ಮಹಾಶಿವರಾತ್ರಿ ಪಾದಯಾತ್ರೆ | ಶಿರಾಡಿ ಮತ್ತು ಚಾರ್ಮಾಡಿ ಘಾಟಿಯಲ್ಲಿ ಮುನ್ನೆಚ್ಚರಿಕೆ | ಭಕ್ತಾದಿಗಳು ಜಾಗೃತೆ ವಹಿಸಲು ಅರಣ್ಯ ಇಲಾಖೆಯ ಕರೆ |

ಮುಂಬರುವ ಮಾರ್ಚ್ 1 ರಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಭಕ್ತಾದಿಗಳು ಶಿರಾಡಿ ಮತ್ತು ಚಾರ್ಮಾಡಿ ಘಾಟ್ ಪ್ರದೇಶದ ರಸ್ತೆಗಳಲ್ಲಿ ಪಾದಾಯಾತ್ರೆ ಕೈಗೊಳ್ಳುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಫೆ.27 ರಿಂದ ಮಾರ್ಚ್ 2ರ ವರೆಗೆ ಅರಣ್ಯ ಇಲಾಖೆಯಿಂದ ಜಾಗೃತಿ ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Advertisement
Advertisement

ಕಾಡಾನೆಗಳ ಸಮಸ್ಯೆಗಳು ಇರುವುದರಿಂದ ಎಲ್ಲರೂ ಜಾಗರೂಕರಾಗಿರಬೇಕು, ಈ ಭಾಗದಲ್ಲಿ ಸಂಚರಿಸುವಾಗ ಎಚ್ಚರಿಕೆಯಿಂದ ಹಾಗೂ ಗುಂಪು ಗುಂಪಾಗಿ ಸಂಚರಿಸಬೇಕು, ಅಗತ್ಯವಿದ್ದಲ್ಲಿ ರಸ್ತೆ ಬದಿಯಲ್ಲಿ ಹಾಕಿರುವ ಅರಣ್ಯ ಇಲಾಖೆಯ ಸ್ಟಾಲ್‍ಗಳಲ್ಲಿ ಸಿಬ್ಬಂದಿಗಳ ಅಥವಾ ಸ್ವಯಂಸೇವಕರ ನೆರವು ಪಡೆಯಬಹುದಾಗಿದೆ, ರಸ್ತೆ ಬದಿಗಳಲ್ಲಿ ಅಳವಡಿಸಿರುವ ಸೂಚನಾ ಫಲಕಗಳ ಮಾಹಿತಿಯನ್ನು ತಿಳಿದುಕೊಳ್ಳಬೇಕು, ರಸ್ತೆ ಬದಿಗಳಲ್ಲಿ ನಿಯೋಜಿಸಲಾಗಿರುವ ಇಲಾಖೆಯ ಸ್ವಯಂ ಸೇವಕರು ಮತ್ತು ಅರಣ್ಯ ಸಿಬ್ಬಂದಿಗಳಿಗೆ ಸಹಕಾರ ನೀಡಬೇಕು ಹಾಗೂ ಯಾವುದೇ ರೀತಿಯ ಅವಘಡಗಳು ಸಂಭವಿಸಿದಂತೆ ಎಚ್ಚರ ವಹಿಸಬೇಕು, ರಸ್ತೆ ಬದಿಗಳಲ್ಲಿ ಘನತ್ಯಾಜ್ಯವನ್ನು ಎಸೆಯಬಾರದು, ಖಾಲಿಯಾದ ಪ್ಲಾಸ್ಟಿಕ್ ನೀರಿನ ಬಾಟಲಿಗಳು, ತಿಂಡಿಗಳ ಪೊಟ್ಟಣಗಳನ್ನು ಕಸದ ತೊಟ್ಟಿಗಳಲ್ಲಿಯೇ ಹಾಕಿ ಪರಿಸರ ಮಾಲಿನ್ಯವನ್ನು ಕಾಪಾಡಬೇಕು, ರಾತ್ರಿಯಲ್ಲಿ ರಸ್ತೆ ಬದಿಯಲ್ಲಿ ಬೆಂಕಿ ಮಾಡುವುದನ್ನು ತಪ್ಪಿಸಿ, ಕಾಡಿಗೆ ಬೆಂಕಿ ಹರಡುವುದನ್ನು ತಡೆಗಟ್ಟಲು ಸಹರಿಸಬೇಕು, ಕತ್ತಲಾದ ನಂತರ ರಾತ್ರಿ ವೇಳೆಯಲ್ಲಿ ಪಾದಯಾತ್ರೆಯನ್ನು ಮುಂದುವರಿಸದೇ ಇರುವುದು ಸೂಕ್ತ, ಸ್ಟಾಲ್‍ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದು, ಅದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Be the first to comment on "ಮಹಾಶಿವರಾತ್ರಿ ಪಾದಯಾತ್ರೆ | ಶಿರಾಡಿ ಮತ್ತು ಚಾರ್ಮಾಡಿ ಘಾಟಿಯಲ್ಲಿ ಮುನ್ನೆಚ್ಚರಿಕೆ | ಭಕ್ತಾದಿಗಳು ಜಾಗೃತೆ ವಹಿಸಲು ಅರಣ್ಯ ಇಲಾಖೆಯ ಕರೆ |"

Leave a comment

Your email address will not be published.


*