ದಕ್ಷಿಣ ಕರ್ನಾಟಕದ ಏಳು ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ 2 ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಆದರೆ ಪರಿಸರದ ಮೇಲೆ ಗಂಭೀರ ಹಾನಿ ಉಂಟಾಗುತ್ತಿದ್ದ ಹಿನ್ನಲೆಯಲ್ಲಿ ತಕ್ಷಣವೇ ಕೆಲಸವನ್ನು ನಿಲ್ಲಿಸಿ ಮುಂದಿನ ಹಂತಕ್ಕೆ ಅನುಮತಿಯನ್ನು ನೀಡದಂತೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ.
ಈ ಯೋಜನೆಗಾಗಿ ಪಶ್ಚಿಮ ಘಟ್ಟದ 54 ಹೆಕ್ಟೇರ್ ಅರಣ್ಯ ಪ್ರದೇಶ ಬಳಕೆಯಿಂದ 15,000ಕ್ಕೂ ಹೆಚ್ಚು ಮರಗಳ ಕಡಿತ, ಜೀವ ವೈವಿಧ್ಯತೆಯ ನಾಶ, ಭೂಸವಕಳಿ, ಭೂಕುಸಿತಗಳ ಅಪಾಯ. ಮಾತ್ರವಲ್ಲ ಶರಾವತಿ ಕಣಿವೆಯ ಅಭಯಾರಣ್ಯದಲ್ಲಿ 730 ಸಿಂಹ ಬಾಲದ ಕೋತಿಗಳು ಇರುವುದನ್ನು ವನ್ಯಜೀವಿ ಗಣತಿ ಉಲ್ಲೇಖಿಸಿದೆ. ಇದರ ಆವಾಸ ಸ್ಥಾನಕ್ಕಾಗುವ ಹಾನಿ ಸಿಂಹ ಬಾಲದ ಕೋತಿಗಳ ಉಳಿವಿಗೆ ಗಂಭೀರ ಅಪಾಯ ಉಂಟುಮಾಡುತ್ತದೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ಪಂಪ್ ಸ್ಟೋರೇಜ್ ನಿರ್ಮಾಣಕ್ಕೆ ತಡೆಯನ್ನು ಮಾಡಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

