ಮಂಗಳೂರಿಗೆ ಮೋದಿ ಭೇಟಿ ಕಾರ್ಯಕ್ರಮದಲ್ಲಿ ಬದಲಾವಣೆ | ಮಂಗಳೂರಿನಲ್ಲಿ ರೋಡ್‌ ಶೋ, ಮೈಸೂರಿನಲ್ಲಿ ಸಮಾವೇಶ |

April 10, 2024
8:51 PM

ದಿನದಿಂದ ದಿನಕ್ಕೆ ಲೋಕ ಸಭೆ ಚುನಾವಣೆಯ(Lok Sabha Election) ಕಾವು ಏರುತ್ತಿದೆ. ಬಿಜೆಪಿಯು ಮುಖ್ಯವಾಗಿ ನರೇಂದ್ರ ಮೋದಿ ಅವರನ್ನು ಮುಂದಿರಿಸಿ ಚುನಾವಣೆಯಲ್ಲಿ ಪ್ರಚಾರ ಮಾಡುತ್ತಿದೆ. ಅದರಲ್ಲೂ ಮೋದಿಯವರು ಕರ್ನಾಟಕಕ್ಕೆ(Karnataka) ಭೇಟಿ ನೀಡುತ್ತಿರುವುದು ಬಿಜೆಪಿ ಕಾರ್ಯಕರ್ತರಿಗೆ ಜೋಶ್‌ ನೀಡುತ್ತಿದೆ.  ಬಿಜೆಪಿ ಬೆಲ್ಟ್‌ ದಕ್ಷಿಣಕನ್ನಡಕ್ಕಂತೂ(Dakshina Kannada) ಮೋದಿಯವರ ಭೇಟಿ ಕುತೂಹಲ ಮೂಡಿದೆ. ಆದರೆ  ಅವರ ಕರ್ನಾಟಕ ಭೇಟಿ ಕಾರ್ಯಕ್ರಮದಲ್ಲಿ ಮತ್ತೆ ಮಹತ್ವದ ಬದಲಾವಣೆಯಾಗಿದೆ.

Advertisement
Advertisement
Advertisement
Advertisement

ಏಪ್ರಿಲ್14 ರಂದು ಪ್ರಧಾನಿ ಮೋದಿಯವರ ಬೃಹತ್ ಸಮಾವೇಶವನ್ನು ಮಂಗಳೂರು (Mangaluru) ಬದಲು ಮೈಸೂರಿನಲ್ಲಿ (Mysuru) ಆಯೋಜಿಸಲಾಗಿದೆ. ಹಳೇಮೈಸೂರು (Old Mysuru) ಭಾಗದಲ್ಲಿ ಸಿದ್ದರಾಮಯ್ಯ (Siddaramaiah) ಟಾರ್ಗೆಟ್ ಮಾಡಿರುವ ದೋಸ್ತಿಗಳು ಮೈಸೂರಿಗೆ ಮೋದಿ ಅವರನ್ನು ಕರೆಸಿ ಬೃಹತ್ ಸಮಾವೇಶ ನಡೆಸಲು  ಮುಂದಾಗಿದ್ದಾರೆ. ಮೋದಿಯವರು ಏಪ್ರಿಲ್ 14 ರಂದು ಮೈಸೂರಿಗೆ ಸಂಜೆ 4 ಗಂಟೆಗೆ ಬರಲಿದ್ದಾರೆ. ಅಂದು ಮಹಾರಾಜ ಮೈದಾನದಲ್ಲಿ ಆಯೋಜನೆಗೊಂಡಿರುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮೋದಿ ಮಾತಾಡಲಿದ್ದಾರೆ.

Advertisement

ಹಳೇ ಮೈಸೂರಿನ ನಾಲ್ಕು ಲೋಕಕ್ಷೇತ್ರಗಳನ್ನು ಟಾರ್ಗೆಟ್ ಇಟ್ಟುಕೊಂಡು ಮೋದಿಯವರು ಭಾಷಣ ಮಾಡಲಿದ್ದಾರೆ. ಈ ಸಮಾವೇಶದಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸಿ ಯಶಸ್ವಿ ಮಾಡಲು ದೋಸ್ತಿ ನಾಯಕರು ನಿರ್ಧರಿಸಿದ್ದಾರೆ.  ಅಂದು ಸಂಜೆ 6 ಗಂಟೆಗೆ ಮಂಗಳೂರಿಗೆ ಆಗಮಿಸಿ ಬೃಹತ್‌ ರೋಡ್‌ ಶೋ (Road Show) ನಡೆಸಲಿದ್ದಾರೆ. ಮಂಗಳೂರಿನ ನಾರಾಯಣ ಗುರು ಸರ್ಕಲ್ ನಿಂದ ನವಭಾರತ ವೃತ್ತದವರೆಗೆ 1.5 ಕಿ.ಮೀ ವರೆಗೆ ಮೋದಿಯವರು ರೋಡ್ ಶೋ ನಡೆಸಲಿದ್ದಾರೆ. ಮೋದಿಯವರ ಜತೆ ರೋಡ್ ಶೋ ವೇಳೆ ಪಕ್ಷದ ಅಭ್ಯರ್ಥಿ ಮಾತ್ರ ಇರುವಂತೆ ಸೂಚಿಸಲಾಗಿದೆ.

  • ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |
February 20, 2025
6:58 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror