ಮಂಡ್ಯ ಜಿಲ್ಲೆಯಲ್ಲಿರುವ ಖಾಸಗಿ ಸಕ್ಕರೆ ಕಾರ್ಖಾನೆಗಳು 14 ದಿನದೊಳಗಾಗಿ ರೈತರಿಂದ ಖರೀದಿ ಮಾಡುವ ಕಬ್ಬಿನ ಹಣ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.
ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಕ್ಕರೆ ಕಾರ್ಖಾನೆಯ ಮಾಲೀಕರು ಹಾಗೂ ರೈತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಮೈ ಶುಗರ್ ಸಕ್ಕರೆ ಕಾರ್ಖಾನೆಯು ಸರ್ಕಾರಿ ಸಂಸ್ಥೆಯಾಗಿದ್ದು, ರೈತರಿಂದ ಖರೀದಿ ಮಾಡಿರುವ ಕಬ್ಬಿಗೆ ಹಣ ಪಾವತಿಸಿದೆ. ಖಾಸಗಿ ಸಕ್ಕರೆ ಕಾರ್ಖಾನೆಗಳು ಹಣ ಪಾವತಿಸುವಂತೆ ಸೂಚಿಸಿದ್ದಾರೆ.ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ, ಕೊಪ್ಪ ಎನ್.ಎಸ್.ಎಲ್ ಹಾಗೂ ಕೆ.ಆರ್.ಪೇಟೆ ಕೋರಮಂಡಲ್ ಸಕ್ಕರೆ ಕಾರ್ಖಾನೆಗಳಲ್ಲಿ ಪಾವತಿಗೆ ಬಾಕಿ ಇರುವ ರೈತರ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯವರು ಮಾರ್ಚ್ 10 ರೊಳಗೆ ಹಣ ಪಾವತಿ ಮಾಡಬೇಕು. ಕೋರಮಂಡಲ್ ಹಾಗೂ ಎನ್.ಎಸ್.ಎಲ್ ಕಾರ್ಖಾನೆ ಅವರು ಇದೇ 28 ರೊಳಗಾಗಿ ಹಣ ಪಾವತಿಸುವಂತೆ ನಿರ್ದೇಶನ ನೀಡಿದ್ದಾರೆ.ಇದೇ ವೇಳೆ ಸಕ್ಕರೆ ಕಾರ್ಖಾನೆಗಳು ರೈತರು ಉಪಯೋಗಿಸಬೇಕಿರುವ ತಳಿ, ಗೊಬ್ಬರ, ಬೆಳೆಯಲ್ಲಿ ನೀಡಬೇಕಿರುವ ಅಂತರ ಸೇರಿದಂತೆ ಕೃಷಿ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವಂತೆ ತಿಳಿಸಿದರು.