ಅಡಿಕೆ ಕೌಶಲ್ಯ ಪಡೆ | ದೋಟಿ ಮೂಲಕ ಅಡಿಕೆ ಕೊಯ್ಲು-ಸಿಂಪಡಣೆ ತರಬೇತಿ ಪಡೆಯುವ ಶಿಬಿರಾರ್ಥಿಗಳು |

January 11, 2022
8:00 AM

ಕ್ಯಾಂಪ್ಕೋ ನೇತೃತ್ವದಲ್ಲಿ ಅಡಿಕೆ ಕೌಶಲ್ಯ ಪಡೆ ಸಜ್ಜಾಗುತ್ತಿದೆ. ಕಳೆದ ಬಾರಿ ಆರಂಭವಾದ ಅಡಿಕೆ ಕೌಶಲ್ಯ ಪಡೆ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ದೋಟಿಯ ಮೂಲಕ ಅಡಿಕೆ ಕೊಯ್ಲು ಹಾಗೂ ಔಷಧಿ ಸಿಂಪಡಣೆಯ ಬಗ್ಗೆ ತರಬೇತಿ ಶಿಬಿರ ಆಯೋಜಿಸಿದೆ. ಮೂರು ದಿನಗಳ ಕಾಲ ವಿಟ್ಲದಲ್ಲಿ ಈ ಶಿಬಿರ ನಡೆಯಲಿದೆ.

ವಿಟ್ಲದ ಸಿಪಿಸಿಆರ್‌ಐ ವಠಾರದಲ್ಲಿ ಕ್ಯಾಂಪ್ಕೋ ನೇತೃತ್ವದಲ್ಲಿ ಅಡಿಕೆ ಪತ್ರಿಕೆ, ಸಿಪಿಸಿಆರ್‌ಐ ಹಾಗೂ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಆಶ್ರಯದಲ್ಲಿ ಆಯೋಜನಗೊಂಡ ಅಡಿಕೆ ಕೌಶಲ್ಯ ಪಡೆಯ ಫೈಬರ್‌ದೋಟಿ ಮೂಲಕ ಅಡಿಕೆ ಕೊಯ್ಲು ಮತ್ತು ಸಿಂಪಡಣೆ ತರಬೇತಿ ಶಿಬಿರದಲ್ಲಿ 19  ಮಂದಿ ಶಿಬಿರಾರ್ಥಿಗಳು ಇದ್ದಾರೆ. ಪೈಬರ್‌ ದೋಟಿಯ ಮೂಲಕ ಅಡಿಕೆ ಕೊಯ್ಲು ಮಾಡುವ ವಿಧಾನಗಳು ಹಾಗೂ ದೋಟಿಯನ್ನು ಸುಲಭವಾಗಿ ಆಧರಿಸುವ ಹಾಗೂ ತಾಂತ್ರಿಕ ವಿಧಾನಗಳನ್ನು ತಿಳಿಸಿಕೊಡಲಾಗುತ್ತಿದೆ. ಅದರ ಜೊತೆಗೆ ವಿದ್ಯುತ್‌ ಅವಘಡ ತಪ್ಪಿಸುವುದು , ಸೂಕ್ತ ಮುಂಜಾಗ್ರತಾ ಕ್ರಮಗಳು ಇತ್ಯಾದಿಗಳನ್ನು ತಿಳಿಸಲಾಗುತ್ತಿದೆ. ವಿಶೇಷವಾಗಿ ತರಬೇತಿ ನೀಡಲು ಉತ್ತರ ಕನ್ನಡ ಜಿಲ್ಲೆಯ ಮುರೂರು ಕಲ್ಲಬ್ಬೆಯ ರಾಜೇಶ್‌ಭಟ್‌, ಆರ್‌ಜಿ ಹೆಗಡೆ , ರಾಜು ಶೆಟ್ಟಿ, ರಮೇಶ್ ಭಟ್ ಆಗಮಿಸಿದ್ದಾರೆ. ಅವರ ಜೊತೆಗೆ ಸ್ಥಳೀಯವಾಗಿ ಕೆಲವು ವರ್ಷಗಳಿಂದ ಫೈಬರ್‌ ದೋಟಿ ಬಳಕೆ ಮಾಡುತ್ತಿರುವ ಮೈಕೆ ಗಣೇಶ್‌ ಭಟ್‌ ಅವರೂ ಇದ್ದಾರೆ.

ದೋಟಿ ಬಳಕೆಯ ವಿಧಾನಗಳಲ್ಲಿ ಪ್ರಮುಖವಾಗಿ ದೈಹಿಕ ಶ್ರಮ ಕಡಿಮೆಯಾಗುವಂತೆ ಹಾಗೂ ಕತ್ತು ನೋವು ಇತ್ಯಾದಿಗಳಿಂದ ದೂರ ಇರುವ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಪೈಬರ್‌ ದೋಟಿಯು ಮುಂದಿನ ದಿನಗಳಲ್ಲಿ  ಅನಿವಾರ್ಯವಾಗುವ ಸ್ಥಿತಿ ಅಡಿಕೆ ಬೆಳೆಗಾರರಿಗೆ ಬರಲಿದೆ. ಇದಕ್ಕಾಗಿ ಸೂಕ್ತ ರೀತಿಯ ತರಬೇತಿ ಅಗತ್ಯವಾಗಿದೆ ಎನ್ನುವುದು ಅಭಿಪ್ರಾಯವಾಗಿದೆ. ಶಿಬಿರದಲ್ಲಿ ಯುವಕರೇ ಹೆಚ್ಚಾಗಿ ಭಾಗವಹಿಸಿದ್ದು ಸೀಮಿತ ಜನರಿಗೆ ಮಾತ್ರಾ ಅವಕಾಶ ಮಾಡಲಾಗಿತ್ತು. ಸುಮಾರು 50 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅದರಲ್ಲಿ  20 ಜನ ಶಿಬಿರಾರ್ಥಿಗಳಿಗೆ ಮಾತ್ರವೇ ಈ ಬಾರಿ ಅವಕಾಶ ಲಭ್ಯವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ತಾಂತ್ರಿಕ ಶಿಬಿರಗಳು ಹಳ್ಳಿಗಳಲ್ಲಿ  ಆರಂಭವಾಗಬೇಕಿದೆ.

This slideshow requires JavaScript.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಹವಾಮಾನ ವರದಿ | 11-01-2026| ಇಂದು ಕೆಲವೆಡೆ ಮಳೆ ನಿರೀಕ್ಷೆ | ಎಲ್ಲೆಲ್ಲಿ ಮಳೆ ಇರಬಹುದು..?
January 11, 2026
2:11 PM
by: ಸಾಯಿಶೇಖರ್ ಕರಿಕಳ
ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ
January 11, 2026
9:58 AM
by: ದ ರೂರಲ್ ಮಿರರ್.ಕಾಂ
ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ
January 11, 2026
8:30 AM
by: ದ ರೂರಲ್ ಮಿರರ್.ಕಾಂ
ಬಾಯಿಯ ಕ್ಯಾನ್ಸರ್ ಭೀತಿ ಕಡಿಮೆ ಮಾಡಲಿದೆಯೇ ‘ಇ-ಬೀಮ್’ ತಂತ್ರಜ್ಞಾನ? ಅಡಿಕೆ ಸಂಸ್ಕರಣೆಯಲ್ಲಿ ಹೊಸ ಮನ್ವಂತರ!
January 11, 2026
7:36 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror