ಜಾಹೀರಾತು ಮೂಲಗಳು ಕೂಡಾ ಭ್ರಷ್ಟಾಚಾರ ರಹಿತವಾಗಿದ್ದರೆ ಮಾತ್ರವೇ ನಿಜವಾದ ಉದ್ದೇಶ ಸಾಕಾರ | ಶೈಲೇಶ್ ಅಂಬೆಕಲ್ಲು

July 11, 2023
1:26 PM
ಭ್ರಷ್ಟಾಚಾರ ವಿರೋಧಿ ಅಭಿಯಾನಗಳಿಗೆ ನನ್ನ ಬೆಂಬಲ ಇದೆ. ಆದರೆ ಜಾಹೀರಾತು ನೀಡಿದರೆ ಮಾತ್ರವೇ ನ್ಯೂಸ್‌ ಹಾಕುವುದು ಎನ್ನುವುದು ಕೂಡಾ ಭ್ರಷ್ಟಾಚಾರದ ಇನ್ನೊಂದು ಮುಖವಾಗಿದೆ. ಇಂತಹದ್ದಕ್ಕೆ ನನ್ನ ಬೆಂಬಲವಿಲ್ಲ. ಜಾಹೀರಾತು ಇಲ್ಲದೆ ಪತ್ರಿಕೆ ನಡೆಸಲು ಸಾಧ್ಯವಿಲ್ಲ ಎನ್ನುವ ಅರಿವು ಕೂಡಾ ನನಗಿದೆ ಎಂದು ದೇವಚಳ್ಳ ಗ್ರಾಪಂ ಸದಸ್ಯ ಶೈಲೇಶ್‌ ಅಂಬೆಕಲ್ಲು ಹೇಳಿದ್ದಾರೆ.

ಪತ್ರಿಕಾ ಜಾಹೀರಾತು ಬಗ್ಗೆ ತನ್ನ ಹೇಳಿಕೆಯನ್ನು ಮಾಧ್ಯಮವೊಂದು ತಿರುಚಿದೆ. ಪತ್ರಿಕಾ ಜಾಹೀರಾತು ನೀಡಿದರೆ ಮಾತ್ರವೇ ನ್ಯೂಸ್‌ ಹಾಕುತ್ತೇವೆ ಎಂದು ಹೇಳುವುದು ಸರಿಯಲ್ಲ. ಹೀಗಾದರೆ ಸಾಮಾನ್ಯ ಜನರ ಸುದ್ದಿಗಳು ಆದ್ಯತೆ ನೆಲೆಯಲ್ಲಿ ಬರುವುದು  ಹೇಗೆ. ಜಾಹೀರಾತು ನೀಡಿದರೆ ಮಾತ್ರವೇ ನ್ಯೂಸ್‌ ಎನ್ನುವುದು ಕೂಡಾ ಭ್ರಷ್ಟಾಚಾರದ ಇನ್ನೊಂದು ಮುಖವಾಗಿದೆ ಎಂಬುದು ನನ್ನ ನಿಲುವಾಗಿದೆ ಎಂದು ದೇವಚಳ್ಳ ಗ್ರಾಪಂ ಸದಸ್ಯ ಶೈಲೇಶ್‌ ಅಂಬೆಕಲ್ಲು ಹೇಳಿದ್ದಾರೆ.

 

ಜಾಹೀರಾತು ಸಿಗದೆ ಪತ್ರಿಕೆಗಳು ನಡೆಯಲು ಸಾಧ್ಯವಿಲ್ಲ ಎಂಬ ಕನಿಷ್ಟ ಜ್ಞಾನವೂ ನನಗೆ ಇದೆ. ಒಂದು ಪತ್ರಿಕೆ ಹೊರತುಪಡಿಸಿ ಉಳಿದ  ಯಾವ ಪತ್ರಿಕೆಗಳೂ ಜಾಹೀರಾತು ನೀಡಿದರೆ ಮಾತ್ರವೇ ನ್ಯೂಸ್‌ ಹಾಕುತ್ತೇವೆ ಎಂದು ಹೇಳುವುದಿಲ್ಲ. ಜಾಹೀರಾತು ಮೂಲಗಳು ಕೂಡಾ ಭ್ರಷ್ಟಾಚಾರ ರಹಿತವಾಗಿದ್ದರೆ ಮಾತ್ರವೇ ನಿಜವಾದ ಉದ್ದೇಶ ಸಾಕಾರವಾಗಬಹುದು. ಆದರೆ ನನ್ನ ಹೇಳಿಕೆಯನ್ನು ತಿರುಚಿ ಉದ್ದೇಶಪೂರ್ವಕವಾಗಿ ಹಿಂದಿನ ಒಂದು ಪತ್ರಿಕೆ ಹಾಗೂ ಹಿಂದಿನ ಘಟನೆಗಳನ್ನು ಉಲ್ಲೇಖಿಸಿರುವುದೇ ಅವರ ಮಾನಸಿಕತೆಯನ್ನು ತೋರಿಸುತ್ತದೆ. ಜಾಹೀರಾತು ನೀಡದೇ ನ್ಯೂಸ್‌ ಹಾಕುವುದಿಲ್ಲ ಎನ್ನುವ ಧೋರಣೆ ಬದಲಾಗಬೇಕು. ನಾನು ಅಲ್ಲಿ ಮಾತನಾಡಿರುವ ವಿಡಿಯೋ ಚಿತ್ರೀಕರಣವಾಗಿದೆ. ಅದನ್ನು ಎಡಿಟ್‌ ಮಾಡದೆ ಯಥಾವತ್ತಾಗಿ ತೋರಿಸಲಿ ಎಂದು ಸವಾಲು ಹಾಕುತ್ತಿದ್ದೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಗ್ರಾ.ಪಂ.ಸದಸ್ಯ ಶೈಲೇಶ್ ಅಂಬೆಕಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

₹2,500 ಕೋಟಿಗೂ ಅಧಿಕ ತೆರಿಗೆ ವಂಚನೆ ಪತ್ತೆ..! ಅಡಿಕೆ ಆಮದು ಜಾಲದ ಹಿಂದೆ ಏನಿತ್ತು?
August 17, 2026
7:29 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 16-08-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಕಡಿಮೆ – ಉತ್ತರ ಒಳನಾಡಿನಲ್ಲಿ 19 ರಿಂದ ಮಳೆ ಹೆಚ್ಚಳ ಸಾಧ್ಯತೆ
August 16, 2026
12:00 PM
by: ಸಾಯಿಶೇಖರ್ ಕರಿಕಳ
ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ
August 16, 2026
7:30 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 15-08-2026 | ಕರಾವಳಿಯಲ್ಲಿ ಮುಂದಿನ 10 ದಿನವೂ ಮಳೆ ಚದುರಿಕೆ; ಒಳನಾಡಿನಲ್ಲಿ ಆಗಸ್ಟ್ 18–19ರಿಂದ ಮಳೆ ಸಾಧ್ಯತೆ
August 15, 2026
2:07 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror