ಹೂವುಗಳೆಂದರೆ ಅದೇನೋ ಹೃದಯ ಬಿರಿಯುವುದು : ಆದರೆ ಈ ಪುಷ್ಪ ತರಬಲ್ಲ ಪುಷ್ಪ ಹೃದಯಾಘಾತಕ್ಕೆ ಕಾರಣವಾಗಬಲ್ಲುದು

October 19, 2023
4:25 PM

ಸಸ್ಯಗಳು ಔಷಧೀಯ ಗುಣಗಳನ್ನು(Medicinal plants) ಹೊಂದಿರುವುದು ಕೇಳಿದ್ದೇವೆ. ಅಪರೂಪಕ್ಕೆ ವಿಷಕಾರಿ ಹೂಗಳ(flower) ಬಗ್ಗೆಯೂ ತಿಳಿದುಕೊಂಡಿದ್ದೇವೆ. ಆದರೆ ಹೂವು ಹೃದಯಾಘಾತಕ್ಕೆ( Heart attack)ಕಾರಣ ಆಗಬಹುದೆಂದು ಅಧ್ಯಯನ ‌ತಿಳಿಸಿಕೊಟ್ಟಿದೆ. ಫಾಕ್ಸ್‌ಗ್ಲೋವ್‌(Foxglove)ಹೂವಿನ ಗಿಡ ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಅಮೆರಿಕದ ವಿಜ್ಞಾನಿಯೊಬ್ಬರು ಎಚ್ಚರಿಸಿದ್ದಾರೆ.

Advertisement
Advertisement

ಹೃದಯವು ಸಾವಿರಾರು ಹೃದಯ ಕೋಶಗಳ ಮೂಲಕ ದೇಹದ ಸುತ್ತಲೂ ರಕ್ತವನ್ನು ಪಂಪ್ ಮಾಡುತ್ತದೆ. ಹೃದಯದ ಮೇಲೆ ಬಲವಾದ ಪರಿಣಾಮ ಬೀರುವ ಡಿಗೋಕ್ಸಿನ್‌ನಂತಹ ಶಕ್ತಿಯುಕ್ತ ಸಂಯುಕ್ತಗಳನ್ನು ಫಾಕ್ಸ್‌ಗ್ಲೋವ್ ಹೊಂದಿದೆ.

Advertisement

ಕಾರ್ಡಿಯಾಕ್ ಗೈಕೋಸೈಡ್‌ಗಳನ್ನು ಉತ್ಪಾದಿಸುವ ಫಾಕ್ಸ್‌ಗ್ಲೋವ್‌ಗಳು ಹೃದಯ ಕೋಶಗಳಲ್ಲಿನ ಸೋಡಿಯಂ, ಪೊಟ್ಯಾಸಿಯಮ್ ಪಂಪ್ ಕಾರ್ಯವನ್ನು ಪ್ರತಿಬಂಧಿಸುತ್ತದೆ. ಇದು ಹೃದಯ ಗಟ್ಟಿಯಾಗಿ ಮತ್ತು ವೇಗವಾಗಿ ಬಡಿದುಕೊಳ್ಳುವಂತೆ ಮಾಡುತ್ತದೆ. ಇದರಿಂದ ಹೃದಯ ಸ್ತಂಭನ ಆಗುವ ಸಾಧ್ಯತೆಗಳಿದೆ ಎಂದು ತಜ್ಞರು ತಿಳಿಸಿದ್ದಾರೆ. ಗುಲಾಬಿ, ನೇರಳೆ, ಬಿಳಿ ಮತ್ತು ಹಳದಿ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಕಾಣಸಿಗುವ ಫಾಕ್ಸ್‌ ಗೋವ ಮೂಲತಃ ಯುರೋಪ್ ಮತ್ತು ಉತ್ತರ ಆಫ್ರಿಕಾದಿಂದ ಈಗ ಅಮೆರಿಕದಾದ ತೋಟಗಳಲ್ಲಿ ಅರಳುವುದನ್ನು ಕಾಣಬಹುದು.

ಗಿಡಮೂಲಿಕೆ ಔಷಧದಲ್ಲಿ ಇತಿಹಾಸ ಹೊಂದಿರುವ ಪಾಕ್ಸ್ ಗ್ಲೋವ್ ಬಗ್ಗೆ ಜನಪ್ರಿಯ ಗಾದೆ ಮಾತಿದೆ. ಫಾಕ್ಸ್‌ ಗ್ಲೋವ್‌ನಿಂದ ಸತ್ತವರನ್ನು ಎಬ್ಬಿಸಬಹುದು ಮತ್ತು ಜೀವಂತವಾಗಿರುವವರನ್ನು ಕೊಲ್ಲಬಹುದು ಎಂದು ಹೇಳುತ್ತಾರೆ. ಹೃದಯಾಘಾತದ ಸಂದರ್ಭದಲ್ಲಿ ಇತರ ಔಷಧ ವಿಫಲವಾದಾಗ ಡಿಗೋಕ್ಸಿನ್ ಅನ್ನು ಪ್ರಾಯೋಗಿಕವಾಗಿ ಸೂಚಿಸಲಾಗುತ್ತದೆ ಎಂದು ಡಾ.ಝನ್ ವಾಂಗ್ ಹೇಳಿದ್ದಾರೆ.

Advertisement

– ಅಂತರ್ಜಾಲ ಮಾಹಿತಿ

An American scientist has warned that the foxglove flower plant can cause heart attacks. The heart pumps blood around the body through thousands of cardiac cells. Foxglove contains powerful compounds like digoxin that have a strong effect on the heart
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ | ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?
May 14, 2024
12:42 PM
by: The Rural Mirror ಸುದ್ದಿಜಾಲ
ಇದು ಮಾರಣ್ಣನ ಕೋಟೆ ಕಣೋ…… | ಸಾರ್ವಜನಿಕರೇ ಎಚ್ಚರ, ತೀರಾ ಅಧೋಗತಿಗೆ ಇಳಿಯುತ್ತಿದೆ ನಮ್ಮ ಸಮಾಜ
May 14, 2024
12:26 PM
by: ವಿವೇಕಾನಂದ ಎಚ್‌ ಕೆ
ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ | ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ
May 14, 2024
12:08 PM
by: The Rural Mirror ಸುದ್ದಿಜಾಲ
ಸಕ್ಕರೆ ತಿನ್ನುವುದಕ್ಕಿಂತ ಶುಗರ್ ಫ್ರೀ ಸೇವನೆ ಹೆಚ್ಚು ಅಪಾಯಕಾರಿ…! |
May 14, 2024
11:56 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror