ಸೀತೆ ಪುನೀತೆ, ಲವ ಕುಶರು ಸಮಾಜ ಸುಧಾರಕರು

January 29, 2025
10:23 PM
ಶ್ರೀರಾಮನೂ ಕೂಡಾ ತನ್ನ ರಾಜ್ಯದಲ್ಲಿ  ಜೀವಂತವಾಗಿದ್ದ ಸ್ತ್ರೀ ಅಸಮಾನತೆಯನ್ನು ನಿವಾರಿಸಿದ ಶ್ರೇಯಸ್ಸನ್ನು ಮಕ್ಕಳಿಗೆ ನೀಡಿದ. ಹೀಗೆ ಈ ಸರಣಿಯಲ್ಲಿ ಲವ-ಕುಶರು ಸಾಮಾಜಿಕ ಸಮಾನತೆ ಹಾಗೂ ಸ್ತ್ರೀ ಸಮಾನತೆಯ ಎರಡು ಸುಧಾರಣೆಗಳನ್ನು ಮಾಡಿದ್ದು ದಾಖಲಾಗಿದೆ.
ಇತ್ತೀಚೆಗೆ ಒಂದು ಸಾಯಂಕಾಲ ಏಳೂವರೆಗೆ ಒಬ್ಬ ನೆಂಟರ ಮನೆಗೆ ಹೋಗಿದ್ದೆ. ಅಲ್ಲಿ ಟಿ.ವಿ.ಯಲ್ಲಿ ರಾಮಾಯಣ ಪ್ರಸಾರವಾಗುತ್ತಿತ್ತು. ಅದು ಲವಕುಶರ ಕಥೆ ಎಂದು ಹೇಳಿದರು. ವಾಲ್ಮೀಕಿ ಮುನಿಗಳ ಆಶ್ರಮದಲ್ಲಿ ಸೀತೆ ಕುಶ-ಲವರನ್ನು ಬೆಳೆಸುತ್ತಿದ್ದ ಅವಧಿಯ ಕಥೆ ಸಾಗಿತ್ತು. ಈ ರಾಮಾಯಣದ ಸೀರಿಯಲ್‍ನಲ್ಲಿ ಲವ ದೊಡ್ಡವನು ಮತ್ತು ಕುಶ ಸಣ್ಣವನು ಎಂದು ತೋರಿಸಿದ್ದಾರೆಂದು ಅವರು ಹೇಳಿದರು. ಅಲ್ಲಿದ್ದಷ್ಟು ಹೊತ್ತು ಆ ಸರಣಿಯನ್ನು ನೋಡಿ ಹಿಂದಿರುಗಿದೆ. ಆದರೆ ಮರುದಿನ ಅದೇ ಹೊತ್ತಿಗೆ ರಾಮಾಯಣದ ಸೀರಿಯಲ್ ನೆನಪಾಯಿತು. ಹೆಚ್ಚು ಪ್ರಸಿದ್ಧವಾದ ರಾಮಾನಂದ ಸಾಗರ್‍ರವರ ಸೀರಿಯಲ್‍ಗಿಂತ ಇದು ಹೇಗೆ ಭಿನ್ನವಾಗಿದೆ ಎಂತ ತಿಳಿಯುವ ಕುತೂಹಲ ಮೊಳೆಯಿತು. ಹಾಗಾಗಿ  SONY  SAB ಚ್ಯಾನಲ್‍ಗೆ ತಿರುಗಿಸಿದೆ. ಅಂದಿನಿಂದ ದಿನಾಲೂ ನೋಡಿದೆ.
ಉತ್ತರ ರಾಮಾಯಣದ ಕಥೆ ಮುಂದುವರಿಯುತ್ತಿದ್ದಂತೆ ಪರಿತ್ಯಕ್ತ ಸೀತೆ ಮರಳಿ ಅಯೋಧ್ಯೆಗೆ ಹಿಂದಿರುಗಿ ರಾಮನೊಂದಿಗೆ ಸೇರುವ ಹೊಸ ಆಯಾಮ ಇರುವ ಸಾಧ್ಯತೆ ಗೋಚರಿಸಿತು. ಹಾಗಾಗಿ ನನ್ನ ರಾಮಾಯಣ ಸರಣಿಯ ವೀಕ್ಷಣೆ ಅನೂಚಾನವಾಗಿ ಮುಂದುವರಿಯಿತು. ಜಾಹಿರಾತುಗಳ ಭಾರದ ಹೊರೆಯನ್ನು ತಾಳ್ಮೆಯಿಂದ ಸಹಿಸಿಕೊಂಡು ದಿನದಿನವೂ ರಾಮಾಯಣವನ್ನು ವೀಕ್ಷಿಸಬೇಕಾಯಿತು. ಕೊನೆಯಲ್ಲಿ ನಿರೀಕ್ಷೆಯಂತೆ ಸೀತೆ ವಾಲ್ಮೀಕಿ ಆಶ್ರಮದಿಂದ ಅಯೋಧ್ಯೆಯ ಅರಮನೆಗೆ ಬಂದಾಗ ಆಕೆಗೆ ಪ್ರಜಾಜನರಿಂದಲೂ ರಾಜಮನೆತನದಿಂದಲೂ ಅದ್ಧೂರಿ ಸ್ವಾಗತ ಸಿಕ್ಕಿತು. ಲವಕುಕುಶರಿಬ್ಬರೂ ತಮ್ಮ ತಂದೆಯನ್ನು ಪಡೆದರು. ಅದ್ಭುತ ಪರಾಕ್ರವಿಗಳಾದ ಮಕ್ಕಳನ್ನು ಪಡೆದ ರಾಮನಿಗೂ ಧನ್ಯತೆ ಬಂತು.
ಆದರೆ ಈ ರಾಮಾಯಣದಲ್ಲಿ ಇನ್ನೂ ಕೆಲವು ವಿಶೇಷಗಳಿವೆ. ಸಾಮಾನ್ಯವಾಗಿ ನಮಗೆ ಗೊತ್ತಿರುವ ಉತ್ತರ ರಾಮ ಚರಿತೆಯ ಪ್ರಕಾರ ಕುಶಲವರು ರಾಮನ ಅಶ್ವಮೇಧದ ಯಜ್ಞವನ್ನು ಕಟ್ಟಿಹಾಕಿ ಕುದುರೆಯ ರಕ್ಷಣೆಗೆ ಬಂದ ಶತ್ರುಘ್ನ, ಭರತ ಮತ್ತು ಲಕ್ಷ್ಮಣರನ್ನು ಸೋಲಿಸುತ್ತಾರೆ. ಕೊನೆಗೆ ಬಂದ ರಾಮನಲ್ಲಿ ಮಕ್ಕಳು ಹೋರಾಡುವಾಗ ವಾಲ್ಮೀಕಿ ಮಹರ್ಷಿಗಳು ಬಂದು ರಾಮನಿಗೆ ತನ್ನ ಮಕ್ಕಳ ಪರಿಚಯ ಮಾಡಿಸುತ್ತಾರೆ. ಇವರು ತನ್ನ ಮಕ್ಕಳಾದರೆ ಗರ್ಭದಲ್ಲಿದ್ದಾಗ ಬೋಧಿಸಿದ ಶಸ್ತ್ರ ಪ್ರಯೋಗವನ್ನು ಮಾಡಿ ತೋರಿಸುವಂತೆ ರಾಮನು ಹೇಳುತ್ತಾನೆ. ಕುಶಲವರು ಬಾಣ ಪ್ರಯೋಗಿಸಿ ತೋರಿಸಿದ ಬಳಿಕ ರಾಮನು ಮಕ್ಕಳನ್ನು ಸ್ವೀಕರಿಸುತ್ತಾನೆ. ಮುಂದೆ ಅಶ್ವಮೇಧ ನಡೆಯುವ ಸಭೆಗೆ ಬಂದ ಸೀತೆಯು ತನ್ನ ಮಕ್ಕಳನ್ನು ತಂದೆಯ ಕೈಗೆ ಒಪ್ಪಿಸಿ “ಇಲ್ಲಿಗೆ ತನ್ನ ಬದುಕು ಸಾರ್ಥಕವಾಯಿತೆಂದು” ಹೇಳಿ ಅಲ್ಲಿಂದ ನಿರ್ಗಮಿಸುತ್ತಾಳೆ. ನೇರವಾಗಿ ಸಾಗಿದವಳು ಒಂದೆಡೆ ನಿಂತು ತನ್ನ ತಾಯಿ ಭೂದೇವಿಯನ್ನು ಪ್ರಾರ್ಥಿಸಿ ಬಾಯ್ದೆರೆದ ಭೂಮಿಯಲ್ಲಿ ಸೇರಿಕೊಳ್ಳುತ್ತಾಳೆ. ಈ ವಿದ್ಯಮಾನವನ್ನು ಕಂಡ ಹನುಮಂತನು ಬಂದು ವಿವರಗಳನ್ನಿತ್ತಾಗ ಎಲ್ಲರೂ ದುಃಖಿಸುತ್ತಾರೆಂಬಲ್ಲಿಗೆ ಪ್ರಕರಣ ಮುಗಿಯುತ್ತದೆ. ಹೀಗಾಗಿ ಕುಶಲವರು ಇಷ್ಟು ದಿನ ತಾಯಿಯ ಆರೈಕೆಯಲ್ಲಿ ಬೆಳೆದವರು ಮುಂದೆ ತಂದೆಯ ಬಳಿ ಮಾತ್ರ ಬೆಳೆಯುವಂತಾಯಿತು. ಏಕಕಾಲದಲ್ಲಿ ಅವರಿಗೆ ತಂದೆ-ತಾಯಿ ಇಬ್ಬರ ಪೋಷಣೆಯು ಸಿಗಲಿಲ್ಲ. ಇದಿಷ್ಟು ನಮಗೆ ಗೊತ್ತಿರುವ ಉತ್ತರ ರಾಮಾಯಣದ ಕಥೆ.
ಆದರೆ ಪ್ರಸ್ತುತ ರಾಮಾಯಣದ ಸರಣಿಯಲ್ಲಿ ಬೇರೆ ಕಥೆ ಇದೆ. ಇದರಲ್ಲಿ ಕಥೆಯ ಅಂತ್ಯದಲ್ಲಿ ಕುಶಲವರಿಗೆ ತಂದೆ ತಾಯಿ ಇಬ್ಬರೂ ಪೋಷಕರಾಗಿ ಸಿಗುತ್ತಾರೆ. ಸೀತೆಯು ಭೂಮಿಯಲ್ಲಿ ಸೇರಿಕೊಳ್ಳುವುದಿಲ್ಲ. ಅತ್ಯಂತ ಹೆಚ್ಚು ಗೌರವ ಪಡೆಯುವ ರಾಣಿಯಾಗಿ ಪ್ರಜೆಗಳಿಂದ ಮಾನ್ಯಳಾಗುತ್ತಾಳೆ.
ವಿಶೇಷವೆಂದರೆ ಈ ಸರಣಿಯಲ್ಲಿ ಸಹಸ್ರಮುಖ ರಾವಣ ಎಂಬ ದೈತ್ಯನೊಬ್ಬನ ಖಳಪಾತ್ರವಿದೆ. ರಾಮನು ತನ್ನ ತಮ್ಮ ದಶಮುಖ ರಾವಣನನ್ನು ಕೊಂದ ಸೇಡನ್ನು ತೀರಿಸುವುದೇ ಅವನ ಬದುಕಿನ ಗುರಿಯಾಗಿರುತ್ತದೆ. ಅವನಿಗೂ ಬ್ರಹ್ಮನ ವರದ ಬಲವಿರುತ್ತದೆ. ಒಬ್ಬಾಕೆ ಹೆಣ್ಣಿಗೆ ಅವಮಾನ ಮಾಡಿದ್ದರಿಂದಾಗಿ ಸಹಸ್ರಮುಖನಿಗೆ ಲಕ್ಷ್ಮಿದೇವಿಯ ಕೈಯಿಂದಲೇ ಮರಣ ಎಂಬುದಾಗಿ ಆಕೆ ಶಾಪ ನೀಡುತ್ತಾಳೆ. ಅದೊಂದು ಶಾಪಕ್ಕೀಡಾಗುವ ಸಂದರ್ಭ ಬಾರದಂತೆ ನೋಡಿಕೊಂಡರೆ ತಾನು ಏನು ಬೇಕಾದರೂ ಮಾಡಬಹುದೆಂದು ಯೋಚಿಸಿದ ಸಹಸ್ರಮುಖನು ತನ್ನ ಸಹಚರ ಬಾಣಾಸುರನನ್ನು ನೇಮಿಸಿ ಕುಶಲವರಿಗೂ ಸೀತೆಗೂ ಅನೇಕ ರೀತಿಯಲ್ಲಿ ತೊಂದರೆಗಳನ್ನು ನೀಡುತ್ತಾನೆ. ತನ್ನ ಮಾಯಕದ ಬಲದಿಂದ ಏನೇನನ್ನೋ  ಸೃಷ್ಠಿಸಿ ಆಪತ್ತುಗಳನ್ನು ಉಂಟು ಮಾಡುತ್ತಾನೆ. ಸೀತೆಯನ್ನು ಕೂಡಾ ಕೊಲ್ಲುವ ಪ್ರಯತ್ನ ಮಾಡುತ್ತಾನೆ. ಆದರೆ ಆಕೆ ತನ್ನ ಆತ್ಮಶಕ್ತಿಯ ಬಲದಿಂದ ಬಚಾವಾಗುತ್ತಾಳೆ. ಅದೇ ರೀತಿ ಲವಕುಶರನ್ನು ಅನೇಕ ವಿಕೃತ ಸಂದರ್ಭಗಳನ್ನು ಸೃಷ್ಠಿಸಿ ನಿರ್ನಾಮಗೊಳಿಸಲು ಯತ್ನಿಸುತ್ತಾನೆ. ಇಂತಹ ಅನೇಕ ದೃಶ್ಯಗಳಿಗಾಗಿಯೇ ಸರಣಿಯ ಅನೇಕ ಎಪಿಸೋಡ್‍ಗಳನ್ನು ಸಹಿಸಬೇಕಾಯ್ತು. ಈ ಮಧ್ಯೆ ವಾಲ್ಮೀಕಿಯವರ ಆಶ್ರಮದಲ್ಲಿ ಸೀತಾದೇವಿಯನ್ನು ಭೇಟಿ ಮಾಡಿದ ಹನುಮಂತನಿಗೆ ಲವಕುಶರು ಆಕೆಯ ಪುತ್ರರೆಂದು ತಿಳಿಯುತ್ತದೆ. ಆದರೆ ಆತನು ಈ ತಿಳುವಳಿಕೆಯನ್ನು ಯಾರಲ್ಲೂ ಬಹಿರಂಗ ಪಡಿಸಬಾರದೆಂದು ವಾಲ್ಮೀಕಿಯವರ ನಿರ್ದೇಶವಿರುತ್ತದೆ. ಹಾಗಾಗಿ ಕುಶಲವರು ತಮ್ಮ ಚಿಕ್ಕಪ್ಪಂದಿರು ಹಾಗೂ ಕೊನೆಗೆ ರಾಮನಲ್ಲಿ ಯುದ್ಧ ಮಾಡುತ್ತಿದ್ದುದನ್ನು ಕಾಣುತ್ತಿದ್ದರೂ ಹನುಮಂತನು ಮಾತಿಗೆ ಕಟ್ಟು ಬಿದ್ದು ಸತ್ಯ ಹೇಳಲಾಗದ ಸ್ಥಿತಿಯಲ್ಲಿ ಉಳಿಯುತ್ತಾನೆ.
ಈ ರಾಮಾಯಣ ಸರಣಿಯಲ್ಲಿ ಕಾಣಸಿಗುವ ಇನ್ನೊಂದು ಮುಖ್ಯ ಪಾತ್ರವೆಂದರೆ ಶೂರ್ಪನಖೆಯದ್ದು. ರಾಮನನ್ನು ಬಯಸಿ ಲಕ್ಷ್ಮಣನಿಂದ ಭಂಗಿತಳಾಗಿ ಅಣ್ಣ ರಾವಣನಿಗೆ ದೂರು ಕೊಟ್ಟು ಆತನನ್ನು ಕಳ್ಳ ನೆಂದೆನಿಸಿಕೊಳ್ಳುವಂತೆ ಮಾಡಿ ಕೊನೆಗೆ ತನ್ನ ವಂಶ ಸಹಿತ ತಾನೂ ಸತ್ತುಹೋದ ದಶಶಿರನ ಮರಣಾನಂತರ ಶೂರ್ಪನಖೆ ಏನಾದಳೆಂದು ಯಾರೂ ಗಮನ ಹರಿಸುವುದಿಲ್ಲ. ಆದರೆ ಆಕೆ ಬಹಳವಾಗಿ ನೊಂದವಳಾಗಿ ತನ್ನಣ್ಣನ ಸಾವಿಗೆ ಸೇಡು ತೀರಿಸುವ ಆಸೆಯಿಂದ ಇರುತ್ತಾಳೆ. ಅದೇ ಉದ್ದೇಶದಿಂದ ರಾಮರಾಜ್ಯ ಸ್ಥಾಪನೆಯ ವಿರುದ್ಧ ತೊಡೆ ತಟ್ಟಿದ್ದ ಸಹಸ್ರಮುಖ ರಾವಣನ ಜೊತೆ ಸೇರಿಕೊಂಡು ರಾಮ-ಸೀತೆ ಮತ್ತು ಕುಶಲವರ ಸಂಹಾರಕ್ಕೆ ತಾನೂ ಕೈಜೋಡಿಸುತ್ತಾಳೆ. ಹೀಗೆ ರಾಮನ ವಿರುದ್ಧ ಒಂದಾದ ರಕ್ಕಸರ ಮಾಯೆಯ ಜಾಲದ ತೊಡಕುಗಳಿಗೆ ಹೆಚ್ಚು ಒಳಗಾಗುವವರು ಸೀತೆ ಮತ್ತು ಲವ-ಕುಶರು.
ಇದೆಲ್ಲಾ ಪೌರಾಣಿಕ ಪಾತ್ರಗಳ ವಿಚಾರವಾಯಿತು. ಆದರೆ ಲವ-ಕುಶರ ಪಾತ್ರಗಳನ್ನು ಹೆಚ್ಚಿನ ಗುಣಗಳಿಂದ ಮಿಂಚುವಂತೆ ಮಾಡಿದ ಎರಡು ಘಟನೆಗಳನ್ನು ಹೇಳಲೇ ಬೇಕು. ರಾಮನಿಗೆ ಲವ-ಕುಶರು ಇನ್ನು ಋಷಿ ಕುಮಾರರೇ ಆಗಿದ್ದರು.  ಆದರೆ ಆ ಬಾಲಕರಿಗೆ ತಮ್ಮ ತಂದೆ ಯಾರೆಂಬುದನ್ನು ತಿಳಿಸಲಾಗಿತ್ತು. ಆದರೆ ಸ್ವತಃ ವಾಲ್ಮೀಕಿಯವರೇ ಬಂದು ರಾಮನಿಗೆ ತಿಳಿಸುವ ತನಕ ತಮ್ಮ ಪರಿಚಯವನ್ನು ಮುಚ್ಚಿಡಬೇಕೆಂದು ಆ ಅವಳಿಜವಳಿ ಮಕ್ಕಳಿಗೆ ತಿಳಿಸಲಾಗಿತ್ತು. ಹಾಗಾಗಿ ಅಯೋಧ್ಯೆಗೆ ಹೋಗಿ ರಾಮನನ್ನು ಭೇಟಿಯಾದರೂ ತಾವು ನಿನ್ನ ಮಕ್ಕಳು ಎಂತ ಹೇಳುವ ಸಾಧ್ಯತೆ ಇರಲಿಲ್ಲ.
 ತಾವು ರಾಮನ ಮಕ್ಕಳು ಎಂದು ತಿಳಿದ ಲವಕುಶರು ಆಶ್ರಮದ ಒಬ್ಬ ಋಷಿಯೊಡನೆ ಅಯೋಧ್ಯೆಗೆ ಹೊರಡುತ್ತಾರೆ. ಮಾರ್ಗಮಧ್ಯದಲ್ಲಿ ಒಂದು ಹಳ್ಳಿಯ ಜನರನ್ನು ಸಹಸ್ರಮುಖನ ನಿರ್ದೇಶದಂತೆ ಒಂದು ಗುಹೆಯಲ್ಲಿ ಬಂಧಿಸಿ ಹಿಂಸಿಸಿದ ಘಟನೆ ತಿಳಿಯುತ್ತದೆ. ಅವರಲ್ಲಿ ಕೆಲವರು ರಾಮರಾಜ್ಯದಲ್ಲಿ ಹೀಗಾಯ್ತಲ್ಲಾ ಎಂದು ರೋದಿಸುತ್ತಾರೆ. ಇದನ್ನು ಕೇಳಿದ ಲವಕುಶರು ತಮ್ಮ ಶಸ್ತ್ರ ವಿದ್ಯಾ ಕೌಶಲದಿಂದ ಪರ್ವತವನ್ನು ಸೀಳಿ ಗುಹೆಯಿಂದ ಹಳ್ಳಿಗರನ್ನು ರಕ್ಷಿಸುತ್ತಾರೆ. ಹೀಗೆ ಬಿಡುಗಡೆಯಾದ ಹಳ್ಳಿಗರ ಮುಖಂಡನು ತನ್ನೊಡನೆ ನಿಮ್ನ ಜಾತಿಯವರು ಬರಬಾರದೆಂದು ತಡೆಯುತ್ತಾನೆ. ಒಬ್ಬ ದಲಿತ ಹೆಂಗಸಿನ ಮೇಲೆ ಅಪವಾದ ಹಾಕಿ ಅವಳಿಗೆ ಸೇರಿದ ಎಲ್ಲರೂ ಪ್ರತ್ಯೇಕವಾಗಿರಬೇಕೆಂದು ಆದೇಶಿಸುತ್ತಾನೆ. ಇದನ್ನು ಒಪ್ಪದ ಲವಕುಶರು ಮುಖಂಡನ ಜಾತಿಯವರೆಲ್ಲರೂ ಅವನನ್ನು ಬಿಟ್ಟು ಹಳ್ಳಿಯ ಸಾಧಾರಣ ಜನರೊಂದಿಗೆ ಸೇರುವಂತೆ ಮಾಡುತ್ತಾರೆ. ರಾಮರಾಜ್ಯದಲ್ಲಿ ಜಾತಿಭೇದದ ಭಾವನೆ ಇರಬಾರದೆಂದು ವಾದಿಸುತ್ತಾರೆ. ಕೊನೆಗೆ ಏಕಾಂಗಿಯಾದ ಮುಖಂಡನ ಸಮ್ಮುಖದಲ್ಲೇ ಆ ದಲಿತ ಮಹಿಳೆಯನ್ನೇ ಊರಿನ ಮುಖ್ಯಸ್ಥೆಯಾಗಿ ಮಾಡುತ್ತಾರೆ. ಇದು ರಾಮರಾಜ್ಯದ ಚಹರೆ ಎಂಬುದಾಗಿ ಅವರು ಪ್ರತಿಷ್ಟಾಪಿಸುತ್ತಾರೆ.
ಅಲ್ಲಿಂದ ಮುಂದುವರಿದ ಲವ-ಕುಶರು ಅಯೋಧ್ಯೆಯನ್ನು ತಲುಪುತ್ತಾರೆ. ಅಲ್ಲಿ ಒಬ್ಬಾಕೆ ಗಂಡಸರ ದಬ್ಬಾಳಿಕೆ ಹಾಗೂ ಹೆಂಗಸರ ಗೋಳಿನ ಬಗ್ಗೆ ದುಃಖಿಸುತ್ತಿರುತ್ತಾಳೆ. ಆಕೆ ಸೀತೆಯ ಮೇಲೆ ಅಪವಾದ ಹೊರಿಸಿದ ಮಡಿವಾಳನ ಹೆಂಡತಿಯಾಗಿದ್ದಳು. ಲವಕುಶರು ಈ ವಿಷಯವನ್ನು ರಾಮನಲ್ಲಿ ಹೇಳಿ ಸರಿಪಡಿಸುವುದಾಗಿ ಭರವಸೆ ನೀಡಿದರು. ಆದರೆ ಮಾರ್ಗಮಧ್ಯದಲ್ಲೇ ಈ ಹುಡುಗರನ್ನು ತಡೆದ ಗಂಡಸರು ತಮ್ಮ ಮಾತಿನಂತೆ ಹೆಂಗಸರು ನಡೆದುಕೊಳ್ಳಬೇಕೆಂದು ತಾಕೀತು ಮಾಡಿದರು. ಆದರೆ ಕುಶಲವರು ಅವರಲ್ಲಿ “ನೀವೆಲ್ಲ ಒಂದೇ ಒಂದು ದಿನ ನಿಮ್ಮ ಪತ್ನಿಯರನ್ನು ಬಿಟ್ಟು ಸುಖವಾಗಿ ಬದುಕಿ ನೋಡೋಣ” ಎಂದು ಸವಾಲು ಹಾಕಿದರು. ಅಲ್ಲದೆ ಹೆಂಗಸರೆಲ್ಲ ತಮ್ಮ ಮನೆಗಳಿಂದ ದೂರ ಇಡುವಂತೆ ಉಪಾಯ ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ನೋಡಿಕೊಂಡು ಮನೆ ನಿಭಾಯಿಸುವ ಸವಾಲನ್ನು ಎದುರಿಸುವಲ್ಲಿ ಗಂಡಸರು ವಿಫಲರಾದರು. ಅವರು ಸಮಸ್ಯೆಯನ್ನು ಶ್ರೀರಾಮನ ಬಳಿಗೆ  ಒಯ್ದರು. ಆದರೆ ರಾಮನು ಕೂಡಾ ಮಹಿಳೆಯರ ಆಂದೋಲನದಲ್ಲಿ ತಪ್ಪಿಲ್ಲ. ಗಂಡ ಹೆಂಡತಿ ಕೂಡಿಯೇ ಸಂಸಾರ ನಡೆಸಬೇಕು ಎಂದು ಬುದ್ಧಿವಾದ ಹೇಳಿದ. ಈ ಸಂದರ್ಭದಲ್ಲಿ ಹೆಚ್ಚು ಸಂಕಟಕ್ಕೆ ಒಳಗಾದವನೆಂದರೆ ಸೀತಾದೇವಿಯ ಮೇಲೆ ಅಪವಾದ ಹಾಕಿದ ಮಡಿವಾಳನೇ. ಆತನಿಗೆ ಬುದ್ಧಿ ಬಂತು. ತಾನು ಮಾಡಿದ ಕೃತ್ಯಕ್ಕಾಗಿ ರೋದಿಸಿದ. ತನ್ನ ಹೆಂಡತಿಯಲ್ಲಿ ಕ್ಷಮೆ ಕೇಳಿದ.  ಹಾಗೆಯೇ ಎಲ್ಲಾ ಗಂಡಸರು ತಮ್ಮತಮ್ಮ ಹೆಂಡತಿಯರಲ್ಲಿ ಕ್ಷಮೆ ಕೇಳಿದರು. ಅವರೆಲ್ಲರೂ ಇಬ್ಬರು ಋಷಿಕುಮಾರರ ಈ ಸಾಹಸಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀರಾಮನೂ ಕೂಡಾ ತನ್ನ ರಾಜ್ಯದಲ್ಲಿ  ಜೀವಂತವಾಗಿದ್ದ ಸ್ತ್ರೀ ಅಸಮಾನತೆಯನ್ನು ನಿವಾರಿಸಿದ ಶ್ರೇಯಸ್ಸನ್ನು ಮಕ್ಕಳಿಗೆ ನೀಡಿದ. ಹೀಗೆ ಈ ಸರಣಿಯಲ್ಲಿ ಲವ-ಕುಶರು ಸಾಮಾಜಿಕ ಸಮಾನತೆ ಹಾಗೂ ಸ್ತ್ರೀ ಸಮಾನತೆಯ ಎರಡು ಸುಧಾರಣೆಗಳನ್ನು ಮಾಡಿದ್ದು ದಾಖಲಾಗಿದೆ.
ಬರಹ :
ಚಂದ್ರಶೇಖರ ದಾಮ್ಲೆ

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಇದನ್ನೂ ಓದಿ

ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ
ಸ್ವಾತಂತ್ರ್ಯಕ್ಕಾಗಿ ಮದುವೆ
August 14, 2025
8:43 PM
by: ಡಾ.ಚಂದ್ರಶೇಖರ ದಾಮ್ಲೆ
ಬದುಕು ಪುರಾಣ | ಜ್ಞಾನದ ಪ್ರತಿನಿಧಿ ಗಂಗಾಪುತ್ರ
August 10, 2025
7:00 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಹಲಸಿನ ಹಣ್ಣಿನ ಹಲ್ವ
August 9, 2025
7:37 AM
by: ದಿವ್ಯ ಮಹೇಶ್
ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ

ಪ್ರಮುಖ ಸುದ್ದಿ

MIRROR FOCUS

ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ
August 15, 2025
6:43 AM
by: The Rural Mirror ಸುದ್ದಿಜಾಲ
ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ
August 15, 2025
6:43 AM
by: The Rural Mirror ಸುದ್ದಿಜಾಲ
ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |
August 15, 2025
6:34 AM
by: The Rural Mirror ಸುದ್ದಿಜಾಲ
ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ
August 14, 2025
8:55 PM
by: The Rural Mirror ಸುದ್ದಿಜಾಲ
ಸಗಣಿಯಿಂದ 5500 ಕಿಮೀ ಮಾಲಿನ್ಯ ರಹಿತ ಪ್ರಯಾಣ..!
August 14, 2025
7:39 AM
by: ವಿಶೇಷ ಪ್ರತಿನಿಧಿ

Editorial pick

4,000 ವರ್ಷಗಳಷ್ಟು ಹಳೆಯ ಹಲ್ಲುಗಳಲ್ಲಿ ಅಡಿಕೆ ಜಗಿದ ಪುರಾವೆ..!
August 9, 2025
6:54 AM
by: ದ ರೂರಲ್ ಮಿರರ್.ಕಾಂ
ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ
July 26, 2025
8:18 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಕೊಳೆರೋಗ ಇದೆಯೇ…? | ಮಾಹಿತಿ ದಾಖಲಿಸಬಹುದೇ…?
July 24, 2025
5:20 PM
by: ದ ರೂರಲ್ ಮಿರರ್.ಕಾಂ

ವಿಡಿಯೋ

60 ಸೆಕೆಂಡುಗಳಲ್ಲಿ 10 ಆಸನಗಳ ಪ್ರದರ್ಶಿಸಿದ ಋತ್ವಿ | ಯೋಗದಲ್ಲಿ ಚನ್ನರಾಯಪಟ್ಟಣದ ಬಾಲಕಿ ಸಾಧನೆ
June 19, 2025
11:21 PM
by: The Rural Mirror ಸುದ್ದಿಜಾಲ
ಇದು ಬರೀ ಚಿಪ್ಪಿಯಲ್ಲ..!
June 14, 2025
8:17 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ನಾಡಿಗೆ ಬೇಕು ತರಕಾರಿ
April 5, 2025
8:14 AM
by: ದ ರೂರಲ್ ಮಿರರ್.ಕಾಂ
ಪಪ್ಪಾಯಿ ಕೃಷಿ ಕಲಿಸಿದ ಪಾಠ
March 30, 2025
11:29 PM
by: ದ ರೂರಲ್ ಮಿರರ್.ಕಾಂ

ಸುದ್ದಿಗಳು

ಹವಾಮಾನ ವರದಿ | 15-08-2025 | ಸದ್ಯ ಸಾಮಾನ್ಯ ಮಳೆ, ಆ.20 ರ ನಂತರ ಮಳೆ ಕಡಿಮೆ
August 15, 2025
2:23 PM
by: ಸಾಯಿಶೇಖರ್ ಕರಿಕಳ
ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ
ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ
August 15, 2025
6:54 AM
by: The Rural Mirror ಸುದ್ದಿಜಾಲ
ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ
August 15, 2025
6:43 AM
by: The Rural Mirror ಸುದ್ದಿಜಾಲ
ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |
August 15, 2025
6:34 AM
by: The Rural Mirror ಸುದ್ದಿಜಾಲ
ಕಾವೇರಿ ನದಿ ನೀರು ಮಲಿನ ತಡೆಯಲು ಕ್ರಮ | ಅಸ್ತಿ ವಿಸರ್ಜನೆ ಮಾಡದಂತೆ ಸೂಚನೆ
August 14, 2025
8:55 PM
by: The Rural Mirror ಸುದ್ದಿಜಾಲ
ಸ್ವಾತಂತ್ರ್ಯಕ್ಕಾಗಿ ಮದುವೆ
August 14, 2025
8:43 PM
by: ಡಾ.ಚಂದ್ರಶೇಖರ ದಾಮ್ಲೆ
ಅಡಿಕೆ ಕೊಳೆರೋಗ | ಸಿಎಂ ಜೊತೆ ಶಾಸಕ ಅಶೋಕ್ ಕುಮಾರ್ ರೈ ಚರ್ಚೆ
August 14, 2025
2:53 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 14-08-2025 | ಆ.20 ರವರೆಗೂ ಮಳೆ -ತುಂತುರು ಮಳೆ
August 14, 2025
2:48 PM
by: ಸಾಯಿಶೇಖರ್ ಕರಿಕಳ
ಸಗಣಿಯಿಂದ 5500 ಕಿಮೀ ಮಾಲಿನ್ಯ ರಹಿತ ಪ್ರಯಾಣ..!
August 14, 2025
7:39 AM
by: ವಿಶೇಷ ಪ್ರತಿನಿಧಿ

ವಿಶೇಷ ವರದಿ

4,000 ವರ್ಷಗಳಷ್ಟು ಹಳೆಯ ಹಲ್ಲುಗಳಲ್ಲಿ ಅಡಿಕೆ ಜಗಿದ ಪುರಾವೆ..!
August 9, 2025
6:54 AM
by: ದ ರೂರಲ್ ಮಿರರ್.ಕಾಂ
ಈ ಬಾರಿಯ ಮಳೆಯಿಂದ ಅಡಿಕೆಗೆ ಕೊಳೆರೋಗ | ಮರ ಏರಿ ಔಷಧಿ ಸಿಂಪಡಿಸಿದ ಮಹಿಳೆ |
August 6, 2025
7:16 AM
by: ವಿಶೇಷ ಪ್ರತಿನಿಧಿ
ಹವಾಮಾನ ಸಂಕಷ್ಟ | ಆಹಾರ ಬೆಲೆಗಳ ಏರಿಳಿತಕ್ಕೆ ಕಾರಣ ಏನು ? – ಅಧ್ಯಯನ ವರದಿ
July 26, 2025
8:18 AM
by: ದ ರೂರಲ್ ಮಿರರ್.ಕಾಂ
ಕೃಷಿಕರಿಗೆ ಕೈಕೊಟ್ಟ ಹವಾಮಾನ | ಅಡಿಕೆಗೆ ವ್ಯಾಪಕವಾಗಿ ಹರಡಿದ ಕೊಳೆರೋಗ | ರೋಗನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನದಲ್ಲಿ ಅಡಿಕೆ ಬೆಳೆಗಾರರು |
July 24, 2025
10:48 AM
by: ವಿಶೇಷ ಪ್ರತಿನಿಧಿ

OPINION

ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ
ಗ್ರಾಮೀಣ ಆರ್ಥಿಕತೆಯ “ಸಹಕಾರಿ” ಸಂಘದ “ಮಾದರಿ” ಗುಟ್ಟು…!
August 15, 2025
7:07 AM
by: ರಮೇಶ್‌ ದೇಲಂಪಾಡಿ
ಕಾಡೆಂದರೇನು…? , ಅರಣ್ಯ ಸಚಿವರಿಗೆ ಇದೊಂದು ಮನವಿ..
July 24, 2025
12:43 PM
by: ಪ್ರಬಂಧ ಅಂಬುತೀರ್ಥ
ಹಸುರೆಂಬ ಉಸಿರಿನ ಮಹತ್ವ ಇದು…
July 13, 2025
10:55 PM
by: ಎ ಪಿ ಸದಾಶಿವ ಮರಿಕೆ
ಹಲಸಿನ ಬೀಜದ ಖಾರಾ ಸೇವ್‌ – ನೀವೂ ಮಾಡಿನೋಡಿ
July 13, 2025
10:15 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group