ನಾಗರಿಕ ಸಮಾಜದಲ್ಲಿ ಸಮಾಜಿಕ ಬಹಿಷ್ಕಾರ ಎನ್ನುವ ಅನಿಷ್ಟ ಪದ್ದತಿ ಬುಡ ಸಮೇತ ತೆಗೆದು ಹಾಕಬೇಕೆಂದು ಮಾನವ ಹಕ್ಕುಗಳ ಅಯೋಗದ ಅಧ್ಯಕ್ಷರಾದ ಶ್ಯಾಂಭಟ್ ತಿಳಿಸಿದ್ದಾರೆ.
ನಂಜನಗೂಡಿನ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ, ಸಾಮಾಜಿಕ ಬಹಿಷ್ಕಾರ ಘಟನೆಗಳ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮಾಜಿಕ ಬಹಿಷ್ಕಾರದಂತಹ ಪ್ರಕರಣಗಳು ಕಂಡುಬಂದಲ್ಲಿ ಅವುಗಳನ್ನು ಪತ್ರಿಕೆಗಳು, ಸುದ್ದಿ ವಾಹಿನಿಗಳಲ್ಲಿ ಹೆಚ್ಚಾಗಿ ಪ್ರಕಟಿಸುವ ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇದರ ವಿದುದ್ದ ತೆಗೆದುಕೊಂಡಂತಹ ಕ್ರಮಗಳ ಬಗ್ಗೆ ಹೆಚ್ಚು ಪ್ರಕಟಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು. ಸಾಮಾಜಿಕ ಬಹಿಷ್ಕಾರ ಎಂಬ ಪಿಡುಗು ತೊಲಗಬೇಕು ಇದನ್ನು ಬುಡ ಸಮೇತ ಕೀಳಲು ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಮುಖ್ಯವಾಗಿ ತಹಸಿಲ್ದಾರ್ ಸಿಡಿಪಿಓ ಮತ್ತು ಪೊಲೀಸ್ ಇಲಾಖೆಯವರು ಇದರ ಬಗ್ಗೆ ಹೆಚ್ಚಾಗಿ ಗಮನ ವಹಿಸಬೇಕು. ಇಂತಹ ಘಟನೆ ಸಂಭವಿಸಿದಲ್ಲಿ ಕೂಡಲೇ ಕ್ರಮ ವಹಿಸಿ ನಮ್ಮ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು. ಸಾಮಾಜಿಕ ಬಹಿಷ್ಕಾರದ ದೂರಿನ ಹಿನ್ನೆಲೆ ಕಂದೇಗಾಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು. ಗ್ರಾಮದಲ್ಲಿ ಬಹಿಷ್ಕಾರವನ್ನು ಹಾಕಿರುವಂತಹ ವಾತಾವರಣ ಕಾಣುತಿಲ್ಲ ಒಂದು ವೇಳೆ ಅಂತಹ ಬೆಳವಣಿಗೆಗಳಾದರೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…