ಬೆಂಗಳೂರು ನಗರ , ಕುಡಿಯುವ ನೀರಿನ ಕೊರತೆಯಂತಹ ಗಂಭೀರ ಸಮಸ್ಯೆ ಎದುರಿಸುತ್ತಿದ್ದು, ಕೂಡಲೇ ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಿ, ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕು ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ರಾಜ್ಯಸಭೆಯಲ್ಲಿ ಹೇಳಿದರು.
ನಗರದ ಜನಸಂಖ್ಯೆ ಸುಮಾರು 1.45 ಕೋಟಿ ಮೀರಿದ್ದು, ಎಲ್ಲ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸುವುದು ದುಸ್ತರವಾಗಿದೆ. ಈ ಮಧ್ಯೆ ಖಾಸಗಿ ಟ್ಯಾಂಕರ್ ಗಳು , ಪ್ರತಿ ಟ್ಯಾಂಕ್ ನೀರಿಗೆ 1 ಸಾವಿರದ 200 ರೂಪಾಯಿಯಿಂದ 3 ಸಾವಿರದ ವರೆಗೆ ಶುಲ್ಕ ಪಡೆಯುತ್ತಿದ್ದು, ಸಾಮಾನ್ಯ ಜನರಿಗೆ ದುಬಾರಿಯಾಗಿ ಪರಿಣಮಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗಮನ ಹರಿಸಬೇಕು ಎಂದರು. ಹಿಂದೆ ಕೆರೆಗಳ ನಗರವಾಗಿದ್ದ ಬೆಂಗಳೂರು, ಒತ್ತುವರಿ ಕಾರಣದಿಂದಾಗಿ ನೀರಿನ ಮೂಲಗಳನ್ನು ಕಳೆದುಕೊಂಡಿದ್ದು, ಅಂತರ್ಜಲ ಕುಸಿದಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಗೆ ರಾಜಕೀಯ ಹೊರತುಪಡಿಸಿ, ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ಕೋರಿದರು.
ಹೆಚ್ಚುತ್ತಿರುವ ತಾಪಮಾನದ ಕಾರಣದಿಂದ 2030 ರ ವೇಳೆಗೆ ಭಾರತವು ತನ್ನ ಒಟ್ಟು ದೇಶೀಯ…
ಭಾರತೀಯ ಕೃಷಿ ವಲಯದ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸಲು ಸರ್ಕಾರ ಸುಸ್ಥಿರ…
ದೇಶದ 40 ಸಾವಿರ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗಳಿಲ್ಲ, 2.28 ಲಕ್ಷ ಪಂಚಾಯತ್…
ಮಂತ್ರಗಳನ್ನು ಬೇರೆಯವರು ಉಪಯೋಗಿಸದಂತೆ ಹಿಂದೆ ಬ್ರಾಹ್ಮಣರು ಮಾಡಿದಂತೆ ಈಗ ತಾಂತ್ರಿಕತೆಯನ್ನು ತಿಳಿದವರು ಮಾಡುತ್ತಿದ್ದಾರೆ.…
ಇಂದು ರಾಜ್ಯದ ವಿವಿದೆಡೆ ಮಳೆಯ ವಾತಾವರಣ ಇದೆ. ಮಳೆಯ ವಾತಾವರಣವು ಮುಂದಿನ 10…
ಗುಜ್ಜೆ ಬೋಂಡಾಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಗುಜ್ಜೆ 3/4…