ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಚಾರ್ಮಾಡಿಯಲ್ಲಿ ಪಾದಯಾತ್ರಿಗಳನ್ನು ಭೇಟಿಯಾಗಿ ಯೋಗ-ಕ್ಷೇಮ ವಿಚಾರಿಸಿದರು.
ಶಿವರಾತ್ರಿ ಪ್ರಯುಕ್ತ ನಾಡಿನ ವಿವಿದೆಡೆಯಿಂದ ಪಾದಯಾತ್ರೆಯನ್ನು ಭಕ್ತಾದಿಗಳು ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸಾವಿರಾರು ಭಕ್ತಾದಿಗಳು ಧರ್ಮಸ್ಥಳದ ಕಡೆಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಚಾರ್ಮಾಡಿಯಲ್ಲಿ ಪಾದಯಾತ್ರಿಗಳನ್ನು ಭೇಟಿಯಾದರು. ಧರ್ಮಸ್ಥಳಕ್ಕೆ ಬರುವ ಮಾರ್ಗದದಲ್ಲಿ ಸ್ವಚ್ಛತೆ ಮತ್ತು ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.
ಧರ್ಮಸ್ಥಳದಲ್ಲಿ ಎಸ್.ಐ. ಅನಿಲ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಪಾದಯಾತ್ರಿಗಳಿಗೆ ಸಕಾಲಿಕ ಮಾಹಿತಿ, ಮಾರ್ಗದರ್ಶನ ನೀಡಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel