ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ಸುರಂಗ ಮಾರ್ಗ ರಚನೆಗೆ ಎರಡನೇ ಸಮೀಕ್ಷೆಯಂತೆ ಡಿಪಿಆರ್ 12500 ಕೋಟಿ ರೂ. ಈಗ ಯೋಜನೆಯ ವಿನ್ಯಾಸ ಬದಲಾಗಿದ್ದು, 2024ರಲ್ಲಿ ಕಾಮಗಾರಿ ಆರಂಭವಾಗಲಿದೆ ಎನ್ನುವ ಸುದ್ದಿಯೊಂದು ಬಂದಿದೆ.
ಸಂಸದ ನಳಿನ್ ಕುಮಾರ್ ಕಟೀಲು ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಈ ಸುದ್ದಿಯನ್ನು ಹೇಳಿದ್ದಾರೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಶಿರಾಡಿ ಘಾಟ್‌ನಲ್ಲಿ ಬೃಹತ್ ಸುರಂಗ ಮಾರ್ಗ ನಿರ್ಮಾಣಕ್ಕೆ ಹೊಸ ವಿನ್ಯಾಸ ನೀಡಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಶಿರಾಡಿಯಲ್ಲಿ ಹೆದ್ದಾರಿ ಬದಲು ಪರ್ಯಾಯ ಸುರಂಗ ಮಾರ್ಗ ನಿರ್ಮಿಸಲು ಕೇಂದ್ರ ಸರ್ಕಾರ ಎರಡು ಬಾರಿ ಸಮೀಕ್ಷೆ ನಡೆಸಿದೆ. ಮೊದಲ ಸಮೀಕ್ಷೆಯಂತೆ 3000 ಕೋಟಿ ರೂ.ಗಳ ಡಿಪಿಆರ್ ಮಾಡಲಾಗಿದ್ದು, ಎರಡನೇ ಸಮೀಕ್ಷೆಯಂತೆ ಡಿಪಿಆರ್ 12500 ಕೋಟಿ ರೂ. ಈಗ ಯೋಜನೆಯ ವಿನ್ಯಾಸ ಬದಲಾಗಿದೆ. ಎರಡು ಸ್ಥಳಗಳಲ್ಲಿ ಸುರಂಗ ಮತ್ತು ಇತರ ಪ್ರದೇಶಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುವುದು. ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ 2500 ಕೋಟಿ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ. 2024ರಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ನಳಿನ್ ಕುಮಾರ್ ಕಟೀಲು ಮಾಹಿತಿ ನೀಡಿದ್ದರು.