ಮಹಾಶಿವರಾತ್ರಿ(Shivaratri) ಭಾರತದ್ಯಾಂತ(India) ಆಚರಿಸಲ್ಪಡುವ ವಿಶೇಷ ವ್ರತ. ಮಹಾಶಿವರಾತ್ರಿ ಎಂದರೆ ಶಿವನ ವಿಶ್ರಾಂತಿಯ ಕಾಲ ಮಾಘಮಾಸದ ಕೃಷ್ಣ ಪಕ್ಷ ಚತುರ್ದಶಿ, ಅಂದು ದೇವಲೋಕದಲ್ಲಿ (ಅಲ್ಲಿಯ ಕಾಲ ಗಣನೆಗೆ ಅನುಸಾರವಾಗಿ ಪ್ರತಿದಿನ ಶಿವನು ರಾತ್ರಿಯ ಒಂದು ಪ್ರಹಾರ ವಿಶ್ರಾಂತಿಯನ್ನು ಪಡೆಯುವಾಗ ಅದು ಪೃಥ್ವಿಯ ಮೇಲೆ ವರ್ಷಕ್ಕೊಂದು ಸಲ ಮಹಾಶಿವರಾತ್ರಿ ಎಂದು ಆಚರಿಸಲಾಗುತ್ತದೆ,) ಆ ಮಹಾ ಶಿವರಾತ್ರಿಯು, ಮಾ.8 ರಂದು ರಾತ್ರಿ12:06 ರಿಂದ 12:58 ರವರೆಗೆ ನಡುರಾತ್ರಿ ಬರುತ್ತದೆ.
ಇಂತಹ ಕಾಲದಲ್ಲಿ ಶಿವ ತತ್ಪದ ಕಾರ್ಯ ನಿಂತು ಹೋಗುತ್ತದೆ. ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿ ಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ ಈ ಸಮಯದಲ್ಲಿ ತಿಳಿದು ಅಥವಾ ತಿಳಿಯದೋ ಶಿವ ಪೂಜೆ ಉಪಾಸನೆ ಮಾಡಿದ್ದಲ್ಲಿ ನಮ್ಮ ಜೀವನದ ಎಲ್ಲಾ ಕುಂದು ಕೊರತೆ ಇದ್ದರೂ ಸಹ ಶೇಕಡ 100 % ಪರಿಹಾರವಾಗಿ ಶುಭಫಲ ದೊರೆಯುತ್ತದೆ. ಕಾರಣ ಈ ಕಾಲಾವಧಿಯಲ್ಲಿ ವಿಶ್ವದ ತಮೋ ಗುಣವನ್ನು ಶಿವ ತತ್ವ ಸ್ವೀಕರಿಸುವುದಿಲ್ಲ. ಆದ್ದರಿಂದ ವಿಶ್ವದಲ್ಲಿ ತಮೋ ಗುಣ ಬಹಳ ಹೆಚ್ಚಾಗುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಮಹಾಶಿವರಾತ್ರಿಯ ವ್ರತವನ್ನು ಕೈಗೊಂಡು ನಾವು ಶಿವ ತತ್ವವನ್ನು ಆಕರ್ಷಿಸಬೇಕು.
ಮಹಾಶಿವರಾತ್ರಿ ವೃತಕ್ಕೆ, ಉಪವಾಸ, ಪೂಜೆ, ಜಾಗರಣೆ ಮಾಡುವುದರಿಂದ ಹಾಗೂ ಅಂದು ಚತುರ್ದಶಿ ಎಂದು ಬೆಳಿಗ್ಗೆ ಮಹಾಶಿವರಾತ್ರಿಯ ವ್ರತವನ್ನು ಸಂಕಲ್ಪ ಮಾಡಿ ಸಾಯಂಕಾಲ ನದಿಯಲ್ಲಿ ಅಥವಾ ಕೆರೆಯಲ್ಲಿ ಶಾಸ್ತ್ರೋಕ್ತವಾಗಿ ಸ್ನಾನ ಮಾಡಬೇಕು. ಬಸ್ಮಾ ಮತ್ತು ರುದ್ರಾಕ್ಷಿಗಳನ್ನು ಧರಿಸಬೇಕು.ಪ್ರದೋಷ ಕಾಲದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಿ ದೇವರ ಧ್ಯಾನವನ್ನು ಶಿವಪಂಚಾಕ್ಷರಿ ಮಂತ್ರದಿಂದ ಧ್ಯಾನ ಮಾಡುವುದರ ಮೂಲಕ, ಶಿವ ತ್ತತ್ವವನ್ನು ಆಕರ್ಷಿಸಬೇಕು.
ಅಂದಿನ ರಾತ್ರಿಯ ನಾಲ್ಕು ಪ್ರಹಾರಗಳಲ್ಲಿ ನಾಲ್ಕು ಪೂಜೆಗಳನ್ನು ಮಾಡಬೇಕೆಂದು ವಿಧಾನವಿದೆ. ಅದಕ್ಕೆ ಯಾಮ ಪೂಜೆ ಎನ್ನುತ್ತಾರೆ. ದೇವರಿಗೆ ಅಭಂಗ್ಯ ಸ್ನಾನ ಮಾಡಿಸಬೇಕು, ಅನು ಲೇಪನ ಮಾಡಿ ಮಾವಿನ ಹಾಗೂ ಬಿಲ್ವಪತ್ರೆಗಳನ್ನು ಅರ್ಪಿಸಬೇಕು. ಅಕ್ಕಿಯ ಹಿಟ್ಟಿನ 26 ದೀಪಗಳನ್ನು ಮಾಡಿ ಅವುಗಳನ್ನು ದೇವರಿಗೆ ಬೆಳಗಬೇಕು. ಈ ರೀತಿಯಾಗಿ ನಿರಂತರ ಸಂಪೂರ್ಣ ರಾತ್ರಿ ಮಾಡಿದ ನಂತರ ವ್ರತದ ಸಮಾಪ್ತಿಯನ್ನು ಮಾಡಬೇಕು.
ಅಂದಿನ ದಿನ, ದಿನವಿಡೀ ಶಿವನ ನಾಮ ಜಪ ಮಾಡಿ, ಸಾಧ್ಯವಾದರೆ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಿ, ಶಿವನಿಗೆ ಬಿಳಿ ಅಕ್ಷತೆ ಬಿಳಿ ಹೂವು ಬಿಲ್ವಪತ್ರೆಯನ್ನು ಅರ್ಪಿಸಿ ಶಿವನ ದೇವಸ್ಥಾನಕ್ಕೆ ಹೋಗಿ ಶಿವನ ದರ್ಶನವನ್ನು ಮಾಡಿ, ಸಂತೃಪ್ತಿಯಿಂದ ಭಕ್ತಿಯಿಂದ ಶಿವರಾತ್ರಿಯ ಆಚರಣೆ ಮಾಡಿ ಪುನೀತರಾಗಿ.
ಮೂಲ : ಡಿಜಿಟಲ್ ಮೀಡಿಯ