ಶಿರಾಡಿ ಘಾಟಿಯ ಪ್ರದೇಶದ ದೋಣಿಗಲ್ ಸಮೀಪ ಭೂಕುಸಿತ ಉಂಟಾಗಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ವಾಹನ ಸಂಚಾರ ಆತಂಕಕ್ಕೆ ಒಳಗಾಗಿತ್ತು. ಬಳಿಕ ಭಾರೀ ಮಳೆಯ ಕಾರಣದಿಂದ ಮತ್ತೆ ಅಲ್ಲಲ್ಲಿ ಕುಸಿತ ಉಂಟಾಗಿ ಮಂಗಳೂರು-ಬೆಂಗಳೂರು ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ಶಿರಾಡಿ ಘಾಟ್ ಮೂಲಕ ಮತ್ತೆ ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು ಪರ್ಯಾಯ ರಸ್ತೆ ಮೂಲಕ ಸಂಚರಿಸಲು ಹಾಸನ ಜಿಲ್ಲಾಧಿಕಾರಿ ಗಿರೀಶ್ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಕಾರು, ಜೀಪು, ಟೆಂಪೊ, ಮಿನಿ ವ್ಯಾನ್ ಆಂಬುಲೆನ್ಸ್ ಏಕಮುಖವಾಗಿ ಸಂಚರಿಸಲು ಅವಕಾಶ ನೀಡಲಾಗಿದೆ. ಸಕಲೇಶಪುರ, ಆನೆ ಮಹಲ್, ಕ್ಯಾನಹಳಹಳ್ಳಿ, ಚಿನ್ನಹಳ್ಳಿ, ಕಡಗರಹಳ್ಳಿ ಮಾರ್ಗದಲ್ಲಿ ಮಾರನಹಳ್ಳಿ ತಲುಪಿ ಮಂಗಳೂರಿಗೆ ಹೋಗಲು ಅವಕಾಶ ನೀಡಲಾಗಿದೆ.
DC has issued an Order allowing the movement of Light vehicle on the alternate route of Shiradi Ghat.#shiradighat #landslide pic.twitter.com/cG1FqDIdy0
— theruralmirror (@ruralmirror) July 17, 2022
Advertisement
ಮಂಗಳೂರಿನಿಂದ ಬೆಂಗಳೂರಿಗೆ ಹೋಗೋ ಕಾರು, ಜೀಪು, ಟೆಂಪೊ, ಮಿನಿ ವ್ಯಾನ್ ಗಳು ಮಾರನಹಳ್ಳಿಯಿಂದ ಕಾಡುಮನೆ, ಕಾರ್ಲೆ ಕೂಡಿಗೆ, ಆನೆಮಹಲ್ ಸಕಲೇಶಪುರ ಮಾರ್ಗದ ಮೂಲಕ ಬೆಂಗಳೂರಿಗೆ ಹೋಗಬಹುದು. ಲಘು ವಾಹನಗಳಿಗೆ ಶಿರಾಡಿಘಾಟ್ ನಲ್ಲೇ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.
ಎರಡೂ ಕಡೆಯಿಂದ ಯಾವುದೇ ಸಮಸ್ಯೆ ಆಗದಂತೆ ಏಕ ಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.ಶಿರಾಡಿ ಘಾಟ್ ಪ್ರದೇಶದಲ್ಲಿ ಭಾರೀ ಮಳೆಯ ಕಾರಣದಿಂದ ಭೂಕುಸಿತ ಉಂಟಾಗಿತ್ತು. ಹೀಗಾಗಿ ಜು.14 ರಂದು ಹೆಚ್ಚಿನ ಪ್ರಮಾಣದ ಭೂಕುಸಿತ ಉಂಟಾಗಿ ಘನ ವಾಹನ ಸಂಚಾರ ಬಂದ್ ಆಗಿತ್ತು. ಅದಾದ ಬಳಿಕ ಮತ್ತೆ ಕುಸಿತ ಸಂಭವಿಸಿ ವಾಹನ ಸಂಚಾರ ಬಂದ್ ಆಗಿತ್ತು. ಇದೀಗ ಕೇವಲ ಲಘುವಾಹನಗಳಿಗೆ ಮಾತ್ರ ಪರ್ಯಾಯ ರಸ್ತೆಯ ಮೂಲಕ ಏಕ ಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.