ಶಿರೂರು ಗುಡ್ಡ ಕುಸಿತ ಪ್ರಕರಣ | ನದಿಯಲ್ಲಿ ತೇಲಿ ಹೋಗಿದ್ದ ಗ್ಯಾಸ್ ಟ್ಯಾಂಕರ್‌ನಿಂದ ನೀರು, ಗಾಳಿಯಲ್ಲಿ 18 ಕ್ವಿಂಟಲ್ ಗ್ಯಾಸ್ ಹೊರಕ್ಕೆ

July 19, 2024
11:18 AM
ಉತ್ತರ ಕನ್ನಡ ಜಿಲ್ಲೆಯ (Uttara kannada) ಅಂಕೋಲಾ ತಾಲೂಕಿನ ಶಿರೂರು(Shirur) ಬಳಿ ಕುಸಿದಿದ್ದ ಗುಡ್ಡ(Land slide) ತೆರವು ಕಾರ್ಯಾಚರಣೆ 4ನೇ ದಿನಕ್ಕೆ ಕಾಲಿಟ್ಟಿದೆ. ಈವರೆಗೆ ಆರು ಜನರ ಶವ ಪತ್ತೆಯಾಗಿವೆ. ಈ ಮಧ್ಯೆ ಶಿರೂರು ಗುಡ್ಡ ಕುಸಿತದ ರಭಸಕ್ಕೆ ಹೆದ್ದಾರಿಯಿಂದ ಗಂಗಾವಳಿ ನದಿಗೆ ಉರುಳಿಬಿದ್ದು ಸಡಗೇರಿ ಬಳಿ ಕೊಚ್ಚಿ ಹೋಗಿದ್ದ ಎಚ್.ಪಿ.ಗ್ಯಾಸ್ ಟ್ಯಾಂಕರ್​ನಿಂದ(Gas Tanker) ಗ್ಯಾಸ್ ಹೊರಬಿಟ್ಟು ಖಾಲಿ(Gas leakage) ಮಾಡುವ ಕಾರ್ಯಾಚರಣೆ ನಡೆಯುತ್ತಿದೆ. ಘಟನೆ ನಡೆದ ಸ್ಥಳದಿಂದ ಹಲವು ಕಿ.ಮೀಗಳಷ್ಟು ನದಿಯಲ್ಲಿ ತೇಲಿ ಹೋಗಿದ್ದ ಟ್ಯಾಂಕರ್ ಅನ್ನು ಸಗಡಗೇರಿಯ ಸಮೀಪದಲ್ಲಿ ನಿಲ್ಲಿಸಲಾಗಿದೆ. ಕೋಸ್ಟ್ ಗಾರ್ಡ್(Coast Guards) ಸಮ್ಮುಖದಲ್ಲಿ ಕಂಪೆನಿಯ ತಜ್ಞರು ಟ್ಯಾಂಕರ್​ನಲ್ಲಿದ್ದ 18 ಕ್ವಿಂಟಲ್ ಗ್ಯಾಸ್ ಹೊರಬಿಡುತ್ತಿದ್ದಾರೆ. ಶೇ 60ರಷ್ಟು ಗ್ಯಾಸ್ ಅನ್ನು ನದಿಗೆ ಬಿಡಲಾಗುತ್ತಿದೆ.
ಶಿರೂರು ಗುಡ್ಡ ಕುಸಿತದ ರಭಸಕ್ಕೆ ಹೆದ್ದಾರಿಯಿಂದ ಗಂಗಾವಳಿ ನದಿಗೆ ಉರುಳಿಬಿದ್ದು ಸಡಗೇರಿ ಬಳಿ ಕೊಚ್ಚಿ ಹೋಗಿದ್ದ ಎಚ್.ಪಿ.ಗ್ಯಾಸ್ ಟ್ಯಾಂಕರ್​ನಿಂದ ಗ್ಯಾಸ್ ಹೊರಬಿಟ್ಟು ಖಾಲಿ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ. ಘಟನೆ ನಡೆದ ಸ್ಥಳದಿಂದ ಹಲವು ಕಿ.ಮೀಗಳಷ್ಟು ನದಿಯಲ್ಲಿ ತೇಲಿ ಹೋಗಿದ್ದ ಟ್ಯಾಂಕರ್ ಅನ್ನು ಸಗಡಗೇರಿಯ ಸಮೀಪದಲ್ಲಿ ನಿಲ್ಲಿಸಲಾಗಿದೆ.
ಕೋಸ್ಟ್ ಗಾರ್ಡ್ ಸಮ್ಮುಖದಲ್ಲಿ ಕಂಪೆನಿಯ ತಜ್ಞರು ಟ್ಯಾಂಕರ್​ನಲ್ಲಿದ್ದ 18 ಕ್ವಿಂಟಾಲ್ ಗ್ಯಾಸ್ ಹೊರಬಿಡುತ್ತಿದ್ದಾರೆ. ಶೇ 60ರಷ್ಟು ಗ್ಯಾಸ್ ಅನ್ನು ನದಿಗೆ ಬಿಡಲಾಗುತ್ತಿದೆ.ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್, ಎಸ್​ಡಿಆರ್​ಎಫ್, ಎನ್‌ಡಿಆರ್‌ಎಫ್, ಹೆಚ್​ಪಿ ಕಂಪನಿಯ ಸಿಬ್ಬಂದಿ, ವೈದ್ಯಕೀಯ ತಂಡದವರು ಸ್ಥಳದಲ್ಲಿದ್ದಾರೆ. ಟ್ಯಾಂಕರ್​ನಲ್ಲಿರುವ ಗ್ಯಾಸ್ ಅನ್ನು ಮೀಟರ್ ಮಾಪನನಿಂದ ಅಳೆದು ನದಿ ಹಾಗೂ ಗಾಳಿಯಲ್ಲಿ ಬಿಡಲಾಗುತ್ತಿದೆ.  ಸಗಡಗೇರಿ ಗ್ರಾಮದ 34 ಕುಟುಂಬಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಮೊಬೈಲ್, ವಾಹನ ಸಂಚಾರ, ಒಲೆ ಉರಿಸುವುದು, ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಊರಿನ ಸುತ್ತ ಡಂಗೂರ ಕೂಡಾ ಸಾರಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡ್ಡ ಕುಸಿದು 20ಕ್ಕೂ ಹೆಚ್ಚು ಜನರು ಮೃತರಾಗಿರುವ ಬಗ್ಗೆ ಶಂಕೆ ವ್ಯಕ್ತ ಆಗುವುದರ ಜೊತೆಗೆ ಇನ್ನಷ್ಟು ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಘಟನಾ ಸ್ಥಳಕ್ಕೆ ತಜ್ಞರು ಭೇಟಿ ನೀಡಲಿದ್ದಾರೆ. ಜಿಯೋಗ್ರಾಫಿಕಲ್ ಸರ್ವೇ ಆಫ್ ಇಂಡಿಯಾ ತಜ್ಞ ಸಂಜೀವ್ ಎಂಬವರು ಭೂಕುಸಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೇ ಗುಡ್ಡ ಕುಸಿತ ಆಗಿರುವ ಬಗ್ಗೆ ಬಹಳಷ್ಟು ಚರ್ಚೆ ಆಗುತ್ತಿದೆ. ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿದ್ದರಿಂದ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಭೂ ಕುಸಿತದ ಬಗ್ಗೆ ಅಧ್ಯಯನ ಮಾಡಲಿದೆ.

Advertisement
  • ಅಂತರ್ಜಾಲ ಮಾಹಿತಿ

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 06.07.2025 | ಮುಂದಿನ 10 ದಿನಗಳ ಕಾಲ ಹೇಗಿರಬಹುದು ಹವಾಮಾನ?
July 6, 2025
5:10 PM
by: ಸಾಯಿಶೇಖರ್ ಕರಿಕಳ
2047 ರ ವೇಳೆಗೆ ಕೇಂದ್ರ ಸರ್ಕಾರದಿಂದ 32 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ
July 6, 2025
10:40 AM
by: ದ ರೂರಲ್ ಮಿರರ್.ಕಾಂ
ತುಂಗಾ, ಭದ್ರಾ ಜಲಾಶಯಗಳಿಂದ ಯಾವುದೇ ಕ್ಷಣದಲ್ಲಿ ನೀರು ಬಿಡುಗಡೆ ಸಾಧ್ಯತೆ | ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ
July 6, 2025
10:34 AM
by: ದ ರೂರಲ್ ಮಿರರ್.ಕಾಂ
ವೇಗವಾಗಿ ಬೆಳೆಯುವ ಮರ ಹವಾಮಾನ ವೈಪರೀತ್ಯಕ್ಕೆ ಪರಿಹಾರ | ಕೃಷಿ ಅರಣ್ಯೀಕರಣಕ್ಕೆ ಬೆಂಬಲ – ಕೃಷಿ ಆದಾಯ ಹೆಚ್ಚಿಸಲೂ ಸಲಹೆ |
July 6, 2025
10:20 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group