ಸಾವಿರಾರು ವರ್ಷಗಳ ಇತಿಹಾಸವಿರುವ ದೇವನಹಳ್ಳಿ ಪಟ್ಟಣದ ಪುಟ್ಟಪ್ಪನ ಗುಡುಬೀದಿಯಲ್ಲಿರುವ ಕಲ್ಯಾಣಿಯನ್ನು ಸ್ವಚ್ಛಗೊಳಿಸುವ ವೇಳೆ ಶಿವಲಿಂಗ ಪ್ರತ್ಯಕ್ಷವಾಗಿದೆ. ಶ್ರೀ ಪೀತಾಂಬರ ಆಂಜನೆಯ ಸ್ವಾಮೀ ದೇವಾಲಯಕ್ಕೆ ಸೇರಿರುವ ಕಲ್ಯಾಣಿ ಇದಾಗಿದೆ. ಲಿಂಗಕ್ಕೆ ಸ್ಥಳೀಯ ಮಹಿಳೆಯರು ಪೂಜೆಯನ್ನು ಸಲ್ಲಿಸಿದರೆ. ಮಾತ್ರವಲ್ಲ, ಪವಾಡ ಎಂಬಂತೆ ಶಿವಲಿಂಗ ಪತ್ತೆಯಾದ ಸ್ಥಳದಲ್ಲಿ ನೀರು ಉಕ್ಕಿ ಬರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಶಿವಲಿಂಗ ಪ್ರತ್ಯಕ್ಷವಾದ ವಿಷಯ ತಿಳಿದು ಅಕ್ಕ-ಪಕ್ಕ ಸ್ಥಳಗಳಿಂದ ಬಂದ ಸ್ಥಳೀಯರು ದೇವರ ದರ್ಶನ ಪಡೆಯುತ್ತಿದ್ದಾರೆ. ಅಲ್ಲದೇ ಕಲ್ಯಾಣಿ ಮತ್ತು ಶಿವಲಿಂಗವನ್ನ ಸಂರಕ್ಷಣೆ ಮಾಡುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

