Shiradi Road | ಶಿರಾಡಿ ಘಾಟ್‌ ರಸ್ತೆಯ ಮಹತ್ವದ ಬಗ್ಗೆ ಗಮನ ಸೆಳೆದ ಶಾಸಕ ಸಂಜೀವ ಮಠಂದೂರು |

September 22, 2022
6:17 PM

ಶಿರಾಡಿ ಘಾಟಿ(Shiradi Ghat) ರಸ್ತೆಯ ಮಹತ್ವದ ಬಗ್ಗೆ ಶಾಸಕ ಸಂಜೀವ ಮಠಂದೂರು(Sanjeeva Matandoor) ಅವರು ಸರ್ಕಾರದ ಗಮನ ಸೆಳೆದಿದ್ದಾರೆ. ಕರಾವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರು ಸಂಪರ್ಕ ರಸ್ತೆಯಾಗಿದ್ದರೂ ಶಿರಾಡಿ ಘಾಟಿ ರಸ್ತೆ ಸುವ್ಯವಸ್ಥೆಯ ಬಗ್ಗೆ ಇದುವರೆಗೂ ಗಂಭೀರವಾಗಿ ಸದನದಲ್ಲಿ ಗಮನ ಸೆಳೆದ ಜನಪ್ರತಿನಿಧಿಗಳು ವಿರಳ. ಇದೀಗ ಶಿರಾಡಿ ಘಾಟಿ ಅವ್ಯವಸ್ಥೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ವಿಧಾನ ಸಭೆಯ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

ಮಂಗಳೂರನ್ನು(Mangalore) ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಆನೆಮಹಲು-ಮಾರನಹಳ್ಳಿ ಮಧ್ಯೆ ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ತಿ ಪಡಿಸಿ ಶಾಶ್ವತ ಪರಿಹಾರ ಕಲ್ಪಿಸುವಂತೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ವಿಧಾನ ಸಭೆಯ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಳೆದ 10 ವರ್ಷಗಳಿಂದ ಹದಗೆಟ್ಟಿದೆ. ಮಳೆಗಾಲದಲ್ಲಿ ಪ್ರತೀ ಬಾರಿಯೂ ಮಂಗಳೂರು ಸಂಪರ್ಕ ಕಷ್ಟವಾಗುತ್ತಿದೆ. ತೀರ್ಥಕ್ಷೇತ್ರಗಳಾದ ಸುಬ್ರಹ್ಮಣ್ಯ, ಧರ್ಮಸ್ಥಳಗಳಿಗೆ ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಯಾತ್ರಾರ್ಥಿಗಳಿಗೆ, ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿ ಜಿಲ್ಲೆಯ ಆರ್ಥಿಕತೆಗೆ ಹಿನ್ನಡೆಯಾಗಿದೆ. ಆದ್ದರಿಂದ ಈ ಸಮಸ್ಯೆಗೆ ತಕ್ಷಣ ಶಾಶ್ವತ ಪರಿಹಾರ ಆಗಬೇಕು ಎಂದು  ಶಾಸಕ ಸಂಜೀವ ಮಠಂದೂರು ಅಧಿವೇಶನದಲ್ಲಿ ಗಮನ ಸೆಳೆದರು.

ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಲ್‌ನಲ್ಲಿ ಭಾರಿ ಮಳೆಯಿಂದಾಗಿ ಭೂ ಕುಸಿತ ಉಂಟಾಗಿದ್ದು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದಕ್ಕಾಗಿ ಬದಲಿ ರಸ್ತೆ ನಿರ್ಮಿಸಲು 4.30 ಕೋಟಿ ರೂ ಅನುದಾನ ಬಿಡುಗಡೆಗೊಳಿಸಿ ರಸ್ತೆ ನಿರ್ಮಿಸಲಾಗಿದೆ. ಆದ್ಯತೆ ಮೇರೆಗೆ ನಡೆಯುತ್ತಿದೆ ಎಂದು ತಿಳಿಸಿದರು.

ಕರಾವಳಿ ಜಿಲ್ಲೆಯನ್ನು ಸಂಪರ್ಕಿಸುವ ಶಿರಾಡಿ ಘಾಟಿ ರಸ್ತೆಯ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಸರ್ಕಾರಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕರಾವಳಿ ಹಾಗೂ ರಾಜಧಾನಿ ಬೆಂಗಳೂರು ಸಂಪರ್ಕದ ರಸ್ತೆ ವಾಣಿಜ್ಯ ವಹಿವಾಟಿನ ಪ್ರಮುಖ ರಸ್ತೆಯಾಗಿದೆ. ಶಿರಾಡಿ ರಸ್ತೆ ಹದಗೆಟ್ಟರೆ ಘನ ವಾಹನಗಳ ಓಡಾಟ ಕುಂಠಿತವಾಗುತ್ತದೆ. ಇದರಿಂದ ಆರ್ಥಿಕ ವಹಿವಾಟು ಮೇಲೆ ಹೊಡೆತ ಬೀಳುತ್ತದೆ. ಅನೇಕ ಸಾಗಾಟಗಳು ಕಷ್ಟವಾಗುತ್ತದೆ. ಬಂದರು ನಗರವನ್ನು ಅಭಿವೃದ್ಧಿ ಪಡಿಸಲು ಸಾಕಷ್ಟು ಅವಕಾಶಗಳು ಇದ್ದರೂ , ವಾಣಿಜ್ಯ ವಹಿವಾಟು ಉತ್ತಮಗೊಳ್ಳಲು ಅವಕಾಶ ಇದ್ದರೂ ಶಿರಾಡಿ ಅಡ್ಡಿಯಾಗುತ್ತಿದೆ. ಭಾರೀ ಮಳೆಯಾದರೆ ಶಿರಾಡಿ ಮಾತ್ರವಲ್ಲ ಸಂಪಾಜೆ ಘಾಟಿ, ಚಾರ್ಮಾಡಿಯಲ್ಲಿ ಕೂಡಾ ಘನ ವಾಹನ ಓಡಾಟ ಸ್ಥಗಿತವಾಗುತ್ತಿದೆ. ಹೀಗಾಗಿ ಶಿರಾಡಿ ಘಾಟಿ ರಸ್ತೆ ಅಭಿವೃದ್ಧಿ ಎಂದೋ ಆಗಬೇಕಿತ್ತು. ಆದರೆ ಸರ್ಕಾರಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ನೆನೆಗುದಿಗೆ ಬಿದ್ದಿತ್ತು. ಇದೀಗ ಶಾಸಕ ಸಂಜೀವ ಮಠಂದೂರು ಅವರು ವಿಶೇಷವಾಗಿ ಶಿರಾಡಿ ಘಾಟಿ ಸಮಸ್ಯೆಯ ಕಾರಣದಿಂದ ಬಂದರು ನಗರ, ವಾಣಿಜ್ಯ ವಹಿವಾಟಿನ ಮೇಲೆ ಹೊಡೆತದ ಬಗ್ಗೆ ಇತ್ತೀಚೆಗಿನ ವರ್ಷಗಳಲ್ಲಿ ಸರ್ಕಾರದ ಗಮನ ಸೆಳೆದ ಮೊದಲ ಶಾಸಕರಾಗಿದ್ದಾರೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ. ಆಗುತ್ತದೆ, ನಡೆಯುತ್ತದೆ ಎಂಬ ಭರವಸೆಯಿಂದ ಹೊರಬರಲಿ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ
April 30, 2025
10:29 AM
by: The Rural Mirror ಸುದ್ದಿಜಾಲ
ಗುಡುಗು ಸಿಡಿಲಿನ ಮುನ್ಸೂಚನೆ ಬಗ್ಗೆ ಆಪ್‌ನಲ್ಲಿ ಮಾಹಿತಿ
April 30, 2025
10:18 AM
by: The Rural Mirror ಸುದ್ದಿಜಾಲ
ಸತತ ಸೋಲಿನ ಬಳಿಕ ಪುಟಿದೇಳುವರು ಈ ರಾಶಿಯವರು…!
April 30, 2025
10:02 AM
by: ದ ರೂರಲ್ ಮಿರರ್.ಕಾಂ
ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |
April 29, 2025
9:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group