ಕರ್ನಾಟಕ ವಿಧಾನಸಭಾ ಚುನಾವಣೆ ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆ, ಕಾಂಗ್ರೆಸ್ ಭರ್ಜರಿ ಚುನಾವಣಾ ಪ್ರಚಾರ ಆರಂಭಿಸಿದೆ. ತನ್ನ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಸ್ಟಾರ್ ಕ್ಯಾಂಪೇನರ್ ಆಗಿ ಚುನಾವಣಾ ಅಖಾಡಕ್ಕಿಳಿಸಿದೆ. ಈ ಕುರಿತು ಮಾಧ್ಯಮಗಳ ಜತೆ ನಟ ಶಿವರಾಜಕುಮಾರ ಮಾತನಾಡಿದರು.
ವರುಣದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪರ ಪ್ರಚಾರ ಚೆನ್ನಾಗಿ ಆಗಿದೆ. ಇವತ್ತು ಮುಂಡುಗೋಡು, ಶಿರಸಿಯಲ್ಲಿ ಪ್ರಚಾರ ಮಾಡ್ತೀನಿ ಎಂದು ಹೇಳಿದರು.
ನಾನೇನು ಚಿಕ್ಕ ಹುಡುಗನಾ? ನನಗೂ ಈಗ 61 ವರ್ಷ ಆಯ್ತು. ನನಗೆ ಯಾರು ಎನಿಮಿ ಇಲ್ಲ. ನನಗೆ ಎಲ್ಲರೂ ಸ್ನೇಹಿತರೆ. ರಾಹುಲ್ ಗಾಂಧಿ ಮೀಟ್ ಮಾಡಬೇಕು ಅಂತಾ ಮೊದಲಿನಿಂದ ಆಸೆ ಇತ್ತು. ಮೊನ್ನೆ ಮೀಟ್ ಮಾಡಿದೆ. ರಾಹುಲ್ ಗಾಂಧಿ ಸ್ಮಾರ್ಟ್ ಆಗಿ ಇದ್ದಾರೆ ಎಂದು ಹೊಗಳಿದರು.
ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷದವರು ಯಾರೂ ಪ್ರಚಾರಕ್ಕೆ ಕರೆದಿರಲಿಲ್ಲ. ಕರೆದಿದ್ದರೆ ಅವರ ಪರ ಪ್ರಚಾರಕ್ಕೂ ಹೋಗ್ತಿದ್ದೆ. ಮೊದಲು ಸಿನಿಮಾದಲ್ಲಿ ಬಿಜಿ ಇದ್ದೆ. ಈಗ ಪ್ರಚಾರದಲ್ಲಿ ಬಿಜಿ ಆಗಿದ್ದೇನೆ. ನನಗೆ ರಾಹುಲ್ ಗಾಂಧಿ ಪಿಟ್ನೆಸ್ ಇಷ್ಟ ಆಯ್ತು. ಹೀಗಾಗಿ ಅವರ ಬಗ್ಗೆ ಇಂಪ್ರೆಸ್ ಆಯ್ತು ಎಂದರು.
ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ಸಾಕಷ್ಟು ಜನಪರ ಕೆಲಸ ಮಾಡಿದ್ದಾರೆ. ಅದು ಯಾವುದೂ ಬರಲ್ಲ. ರಾಯಚೂರಿನಲ್ಲಿ ಒಬ್ಬರು ಸಾದಿಕ್ ಅಂತಾ ಇದ್ದಾರೆ. ಅಪ್ಪು ಜೀವಂತವಾಗಿ ಇದ್ದಾಗಲೂ ಕೆಲಸ ಮಾಡಿದ್ದರು. ಈಗಲೂ ಮಾಡುತ್ತಿದ್ದಾರೆ. ಆದರೆ ಅವರು ಯಾರೂ ಹೇಳಿಕೊಂಡು ಓಡಾಡಲ್ಲ. ನಾನು ಎಲ್ಲರಿಗೂ ಗೌರವ ಕೊಡುತ್ತೇನೆ ಎಂದರು.
ಶಿವಣ್ಣಂಗೆ ಮಾತನಾಡಕ್ಕೆ ಆಗಲ್ಲ ಅಂತಾಲ್ಲ, ನನಗೂ ಮಾತನಾಡೋಕೆ ಬರುತ್ತೆ. ಬಿಜೆಪಿ ಪರವಾಗಿ ಸುದೀಪ್ ಅವರು ಪ್ರಚಾರಕ್ಕೆ ಹೋಗ್ತಿದ್ದಾರೆ. ಹಾಗಂತ ನಾಳೆ ನಾನು ಸುದೀಪ್ ಅವರನ್ನು ಮಾತನಾಡಿಸಲು ಆಗಲ್ವಾ. ನಾನು ಸುದೀಪ್ ಕ್ಲೋಸ್ ಫ್ರೆಂಡ್ಸ್ ಎಂದರು.
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…