“ಮನುಷ್ಯ ಎಷ್ಟು ಕಲಿತರೂ ಕಲಿಯ ಬೇಕಾದ್ದು ಬಹಳವಿದೆ ” ಎಂದು ಪ್ರಬಲವಾಗಿ ನಂಬಿದ್ದ ಕಾರಂತರಿಗೇ ಬದುಕೇ ಒಂದು ಪಾಠ ಶಾಲೆಯಾಗಿತ್ತು. ಅವರೋ ನಡೆದಾಡುವ ವಿಶ್ವಕೋಶವೇಂದೇ ಗುರುತಿಸಿ ಕೊಂಡವರು.
ಒಬ್ಬ ಸಾಮಾನ್ಯ ಮನುಷ್ಯ ಪ್ರಯತ್ನಿಸಿದರೆ ಏನೆಲ್ಲಾ ಮಾಡ ಬಹುದು ಎಂಬುದಕ್ಕೆ ಉದಾಹರಣೆ ಶಿವರಾಮ ಕಾರಂತರು. ಅವರು ಕೈಯಾಡಿಸದ ಕ್ಷೇತ್ರವೇ ಇಲ್ಲ. ಸಾಹಿತ್ಯದಲ್ಲಿ, ವಿಜ್ಞಾನ ಕ್ಷೇತ್ರದಲ್ಲಿ, , ಸಾಮಾಜಿಕ, ಅನುವಾದ, ಕ್ಷೇತ್ರ, ನೃತ್ಯ, ಯಕ್ಷಗಾನ ಅದರಲ್ಲೂ ಬ್ಯಾಲೆಯ ಪ್ರಯೋಗ ಹೀಗೆ ಆಕಾಶ, ಭೂಮಿ ಎಲ್ಲವೂ ಕಾರಂತರ ಕಾರ್ಯಕ್ಷೇತ್ರವೆಂದರೆ ಉತ್ಪ್ರೇಕ್ಷೆಯಲ್ಲ.
ಶಿವರಾಮ ಕಾರಂತರು ಒಬ್ಬ ವಿಶ್ವ ಪ್ರಸಿದ್ಧ ವ್ಯಕ್ತಿಯಾದರೂ ಕೈಗೆಟುಗದ ವ್ಯಕ್ತಿಯೆಂದು ಯಾವತ್ತೂ ಅನಿಸಿಲ್ಲ.ನಮ್ಮ ನಿಮ್ಮ ಊರಲ್ಲಿ ಸಂಜೆಯ ಹೊತ್ತಲ್ಲೋ, ಮುಂಜಾನೆಯ ಸಮಯದಲ್ಲೋ ವಾಕಿಂಗ್ ಸ್ಟಿಕ್ ಹಿಡಿದು ನಡೆದು ಕೊಂಡು ಹೋಗುತ್ತಿರುವ ಅಜ್ಜನಂತೆ ಅನಿಸುತ್ತದೆ . ಬಹುಶಃ ಅವರು ನಮ್ಮ ಪುತ್ತೂರಿನಲ್ಲಿ ಇದ್ದರು ಎಂಬ ಕಾರಣಕ್ಕೋ ಅಥವಾ ನಮ್ಮ ಬಾಳಿಲ ವಿದ್ಯಾಬೋಧಿನಿ ಸಂಸ್ಥೆ ಗಳಿಗೆ ಭೇಟಿ ಕೊಟ್ಟಿದ್ದರು ಎಂಬ ಕಾರಣಕ್ಕೋ , ನಮ್ಮ ಮನೆಗೂ ಒಮ್ಮೆ ಭೇಟಿ ಕೊಟ್ಟಿದ್ದರು ಎಂಬ ಅಭಿಮಾನದಿಂದಲೋ, ಅವರ ಕೆಲವು ಪುಸ್ತಕ ಗಳನ್ನೂ ಓದಿದುದರಿಂದಲೋ ಗೊತ್ತಿಲ್ಲ. ಕಾರಂತಜ್ಜನೆಂದರೆ ಮನಸಿಗೆ ತುಂಬಾ ಇಷ್ಟವಾಗುವವರು. ಹತ್ತಿರದವರೆನಿಸುತ್ತದೆ.
10 ಅಕ್ಟೋಬರ್ 1902 ರಲ್ಲಿ ಶಿವರಾಮ ಕಾರಂತರು ಸಾಲಿಗ್ರಾಮ ದಲ್ಲಿ ಜನಿಸಿದರು. ಇವರ ತಂದೆ ಶೇಷ ಕಾರಂತರು, ತಾಯಿ ಲಕ್ಷ್ಮೀ. ಇವರು ಸುಮಾರು 427 ಪುಸ್ತಕಗಳನ್ನು ರಚಿಸಿದ್ದಾರೆ. ಅವುಗಳಲ್ಲಿ 47 ಕಾದಂಬರಿಗಳು. ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪುರಸ್ಕಾರ ಲಭಿಸಿದೆ. 50 ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ.
ನಿರಂತರ ಪ್ರಯೋಗಶಿಲರಾಗಿದ್ದರು. ಮೂಕಿ ಸಿನೆಮಾ ಡೊಮಿಂಗೋವನ್ನು1930 ರಲ್ಲೇ ನಿರ್ದೇಶಿಸಿ ಅಭಿನಯಿಸಿದ್ದರು.
ಪುಸ್ತಕದ ಮುಖಪುಟಕ್ಕೆ ತಾನೇ ಚಿತ್ರಬರೆದು ಪ್ರಕಟಿಸಿದ ಕನ್ನಡದ ಪ್ರಮುಖ ಸಾಹಿತಿ ಇವರೊಬ್ಬರೇ. 1959 ರಿಂದ 1964 ರ ಅವಧಿಯಲ್ಲಿ ಅಕ್ಷರ ಲೋಕದಲ್ಲಿ ಒಂದು ಮಹತ್ವ ಕ್ರಾಂತಿಕಾರಕ ಕೊಡುಗೆ ಕೊಟ್ಟವರು ಕಾರಂತರು . ಈ ಜಗತ್ತು, ಜೀವ ಜೀವನ, ವಸ್ತು ಚೈತನ್ಯ, ವಿಜ್ಞಾನ ಸಾಧನಗಳು. ಹೀಗೆ ನಾಲ್ಕು ಮಹತ್ವದ, ಅಪೂರ್ವವಾದ ಬೃಹತ್ ಸಂಪುಟಗಳ ಕೊಡುಗೆ ಕೊಟ್ಟವರು ಕಾರಂತರು.
ಮಕ್ಕಳ ಕುತೂಹಲ ಕಾರಿ ಪ್ರಶ್ನೆಗಳಿಗೆ ಉತ್ತರಗಳು ಈ ಸಂಪುಟಗಳಲ್ಲಿ ಲಭ್ಯವಿವೆ. ಒಂದಕ್ಕಿಂತ ಒಂದು ವಿಭಿನ್ನ ರಚನೆಗಳು . ಅವರ ಪ್ರತಿಭೆಗೆ ಸಿಕ್ಕಿದ ಪ್ರಶಸ್ತಿ ಗಳು ಕಮ್ಮಿಯೇ. ಅವರು ತಮ್ಮ96 ನೇ ವಯಸ್ಸಿನಲ್ಲಿ ಹಕ್ಕಿಗಳ ಕುರಿತು ಒಂದು ಪುಸ್ತಕ ರಚಿಸಿ ಪ್ರಕಟಿಸಿದ್ದು ಇಂದಿಗೂ ಒಂದು ದಾಖಲೆಯೇ ಆಗಿದೆ. ಅಂತಹ ಮಹಾ ಪುರುಷರ ಜನುಮ ದಿನ ಅಕ್ಟೋಬರ್ 10. ಅವರ ಪುಸ್ತಕವೊಂದನ್ನು ಓದುವುದರ ಮೂಲಕ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳೋಣವಲ್ಲವೇ?
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…