Advertisement
ವಿಶೇಷ ವರದಿಗಳು

ಇಂಗುಗುಂಡಿ ನಿರ್ಮಿಸಿದ ಮಹಿಳಾ ತಂಡ | 6 ಮಂದಿ ಮಹಿಳೆಯರಿಂದ 236 ಕ್ಕೂ ಹೆಚ್ಚು ಇಂಗುಗುಂಡಿ |

Share

ಮಹಿಳೆಯರ ತಂಡವೊಂದು ಊರಿನ ಜಲಸಮಸ್ಯೆ ಪರಿಹಾರಕ್ಕೆ ಇಂಗುಗುಂಡಿ ತೋಡಿದೆ. 6 ಮಂದಿ ಮಹಿಳೆಯರ ತಂಡವು 236ಕ್ಕೂ ಹೆಚ್ಚು ಇಂಗುಗುಂಡಿಗಳನ್ನು  ನಿರ್ಮಾಣ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿಯ ಚಿಗುರು ಸಂಜೀವಿನಿ ಒಕ್ಕೂಟದ ಮಹಿಳೆಯರು ಈ ಕೆಲಸ ಮಾಡಿದವರು.  ಗ್ರಾಮದಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ವೃದ್ಧಿಸುವ ಮೂಲಕ ಮಹಿಳೆಯರು ಇತರರಿಗೆ ಮಾದರಿಯಾಗಿದ್ದಾರೆ.

ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿಯ ಚಿಗುರು ಸಂಜೀವಿನಿ ಒಕ್ಕೂಟದ 6 ಮಂದಿ ಮಹಿಳೆಯರ ತಂಡ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸುಮಾರು 236ಕ್ಕೂ ಹೆಚ್ಚು ಇಂಗುಗುಂಡಿಗಳನ್ನು  ನಿರ್ಮಾಣ ಮಾಡಿದೆ. ಬೇಸಿಗೆಯ ಕಾವು ಹೆಚ್ಚಾಗುತ್ತಿದ್ದಂತೆ ನೀರಿನ ಮೂಲಗಳು ಬತ್ತಿಹೋಗುತ್ತವೆ. ಈ ನಿಟ್ಟಿನಲ್ಲಿ ಕುಂಡಡ್ಕ ಕುಶಾಲನಗರದ ಹಿಂದೂ ರುದ್ರಭೂಮಿಯ ಬಳಿ ಈ ಮಹಿಳೆಯರ ತಂಡ ನಿರ್ಮಿಸಿದ ಇಂಗು ಗುಂಡಿ ಈಗ ಉಪಕಾರ ಆಗಿದೆ. ಅಂತರ್ಜಲದ ಹೆಚ್ಚಿಸುವ ಕಾರ್ಯವೂ ಇದಾಗಿದೆ.

ಕಾಮಗಾರಿ ನಿರ್ವಹಿಸಿದ ಮಹಿಳೆಯರಿಗೆ ಮಹಾತ್ಮಾ ಗಾಂಧಿ  ನರೇಗಾ ಯೋಜನೆ ಅಡಿಯಲ್ಲಿ ಉದ್ಯೋಗವೂ ಸಿಕ್ಕಿದೆ. ನರೇಗಾ ಹಣವು ಬದುಕಿಗೂ ಆಸರೆಯಾಗುತ್ತದೆ, ಸಾಮಾಜಿಕ ಕಾಳಜಿಯ ನೀರಿಂಗಿಸುವ ಕೆಲಸವೂ ನಡೆಯುತ್ತದೆ. ಅಷ್ಟೇ ಅಲ್ಲ ಮಣ್ಣಿನ ಸವಕಳಿ ತಡೆ, ಆಸುಪಾಸಿನ ಕೊಳವೆಬಾವಿಗಳಲ್ಲಿ, ಬಾವಿಗಳಲ್ಲೂ ನೀರು ಹೆಚ್ಚಾಗಲು ಈ ಇಂಗುಗುಂಡಿಗಳು ಪರೋಕ್ಷ ಕಾರಣವಾಗುತ್ತದೆ.

ಈ ಬಗ್ಗೆ  ಚಿಗುರು ಸಂಜೀವಿನಿ ಒಕ್ಕೂಟದ ಸದಸ್ಯರೆಲ್ಲವೂ ಖುಷಿ ಪಡುತ್ತಾರೆ. ಉದ್ಯೋಗವೂ ಆಗಿದೆ, ಬದುಕಿಗೆ ಆಸರೆಯೂ ಆಗಿದೆ, ಸಾಮಾಜಿಕ ಕಾರ್ಯವೂ ಆಗಿದೆ ಎನ್ನುತ್ತಾರೆ. ನರೇಗಾ ಯೋಜನೆಯಿಂದ ಮಹಿಳೆಯರು ಸ್ವ ಉದ್ಯೋಗದಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗಿದೆ. ಕಠಿಣ ಪರಿಶ್ರಮದ ಕೆಲಸವನ್ನು ಒಕ್ಕೂಟದ ಸದಸ್ಯೆಯರು ಮಾಡಿ ತೋರಿಸಿದ್ದಾರೆ. ಈ ಕೆಲಸದಿಂದ ತುಂಬಾ ಖುಷಿಯಾಗಿದೆ ಎನ್ನುತ್ತಾರೆ ಒಕ್ಕೂಟದ ಅಧ್ಯಕ್ಷೆ ದಿವ್ಯಲತಾ ಅವರು.

Advertisement

ನಮ್ಮ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಅದಕ್ಕಾಗಿ ನಾವು ಸ್ಮಶಾನದ ಜಾಗವನ್ನು ಆಯ್ಕೆ ಮಾಡಿ ಮನ್ರೇಗಾ  ಯೋಜನೆ ಮೂಲಕ 236 ಇಂಗುಗುಂಡಿ ನಿರ್ಮಿಸಿದ್ದೇವೆ ಎಂದು ಒಕ್ಕೂಟದ ಸದಸ್ಯೆ ನಿರ್ಮಲಾ ಹೇಳುತ್ತಾರೆ.

ಮಹಿಳೆಯರು  ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕೇಂದ್ರ ಸರ್ಕಾರದ ಯೋಜನೆಗಳು  ಸಹಕಾರಿಯಾಗಿದ್ದು,  ಚಿಗುರು ಸಂಜೀವಿನಿ ಒಕ್ಕೂಟದ ಮಹಿಳೆಯರು‌ ನರೇಗಾ ಯೋಜನೆಯ ಮೂಲಕ ಜಲಕ್ರಾಂತಿ ಮಾಡಿ ಮಾದರಿಯಾಗಿದ್ದಾರೆ ಎಂದು ವಿಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಅವರು ಹೇಳುತ್ತಾರೆ.

ಮಹಿಳೆಯರೇ ಒಂದಾಗಿ ಒಂದು ಯೋಜನೆ ಮೂಲಕ ಗ್ರಾಮದ ನೀರು ಉಳಿಸುವ, ಜಲಸಂರಕ್ಷಣೆ ಮಾಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು, ಯೋಜನೆಯ ಸದ್ಭಳಕೆಗೂ ಇದೊಂದು ಮಾದರಿಯಾಗಿದೆ.

A group of women came together to dig a hole and solve the town’s water problem. Working as a team, six women have successfully constructed over 236 Ingugundi. This incredible achievement was carried out by the women of Chiju Sanjeevini Union in Vitlamudnur Gram Panchayat, located in Bantwala Taluk of Dakshina Kannada District. Their dedication and hard work serve as an inspiration to us all.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ

ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್‌ Z ಗಾಗಿ…

3 hours ago

ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ

ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…

3 hours ago

ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?

ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…

3 hours ago

ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್‌ ಸಿಂಗ್‌ ಚೌಹಾನ್‌ ಅವರು…

4 hours ago

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಎಳ್ಳು ಸೇವನೆ ಉತ್ತಮ

ಚಳಿಗಾಲದಲ್ಲಿ ಆಹಾರ ಪದ್ಥತಿಯಲ್ಲೂ ಬದಲಾವಣೆ ಮಾಡಿಕೊಂಡರೆ ಉತ್ತಮ. ಅದರಲ್ಲಿ ಎಳ್ಳು ಸೇವನೆಯೂ ಒಂದು.…

4 hours ago

ನಗರ ಪ್ರದೇಶದ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ವಿತರಣೆ ಸಚಿವ ಸಂಪುಟದಲ್ಲಿ ನಿರ್ಣಯ

ರಾಜ್ಯ ಸರ್ಕಾರ, ರಾಜಧಾನಿ ಬೆಂಗಳೂರಿನ ನಂತರ ಇದೀಗ ರಾಜ್ಯಾದ್ಯಂತ ಆಸ್ತಿ ಮಾಲೀಕರಿಗೆ ಸಿಹಿ…

4 hours ago