ಮಂಗಳೂರಿನ ಶ್ರೀ ಸಂಗೀತ ಪಾಠಶಾಲೆಯ ವಾರ್ಷಿಕೋತ್ಸವ `ಸ್ವರಶ್ರೀ 2025′ ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ ನಡೆಯಿತು.
ರಾಜಗೋಪಾಲ್ ಪದ್ಯಾಣ, ಸೌಜನ್ಯ ರಾಜಗೋಪಾಲ್ ಮತ್ತು ದಯಾನಂದ ಹೆಗ್ಡೆ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಸಂಗೀತ ಶಿಕ್ಷಕಿ ಸಂಧ್ಯಾ ಸತ್ಯನಾರಾಯಣ, ಕಾರ್ಯದರ್ಶಿ ಸತ್ಯನಾರಾಯಣ ಭಟ್ರಕೋಡಿ ಉಪಸ್ಥಿತರಿದ್ದರು.
ಉದ್ಘಾಟನೆಯ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ವಯಲಿನ್‌ನಲ್ಲಿ ವಿಜೇತ ಸುಬ್ರಹ್ಮಣ್ಯ, ಶ್ರೀರಾಮ ಕಾಂಚನ, ಅಶ್ಮಿತ್ ಮತ್ತು ಮೃದಂಗದಲ್ಲಿ ವೆಂಕಟ ಯಶಸ್ವಿ ಮತ್ತು ಶ್ರೀಚರಣ ಕಟ್ಟೆ ಸಹಕರಿಸಿದರು.
ವಾರ್ಷಿಕೋತ್ಸವದ ಪ್ರಧಾನ ಸಂಗೀತ ಕಛೇರಿಯನ್ನು ವಿದ್ವಾನ್ ಡಾ. ಶ್ರೇಯಸ್ ನಾರಾಯಣನ್ ಚೆನ್ನೈ ಅವರು ನಡೆಸಿಕೊಟ್ಟರು. ಅವರಿಗೆ ಹಿಮ್ಮೇಳದಲ್ಲಿ ವಯಲಿನ್‌ನಲ್ಲಿ ವಿದ್ವಾನ್ ಟ್ರಿವೆಂಡ್ರಮ್ ಎನ್. ಸಂಪತ್, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ ಈಶ್ವರ ಭಟ್ ಮತ್ತು ಘಟಂನಲ್ಲಿ ವಿದ್ವಾನ್ ಶರತ್ ಕೌಶಿಕ್ ಮೈಸೂರು ಅವರು ಸಹಕರಿಸಿದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement