ಖ್ಯಾತ ಗಾಯಕ ಶಶಿಧರ ಕೋಟೆಯವರಿಗೆ ಪಲ್ಲವಿ ಪ್ರಶಸ್ತಿ ಪ್ರದಾನ

March 30, 2021
10:54 PM

ಸದ್ಗರು ಸಂಗೀತ ಪಾಠ ಶಾಲಾ ವತಿಯಿಂದ ಮಂಗಳೂರಿನ ಶ್ರೀಸುಬ್ರಹ್ಮಣ್ಯ ಸಭಾ ಸದನದಲ್ಲಿ ನಡೆದ  ಶ್ರೀ ಸೀತಾರಾಮ ಕಲ್ಯಾಣೋತ್ಸವ ಸಹಿತ ಸದ್ಗುರು ಶ್ರೀತ್ಯಾಗರಾಜ-ಪುರಂದರ ಉತ್ಸವದಲ್ಲಿ ಹಿರಿಯ ಸಂಗೀತ ವಿದ್ವಾಂಸ ವಿದ್ವಾನ್  ಮಧೂರು ಪಿ. ಬಾಲಸುಬ್ರಹ್ಮಣ್ಯಂ ಮತ್ತು ಖ್ಯಾತ ಗಾಯಕ ವಿದ್ವಾನ್ ಶಶಿಧರ ಕೋಟೆಯವರಿಗೆ ಪಲ್ಲವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಶ್ರೀಸೀತಾರಾಮ ಕಲ್ಯಾಣೋತ್ಸವದ ಸಂಕಲ್ಪದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಶ್ರೀರಾಮಸಂಕೀರ್ತನೆ ನಡೆಯಿತು. ಕಲ್ಯಾಣೋತ್ಸವದ ನಂತರ ಸಂಪ್ರದಾಯದಂತೆ ಶ್ರೀ ತ್ಯಾಗರಾಜರ ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನ ಜರಗಿತು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಹಿರಿಯ ಸಂಗೀತ ವಿದ್ವಾಂಸ ವಿದ್ವಾನ್  ಮಧೂರು ಪಿ. ಬಾಲಸುಬ್ರಹ್ಮಣ್ಯಂ ಮತ್ತು ಖ್ಯಾತ ಗಾಯಕ ವಿದ್ವಾನ್  ಶಶಿಧರ ಕೋಟೆಯವರಿಗೆ ಪಲ್ಲವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ  ಪ್ರದೀಪ ಕುಮಾರ ಕಲ್ಕೂರ, ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್  ವಿನಯ್ ಭಟ್ ಪಿ. ಜೆ., ಹಿರಿಯ ಸಂಗೀತ ವಿದ್ವಾಂಸ ಗಾನಕೇಸರಿ ಕುದುಮಾರ್ ಎಸ್. ವೆಂಕಟ್ರಾಮನ್,  ಕೃಷಿಕ ಸುಬ್ರಹ್ಮಣ್ಯ ಭಟ್ ಕಾವಿನಮೂಲೆ ಹಾಗೂ ಸಂಸ್ಥೆಯ ನಿರ್ದೇಶಕ ವಿದ್ವಾನ್ ಗಣೇಶ್‍ರಾಜ್ ಯಂ. ವಿ. ಉಪಸ್ಥಿತರಿದ್ದರು.

ವಿದ್ವಾನ್ ಗಣೇಶ್‍ರಾಜ್ ಯಂ. ವಿ. ಸ್ವಾಗತಿಸಿ,  ಸತ್ಯನಾರಾಯಣ ಭಟ್ರಕೋಡಿ ಕಾರ್ಯಕ್ರಮ ನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ಬಹುಮುಖ ಪ್ರತಿಭೆಗಳಾದ ಸಿರಿ ಶರ್ಮ, ಪ್ರಣವ್ ಕುಮಾರ್, ಕೃಷ್ಣ ಎಂ. ಎಸ್., ಗೌತಮಿ ಎಸ್. ಹಾಗೂ ದೀಕ್ಷಾ ಉಡುಪ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಯೇನೆಕಲ್ಲು ಬಚ್ಚನಾಯಕ ನಮ್ಮ ಕಾರ್ಣಿಕದ ಆರಾಧ್ಯ ಶಕ್ತಿ
March 31, 2025
8:32 PM
by: ದ ರೂರಲ್ ಮಿರರ್.ಕಾಂ
ಶ್ರೀ ಸಂಗೀತ ಪಾಠಶಾಲೆ | ವಾರ್ಷಿಕೋತ್ಸವ `ಸ್ವರಶ್ರೀ 2025′
February 13, 2025
8:38 PM
by: The Rural Mirror ಸುದ್ದಿಜಾಲ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಡಿ.31 ರಂದು ವಳಲಂಬೆಯಲ್ಲಿ ಯಕ್ಷಗಾನ | ಕಲಾವಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಅವರಿಗೆ ಗೌರವಾರ್ಪಣೆ |
December 28, 2024
7:25 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group