ಶೇಣಿ, ಸಾಮಗರಂತಹ ಹಿರಿಯರು ಕಟ್ಟಿದ ಮಾತಿನ ಸೌಧದಲ್ಲಿ ನಾವಿದ್ದೇವೆ ಎಂದು ಮರೆಯದಿರೋಣ | ಶೇಣಿ ಸಂಸ್ಮರಣೆಯಲ್ಲಿ ನಾ. ಕಾರಂತ ಪೆರಾಜೆ |

September 12, 2022
9:25 PM

“ಶೇಣಿ ಗೋಪಾಲಕೃಷ್ಣ ಭಟ್ಟರು ಮರಣಿಸಿ ಹದಿನಾರು ವರುಷವಾಯಿತು. ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆಗೆ ಹೊಸ ತಿರುವನ್ನು ನೀಡಿದ ಕಲಾವಿದ. ಪುರಾಣದ ಪಾತ್ರಗಳು ಕೇವಲ ಆರಾಧನೆಗೆ ಇರುವಂತಹುದಲ್ಲ. ಆ ಪಾತ್ರಗಳಿಗೂ ಮನಸ್ಸಿದೆ. ವೈಚಾರಿಕತೆ ಇದೆ. ದ್ವಂದ್ವ ನಿಲುವುಗಳಿವೆ. ಶೇಣಿಯವರ ಮಾಗಧ, ರಾವಣ ಮುಂತಾದ ಖಳ ಪಾತ್ರಗಳ ಮನಸ್ಸುಗಳನ್ನು ಅರ್ಥಗಾರಿಕೆಯ ಮೂಲಕ ತೆರೆದಿಟ್ಟಿದ್ದಾರೆ ಶೇಣಿಯವರು. ಕಲಾವಿದ ಎನ್ನುವ ಪದಕ್ಕೆ ಗೌರವ ತಂದುಕೊಟ್ಟವರು. ಮಾತಿನ ಮಹತ್ತನ್ನು ತೋರಿಸಿಕೊಟ್ಟವರು. ಹೊಸ ತಲೆಮಾರಿಗೆ ಪರಿಚಯಿಸಲು ಚಿಕ್ಕ ಚಿಕ್ಕ ಪ್ರಕಟಣೆಗಳ ಮೂಲಕ ಶೇಣಿಯವರೂ ಸೇರಿದಂತೆ ಅಗಲಿದ ಕಲಾವಿದರ ಪುಸ್ತಿಕೆಯನ್ನು ಪ್ರಕಟಿಸುವ ಅನಿವಾರ್ಯತೆಯಿದೆ.” ಎಂದು ಕಲಾವಿದ, ಅಂಕಣಕಾರ ನಾ. ಕಾರಂತ ಪೆರಾಜೆ ಹೇಳಿದರು.

Advertisement
ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇವರು ಹರಿಕಥಾ ಪರಿಷತ್ ಸಹಯೋಗದೊಂದಿಗೆ ನಡೆದ ಸಮಾರಂಭದಲ್ಲಿ ನಾ. ಕಾರಂತರು ಶೇಣಿಯವರ ಸಂಸ್ಮರಣೆ ಮಾಡಿದರು. “ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್, ಹರಿದಾಸ ರಾಮದಾಸ ಸಾಮಗರಂತಹ ಅನೇಕ ಹಿರಿಯರು ಕಟ್ಟಿದ ಅರ್ಥಗಾರಿಕೆಯೆನ್ನುವ ಸೌಧದಲ್ಲಿ ನಾವೆಲ್ಲಾ ಕುಳಿತಿದ್ದೇವೆ. ತಾನು ಶೇಣಿಯವರ ಶಿಷ್ಯ, ಸಾಮಗರ ಶಿಷ್ಯ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತೇವೆ. ಅದು ಹೌದೇ ಎಂದು ನಮ್ಮನ್ನೇ ಪ್ರಶ್ನಿಸಿಕೊಂಡರೆ ನಮಗೆ ನಾಚಿಕೆಯಾಗಬೇಕು” ಎಂದರು.

ವಿಮಾನ ನಿಲ್ದಾಣ ಪ್ರಾಧಿಕಾರದ ನಿವೃತ್ತ ನಿರ್ದೇಶಕ ಎಂ.ಆರ್.ವಾಸುದೇವ ಅವರು ಅಧ್ಯಕ್ಷತೆ ವಹಿಸಿ ಮನೆಮನೆಗೆ ಹರಿಕಥೆಯನ್ನು ತಲಪಿಸುವ ತಮ್ಮ ಯೋಜನೆಯನ್ನು ವಿವರಿಸಿದರು. ಚೇತನಾ ಆಸ್ಪತ್ರೆಯ ಡಾ.ಶ್ರೀಕಾಂತ ರಾವ್, ಕಾವು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಯಕ್ಷರಂಗ ಪುತ್ತೂರಿನ ಅಧ್ಯಕ್ಷ ಕೆ.ಸೀತಾರಾಮ ಶಾಸ್ತ್ರಿ, ಸುಳ್ಯ ಶ್ರೀ ರಾಘವೇಂದ್ರ ಮಠದ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಜಿ, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಟ್ರಸ್ಟಿನ ಗೌರವ ಸಲಹೆಗಾರ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.

ಟ್ರಸ್ಟಿನ ಪುತ್ತೂರು ಘಟಕದ ಸಂಚಾಲಕ ಭಾಸ್ಕರ ಬಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಪಿ.ವಿ.ರಾವ್ ವಂದಿಸಿದರು. ಕಲಾವಿದೆ  ಶುಭಾ ಜೆ.ಸಿ.ಅಡಿಗ ನಿರ್ವಹಿಸಿದರು. ಕೊನೆಯಲ್ಲಿ ‘ಶ್ರೀರಾಮ ವನಗಮನ’ ಪ್ರಸಂಗದ ತಾಳಮದ್ದಳೆ ಜರುಗಿತು. ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಒಂದು ವಾರಗಳ ಕಾಲ ಜರುಗಿದ ಹರಿಕಥಾ ಸಪ್ತಾಹ ಸಂಪನ್ನವಾಗಿತ್ತು.

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 09-07-2025 | ಇಂದು ಸಾಮಾನ್ಯ ಮಳೆ | ಜುಲೈ 16 ರಿಂದ ಮುಂಗಾರು ದುರ್ಬಲಗೊಳ್ಳಬಹುದಾ ? |
July 9, 2025
1:47 PM
by: ಸಾಯಿಶೇಖರ್ ಕರಿಕಳ
ಜೋಯಿಡಾದ ಗ್ರಾಮದಲ್ಲಿ ಸೇತುವೆ ಕುಸಿತ | ತಾತ್ಕಾಲಿಕ ಕಾಲು ಸಂಕ ನಿರ್ಮಾಣ |
July 9, 2025
10:57 AM
by: The Rural Mirror ಸುದ್ದಿಜಾಲ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶಿಖರ್ ಬಿ.ಕೆ.
July 9, 2025
7:44 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕ್ರಿಶನ್ ಎಸ್ ಭಟ್
July 9, 2025
7:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group