ಸಕ್ಕರೆ ಕಾಯಿ ಅಥವಾ ಶುಗರ್ ಎಂದೆಲ್ಲಾ ಕರೆಯುವ ಆರೋಗ್ಯದ ಸಮಸ್ಯೆ ಕಂಡುಬರುವುದೇ ನಮ್ಮ ಆಹಾರದಲ್ಲಿ. ನವಜಾತ ಶಿಶುಗಳಲ್ಲಿಯೂ ಈ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಏಕೆಂದರೆ ತುಂಬು ಗರ್ಣಿಣಿಯರಾದ ಬಳಿಕ ಬಯಕೆ ಎಂಬ ನೆಪ ಇಟ್ಟುಕೊಂಡು ಸಿಕ್ಕಿದೆಲ್ಲ ತಿನ್ನುವ ಹವ್ಯಾಸಗಳು ಮುಂದೊಂದಿನ ಪ್ರಾಣಕ್ಕೆ ಕುತ್ತು ತರುತ್ತದೆ. ನಾಲಗೆಯ ರುಚಿಗೆಂದು ಹೆಚ್ಚು ಸಿಹಿಯನ್ನು ತಿಂದರೆ ಇದೇ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಸಕ್ಕರೆ ಕಾಯಿಲೆಗಳನ್ನು ಸೀಮಿತದಲ್ಲಿಟ್ಟುಕೊಳ್ಳಲು ನಮ್ಮ ಮನೆಯ ಮದ್ದುವೆ ಸಾಕು ಅವುಗಳೆಂದರೆ:
ನೆನೆಸಿದ ಮೆಂತ್ಯೆ ಕಾಳು: ರಾತ್ರಿ ಒಂದು ಲೋಟ ನೀರಿಗೆ ಒಂದು ಚಮಚ ಮೆಂತ್ಯೆ ಕಾಳುವನ್ನು ನೀರಿನಲ್ಲಿ ನೆನೆಸಿ ಮರುದಿನ ಖಾಲಿ ಹೊಟ್ಟೆಗೆ ಸೇವಿಸುವುದರಿಂದ ಅದರಲ್ಲಿರುವ ಫೈಬರ್ ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಇದು ಮುಖದ ಸೌಂದರ್ಯ ವನ್ನು ಹೆಚ್ಚಿಸಲೂ ಸಹಾಕಾರಿ.
ಬಾರ್ಲಿ: ಬೇಸಿಗೆ ಸಮಯದಲ್ಲಿ ಬಾರ್ಲಿ ಗಂಜಿ ಅಥವಾ ಬಾರ್ಲಿ ನೀರನ್ನು ಸೇವಿಸುವುದರಿಂದ ಬೀಟಾ-ಗ್ಲುಕನ್ ಇನ್ಸುಲಿನ್ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ.
ಕರಿಬೇವಿನ ಸೊಪ್ಪು: ದೈನಂದಿನ ಆಹಾರದಲ್ಲಿ ಕರಿಬೇವು ಸೇರಿಸಿಕೊಳ್ಳುವುದು ಉತ್ತಮ. ಏಕೆಂದರೆ ಇದರ ಎಲೆ ಆಂಟಿ-ಡಯಾಬೆಟಿಕ್ ಅನ್ನು ಹೊಂದಿಕೊಂಡಿದೆ. ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಿಂದ ಜಗಿಯುವುದರಿಂದ ಹೊಟ್ಟೆ ಹಾಗೂ ಕೂದಲಿನ ಸಮಸ್ಯೆಗಳು ನಿವಾರಿಸುತ್ತದೆ.
ನೆಲ್ಲಿಕಾಯಿ: ಬೆಟ್ಟದ ನೆಲ್ಲಿಕಾಯಿ ಇದರಲ್ಲಿ ಕ್ರೋಮಿಯಂ ಅಂಶವುಇನ್ಸುಲಿನ್ ಕಾರ್ಯಕ್ಕೆ ಬೆಂಬಲ ನೀಡುತ್ತದೆ ಮತ್ತು ಕಾರ್ಬೋಹೈಡ್ರೇಟ್‍ಗಳ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ ಕೂದಲಿನ ಸಮಸ್ಯೆಗೂ ಸಹಾಕಾರಿ.
ಹಾಗಲಕಾಯಿ: ಇದರಲ್ಲಿ ಚರಾಂತಿನ್ ಮತ್ತು ಪೀನ್ಸುಲೀನ್ ಎಂಬ ಸಕ್ರಿಯ ಪದಾರ್ಥಗಳಿವೆ. ಇವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ನೇರವಾಗಿ ಸಹಾಯ ಮಾಡುತ್ತದೆ.
ಅಗಸೆ ಬೀಜ: ಒಮೆಗಾ-3ಮತ್ತು ಫೈಬರ್ ಅನ್ನು ಒದಗಿಸುತ್ತವೆ, ಇದು ಸಕ್ಕರೆ ನಿಯಂತ್ರಣಕ್ಕೆ ಉತ್ತಮ.
ಅರಶಿನ: ಕಕ್ರ್ಯುಮಿನ್ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಇದನ್ನು ಆಡುಗೆಯಲ್ಲಿ ಬಳಸುವುದು ಅಥವಾ ರಾತ್ರಿ ಮಲಗುವ ಮುಂಚೆ ಒಂದು ಲೋಟ ಹಾಳಿಗೆ ಒಂದು ಚಿಟಿಕೆಯಷ್ಟು ಅರಶಿನ ಹುಡಿ ಹಾಕಿ ಕುಡಿಯುವುದರಿಂದ ದೇಹಕ್ಕೆ ತುಂಬ ಉತ್ತಿಮ.
ಈ ರೀತಿಯಲ್ಲಿ ಆಡುಗೆ ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳು ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟಕೊಳ್ಳುವುತ್ತದೆ. ಆದರೆ ನಮ್ಮ ಮನಸ್ಸು ಹಾಗೂ ನಾಲಗೆ ಹೊರಗಿನ ತಿಂಡಿಯನ್ನು ಬೇಡುವುದು ತುಂಬ ಕೆಟ್ಟದು. ಆರೋಗ್ಯವೇ ಜೀವನ ಎಂಬ ಮಾತನ್ನು ಗಮನದಲ್ಲಿಟ್ಟು ಕೊಂಡು ಆಹಾರಪದ್ಧತಿಯನ್ನು ಬದಲಾಗಿಸಿಕೊಂಡು ಹೋಗುವುದು ತುಂಬಾನೆ ಉತ್ತಮ.


