#ಶಿವರಾತ್ರಿ | ಹೊಸನಗರದಲ್ಲಿ ನಡೆದ ಅಪರೂಪದ ಸೋಮ ಸಪರ್ಯಾ | 2500 ಕ್ಕೂ ಅಧಿಕ ಮಂದಿಯಿಂದ ರುದ್ರ ಪಠಣ | ಶ್ರೀ ಚಂದ್ರಮೌಳೀಶ್ವರನಿಗೆ ರಾಘವೇಶ್ವರ ಶ್ರೀಗಳಿಂದ ವಿಶೇಷ ಪೂಜೆ |

March 1, 2022
2:39 PM

ಲೋಕ ಕಲ್ಯಾಣಾರ್ಥವಾಗಿ ಶಿವಮೊಗ್ಗ ಜಿಲ್ಲೆ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಅತ್ಯಪರೂಪದ ಸೋಮ ಸಪರ್ಯಾ ಪೂಜೆಯು ಸೋಮವಾರ ಸಂಜೆ ಪ್ರದೋಷ ಕಾಲದಲ್ಲಿ ನಡೆಯಿತು. 2500 ಕ್ಕೂ ಅಧಿಕ ರುದ್ರಪಾಠಕರಿಂದ ಏಕಕಂಠದಲ್ಲಿ ಶ್ರೀರುದ್ರಪಠಣ ನಡೆಯುತ್ತಿರಬೇಕಾದರೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಶ್ರೀ ಚಂದ್ರಮೌಳೀಶ್ವರ ದೇವರಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿದರು.

Advertisement

ಮೂರು ವರ್ಷಗಳಿಂದ ವಿಶ್ವದ ಎಲ್ಲೆಡೆಯ ಆತಂಕದ ಸ್ಥಿತಿಗೆ ಜನರಿಗೆ ನೆಮ್ಮದಿಯ ಜೀವನ ಬೇಕಿದೆ. ಎಲ್ಲ ಆತಂಕಗಳು ದೂರವಾಗಿ ನೆಮ್ಮದಿ ದೊರೆಯಲೆಂಬ ಸದಾಶಯದೊಂದಿಗೆ ಶ್ರೀ ರಾಘವೇಶ್ವರ ಭಾರತೀಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಈ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು. ಶರಾವತಿ ತೀರದಲ್ಲಿರುವ ಶ್ರೀ ಚಂದ್ರಮೌಳೀಶ್ವರನಿಗೆ ಶ್ರೀ ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರು ವಿಶೇಷ ಪೂಜೆ ನಡೆಸಿದರು. ಗಂಗಾಜಲ ಹಾಗೂ ವಿವಿಧ ದ್ರವ್ಯಗಳ ಅಭಿಷೇಕ, ರಜತ ಮತ್ತು ಸುವರ್ಣ ಪುಷ್ಪಗಳ ಅಭಿಷೇಕ ನಡೆಸಿದರು. ಪ್ರದೋಷ ಕಾಲದಲ್ಲಿ ನಡೆಯುವ ಈ ಪೂಜೆಗೆ ಸೋಮ ಸಪರ್ಯಾ ಎಂದು ಹೇಳಲಾಗುತ್ತದೆ.

ಕಾರ್ಯಕ್ರಮದಲ್ಲಿ  ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಆರ್.ಎಸ್.ಎಸ್ ಪ್ರಮುಖರಾದ ಡಾ.ಕಲ್ಲಡ್ಕ ಪ್ರಭಾಕರ್ ಭಟ್, ಹೊರನಾಡು ದೇವಾಲಯದ ಧರ್ಮದರ್ಶಿಗಳಾದ  ಭೀಮೇಶ್ವರ ಜೋಶಿ,  ಶಾಸಕರಾದ  ಹರತಾಳು ಹಾಲಪ್ಪ, ಕುಂದಾಪುರದ ಶಾಸಕರಾದ  ಸುಕುಮಾರ ಶೆಟ್ಟಿ, ಆರ್‌ ಎಸ್‌ ಎಸ್‌ ಪ್ರಮುಖರಾದ ಪ್ರಕಾಶ್‌ ಮೊದಲಾದವರು ಭಾಗವಹಿಸಿದ್ದರು.

Koo App

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆಗೆ ಪ್ರಧಾನಿ ಕರೆ
April 10, 2025
7:46 AM
by: ದ ರೂರಲ್ ಮಿರರ್.ಕಾಂ
ರೆಪೋ ದರದಲ್ಲಿ ಶೇಕಡ  0.25ರಷ್ಟು  ಕಡಿತ | ಶೇಕಡ 6.25ರಿಂದ ಶೇಕಡ 6ಕ್ಕೆ  ಇಳಿಕೆ
April 10, 2025
7:35 AM
by: The Rural Mirror ಸುದ್ದಿಜಾಲ
ಪಾರಂಪರಿಕ ಮಾಗಿ ಉಳುಮೆ ಮಾಡಿದರೆ ರೈತರಿಗೆ ಹೆಚ್ಚಿನ ಅನುಕೂಲ | ಕೃಷಿ ಇಲಾಖೆ
April 10, 2025
7:18 AM
by: The Rural Mirror ಸುದ್ದಿಜಾಲ
ಗುರು ಬಲದಿಂದ 5 ರಾಶಿಗಳಿಗೆ ಸಕಾರಾತ್ಮಕ ಪರಿಣಾಮ
April 10, 2025
6:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group