ್ನು ಹೇಗೆ ಸ್ವೀಕರಿಸಬಹುದು..? | ಸಂಪಾಜೆಯ ಕೃಷಿಕ ಶಂಕರಪ್ರಸಾದ್‌ ರೈ ಅವರ ಅಭಿಪ್ರಾಯ |
November 25, 2024
6:52 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror