ಮೇಘಾಲಯದಲ್ಲಿ ಚುನಾವಣೆಗೆ ಅಡಿಕೆ ಇಶ್ಯೂ | ಅಕ್ರಮ ಅಡಿಕೆ ಸಾಗಾಟದ ಮೌನದ ಬಗ್ಗೆ ಪ್ರಶ್ನಿಸಿದ ಅಡಿಕೆ ಬೆಳೆಗಾರರು |

April 18, 2024
10:45 AM

ದೇಶದಲ್ಲಿ ಕರ್ನಾಟಕ-ಕೇರಳ ಪ್ರಮುಖವಾದ ಅಡಿಕೆ ಬೆಳೆಯುವ ಪ್ರದೇಶಗಳು. ಈಚೆಗೆ ತಮಿಳುನಾಡು, ಆಂಧ್ರಪ್ರದೇಶ ಮಾತ್ರವಲ್ಲ ಈಶಾನ್ಯ ರಾಜ್ಯಗಳಲ್ಲೂ ಅಡಿಕೆ ಪ್ರಮುಖ ಬೆಳೆಯಾಗುತ್ತಿದೆ. ಈಗ ಈಶಾನ್ಯ ರಾಜ್ಯಗಳಲ್ಲಿ ಅಡಿಕೆ ಕಳ್ಳಸಾಗಾಣಿಕೆಯೇ ಬಹುದೊಡ್ಡ ಸವಾಲು. ಅಡಿಕೆ ಕಳ್ಳಸಾಗಾಣಿಕೆಯ ಕಾರಣದಿಂದ ಅಲ್ಲಿನ ಅಡಿಕೆ ಧಾರಣೆ ಕುಸಿತವಾಗಿದೆ. ಹೀಗಾಗಿ ಈಗ ಚುನಾವಣೆಯ ವೇಳೆ ಅಲ್ಲಿನ ಅಭ್ಯರ್ಥಿಗಳಿಗೆ ಅಡಿಕೆ ಕಳ್ಳಸಾಗಾಣಿಕೆಯೇ ಒಂದು ಇಶ್ಯೂ ಆಗಿದೆ. ಈಗ ಕೃಷಿಕರು ಪ್ರಶ್ನಿಸುತ್ತಿದ್ದಾರೆ.

Advertisement
Advertisement
Advertisement

ಅಡಿಕೆ ಅಕ್ರಮ ಸಾಗಾಟದ  ಸಮಸ್ಯೆ ಈಗ ಗಂಭೀರ ಸ್ವರೂಪದ ತಿರುವು ಪಡೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಈ ಕುರಿತು ಮೇಘಾಲಯ ಸರ್ಕಾರ ಮೌನ ವಹಿಸಿರುವುದನ್ನು ಕೆಲವು ರೈತರು ಪ್ರಶ್ನಿಸಿದ್ದಾರೆ. ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶದ ಮೂಲಕ ಅಕ್ರಮ ಅಡಿಕೆ ಸಾಗಾಟವು ಮೇಘಾಲಯದ ಕೆಲವು ಪ್ರದೇಶದ ಕೃಷಿಕರನ್ನು ಹಾಗೂ ವ್ಯಾಪಾರಿಗಳ ಮೇಲೂ ಪರಿಣಾಮ ಬೀರಿದೆ.ಹಲವು ಸಮಯಗಳಿಂದ ಈ ಕಳ್ಳಸಾಗಾಣಿಕೆಯಾಗುತ್ತಿದ್ದರೂ ಧಾರಣೆ ಕುಸಿತದ ಕಾರಣದಿಂದ ಅಡಿಕೆ ಪ್ರಮುಖ ಬೆಳೆಯಾಗಿರಲಿಲ್ಲ. ಆದರೆ ಈಚೆಗೆ ಕೆಲವು ಸಮಯಗಳಿಂದ ಧಾರಣೆ ಏರಿಕೆಯಾದ ಕಾರಣ ಅಡಿಕೆ ಪ್ರಮುಖ ಬೆಳೆಯಾಗುತ್ತಿದೆ. ಹೀಗಾಗಿ ಅಡಿಕೆ ಕಳ್ಳಸಾಗಾಣಿಕೆ ತಡೆಯಲು ಮೇಘಾಲಯದ , ತ್ರಿಪುರಾದ ಕೃಷಿಕರು ಒತ್ತಾಯ ಮಾಡುತ್ತಿದ್ದಾರೆ.

Advertisement

ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಪನ್ಸೆಂಗ್ ಬಿ ಮಾರಾಕ್ ಅಡಿಕೆ ಕಳ್ಳಸಾಗಾಣಿಕೆ ಬಗ್ಗೆ ಸರ್ಕಾರ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ತಮ್ಮ ಅಡಿಕೆ ಬೆಳೆಯನ್ನು ಅವಲಂಬಿಸಿದ್ದಾರೆ. ಆದರೆ ಕಳ್ಳಸಾಗಾಣಿಕೆಯು ಇಲ್ಲಿನ ಕೃಷಿಕರ ಮೇಲೆ ಪರಿಣಾಮ ಬೀರುತ್ತಿದೆ, ಹಾಗಿದ್ದರೂ ಸರ್ಕಾರ, ಜನಪ್ರತಿನಿಧಿಗಳು ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ. ಸ್ಥಳೀಯರು ಎದುರಿಸುತ್ತಿರುವ ಸಂಕಷ್ಟದ ಅರಿವಿದ್ದರೂ ಕಳ್ಳ ವ್ಯಾಪಾರವನ್ನು ಮುಂದುವರೆಸಿದ್ದಾರೆ, ರಾಜಕೀಯ ಪಕ್ಷಗಳು ಸೇರಿದಂತೆ ಅನೇಕ ಜನರು  ಕಳ್ಳಸಾಗಣೆಯ ವಿಷಯವನ್ನು ಎತ್ತಿದ್ದಾರೆ ಆದರೆ ಸಚಿವರು ಈ ವಿಷಯದ ಬಗ್ಗೆ ಮೌನ ವಹಿಸಿದ್ದಾರೆ ಎಂದು ದೂರಿದ್ದಾರೆ.

The issue of illegal Arecanut  from Myanmar through Bangladesh has literally shaken the entire Meghalaya with many complaining that the same was affecting the entire trade.

Advertisement

Source : TST News

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror