ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದರೆ 200 ರೂ ದಂಡ ಬೀಳಲಿದೆ ಬೆಂಗಳೂರಿನಲ್ಲಿ…! | ಬಿಬಿಎಂಪಿ ನಿರ್ಧಾರ |

Advertisement
Advertisement

ಬೆಂಗಳೂರು ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ (Plastic) ಬಳಸುವ ಗ್ರಾಹಕರಿಗೆ ಬಿಬಿಎಂಪಿ ಇನ್ನು ಮುಂದೆ  ದಂಡ ವಿಧಿಸಲಿದೆ.ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದರೆ ಸಿಕ್ಕಿ ಬಿದ್ದದವರಿಗೆ  ಬೀಳಲಿದೆ ದಂಡ ಪ್ರಯೋಗಿಸಲು ಬಿಬಿಎಂಪಿ (BBMP) ನಿರ್ಧರಿಸಿದೆ. 

Advertisement

ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ.ಆದರೆ ವ್ಯಾಪಾರಿಗಳು, ಗ್ರಾಹಕರು ಪ್ಲಾಸ್ಟಿಕ್ ಮೇಲೆ ಅವಲಂಬಿತರಾಗಿದ್ದಾರೆ. ಇದನ್ನು ತಪ್ಪಿಸಲು ವ್ಯಾಪಾರಿಗಳು, ಗ್ರಾಹಕರು ನಿಷೇಧಿತ ಪ್ಲಾಸ್ಟಿಕ್ ಬಳಸಿದರೆ ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದೆ. ಪ್ಲಾಸ್ಟಿಕ್ ಕೈ ಚೀಲವನ್ನು ಬಳಸಿದ್ದು ಕಂಡು ಬಂದರೆ ಗ್ರಾಹಕರಿಗೆ 200 ರೂ. ದಂಡ ವಿಧಿಸಲಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮದಡಿ ಮಾಲಿನ್ಯ ನಿಯಂತ್ರಣ ಮಂಡಳಿ ದಂಡದ ಪ್ರಮಾಣ ಕುರಿತು ಆದೇಶ ಹೊರಡಿಸಿದೆ.

Advertisement
Advertisement

ಬೆಂಗಳೂರು  ನಗರದಲ್ಲಿ ವ್ಯಾಪಾರಿಗಳಿಂದ ಗ್ರಾಹಕರು ಖರೀದಿಸುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಬ್ಯಾನರ್ ಬಂಟಿಂಗ್ಸ್, ಫ್ಲೆಕ್ಸ್, ಪ್ಲಾಸ್ಟಿಕ್ ಕಪ್, ಸ್ಪೂನ್, ಡೈನಿಂಗ್ ಟೇಬಲ್ ಮೇಲೆ ಹಾಕುವ ಪ್ಲಾಸ್ಟಿಕ್ ಹಾಳೆ ಕಂಡು ಬಂದಲ್ಲಿ ಕೂಡಲೇ ದಂಡ ಪ್ರಯೋಗಕ್ಕೆ ಮಾರ್ಷಲ್ಸ್ ಸಜ್ಜಾಗಿದ್ದಾರೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದರೆ 200 ರೂ ದಂಡ ಬೀಳಲಿದೆ ಬೆಂಗಳೂರಿನಲ್ಲಿ…! | ಬಿಬಿಎಂಪಿ ನಿರ್ಧಾರ |"

Leave a comment

Your email address will not be published.


*