ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿ ಸಮಗ್ರ ಯೋಜನಾ ವರದಿ ತಯಾರಿಸಲು ಕೇಂದ್ರ ಸರ್ಕಾರ ಮತ್ತೆ ಒಪ್ಪಿಗೆ ಸೂಚಿಸಿದೆ.2022 ರಲ್ಲಿ ಈ ಯೋಜನೆ ಸಾಧ್ಯವಿಲ್ಲ ಎಂದು ಹೇಳಿದ್ದ ಸರ್ಕಾರವು ಈಗ ಮತ್ತೆ ಡಿಪಿಆರ್ ರಚಿಸಲು ಒಪ್ಪಿಗೆ ನೀಡಿದೆ.…..ಮುಂದೆ ಓದಿ….
ಶಿರಾಡಿ ಸುರಂಗ ಮಾರ್ಗಕ್ಕೆ ಸಂಬಂಧಿಸಿದಂತೆ ಕಳೆದ 10 ವರ್ಷಗಳಿಂದ ಚರ್ಚೆ ಇದೆ. ಈ ನಡುವೆ ಸುರಂಗ ನಿರ್ಮಾಣಕ್ಕೆ ಭಾರಿ ಮೊತ್ತ ಬೇಕಾಗುತ್ತದೆ ಹಾಗೂ ಇಲ್ಲಿನ ಮಣ್ಣಿನ ತರಗತಿ ಹಾಗೂ ಭೂಕುಸಿದಂತಹ ಕಾರಣಗಳಿಂದ ಈ ಯೋಜನೆ ಸಾಧ್ಯವಿಲ್ಲ ಎಂದು 2022ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಲೋಕಸಭೆಗೆ ಉತ್ತರ ನೀಡಿದ್ದರು. ಆದರೆ ಇದೀಗ, ಸುರಂಗ ನಿರ್ಮಾಣಕ್ಕೆ ಒಪ್ಪಿಗೆ ನೀಡುವಂತೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಈ ಮನವಿಯ ಬೆನ್ನಲ್ಲೇ ಡಿಪಿಆರ್ ತಯಾರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ವರದಿಯಾಗಿದೆ.
ಈ ಯೋಜನೆಯ ಪ್ರಕಾರ ಶಿರಾಡಿಯ ಅಡ್ಡಹೊಳೆಯಿಂದ ಮಾರನಹಳ್ಳಿಯವರೆಗೆ ಸುರಂಗ ಮಾರ್ಗದ ಸುಮಾರು 30 ಕಿಮೀ ಉದ್ದದ ಯೋಜನೆ ಇದಾಗಿದೆ. ಇದರಲ್ಲಿ ಸುಮಾರು 4 ಕಿಮೀ ಸುರಂಗ ಮಾರ್ಗವು ಒಳಗೊಳ್ಳುತ್ತದೆ. ಆದರೆ ಶಿರಾಡಿ ಘಾಟಿಯು ಅರಣ್ಯದಿಂದ ಕೂಡಿದೆ ಮತ್ತು ಭೂಕುಸಿತದಂತಹ ಕಾರಣಗಳಿಂದ ಈ ಯೋಜನೆಗೆ ಸಾಕಷ್ಟು ಪರ ಹಾಗೂ ವಿರೋಧ ಚರ್ಚೆಯಾಗಿತ್ತು.