ಸುಳ್ಯದ ಕೃಷಿ ಸಖಿಯರಿಗೆ ಬೆಂಗಳೂರಿನಲ್ಲಿ ICAR-IIHR ಕೌಶಲ್ಯ ವೃದ್ಧಿ ತರಬೇತಿ ಕಾರ್ಯಾಗಾರ | ಮೊದಲ ಬಾರಿಗೆ ಕೃಷಿಯಲ್ಲಿ ಹೊಸ ಹೆಜ್ಜೆ |

September 19, 2025
9:41 PM

ಎನ್ ಆರ್ ಎಲ್ ಎಂ ಸಂಜೀವಿನಿ ಸುಳ್ಯ ತಾಲೂಕಿನ ಕೃಷಿ ಸಖಿಯರ ಕೌಶಲ್ಯ ವೃದ್ಧಿಗಾಗಿ ಸುಧಾರಿತ ತೋಟಗಾರಿಕಾ ತರಬೇತಿಯನ್ನು ಭಾ. ಕೃ. ಸಂ.ಪ. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರಿನಲ್ಲಿ ಕೃಷಿ ವಿಜ್ಞಾನ ಕೇಂದ್ರ ದ.ಕ ಜಿಲ್ಲೆ ಇವರ ಸಹಯೋಗದೊಂದಿಗೆ RKVY ಯೋಜನೆಯಡಿ ಎರಡು ದಿನಗಳ ತರಬೇತಿಯನ್ನು ಹದಿನೆಂಟು ಗ್ರಾಮ ಪಂಚಾಯತ್ ಗಳಿಂದ ಆಯ್ಕೆಗೊಂಡ ಸಕ್ರಿಯ ಕೃಷಿ ಸಖಿಯರುಗಳಿಗೆ ಹಮ್ಮಿಕೊಳ್ಳಲಾಯಿತು.

ಈಗಾಗಲೇ ಸುಳ್ಯ ತಾಲೂಕಿನ ಕೃಷಿ ಸಖಿಯರು ಕೃಷಿಕರ ಪರವಾದ ಚಟುವಟಿಕೆಗಳನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದ್ದು, ಈ ಬಾರಿ ತರಬೇತಿಯನ್ನು ICAR-IIHR ಬೆಂಗಳೂರಿನಲ್ಲಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಡಾ. ತುಷಾರ್ ಕಾಂತಿ ಬೆಹೇರ ನಿರ್ದೇಶಕರು ICAR- ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ಇವರು ತರಬೇತಿಯನ್ನು ಉದ್ಘಾಟಿಸಿ, ದ.ಕ ಜಿಲ್ಲೆಯಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಹಳದಿ ರೋಗ ವ್ಯಾಪಕವಾಗಿರುವುದರಿಂದ ಕೃಷಿಕರು ಸಮಸ್ಯೆಗಳಿಗೆ ತುತ್ತಾಗಿದ್ದಾರೆ. ಇದಕ್ಕಾಗಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳು, ತಾಂತ್ರಿಕತೆಗಳು, ಸುಧಾರಿತ ಪದ್ಧತಿಗಳು ಮತ್ತು ನೈಸರ್ಗಿಕ ವಿಕೋಪಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ತಳಿಗಳನ್ನು ತಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಂಡು ಹೆಚ್ಚಿನ ಉತ್ಪಾದನೆ ಮತ್ತು ಆದಾಯವನ್ನು ಪಡೆದುಕೊಂಡು ಸುಸ್ಥಿರ ಜೀವನೋಪಾಯವನ್ನು ಹಮ್ಮಿಕೊಳ್ಳಬೇಕೆಂದು ಕರೆ ನೀಡಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಡಾ. ವಿ. ಶಂಕರ್ ಪ್ರಧಾನ ವಿಜ್ಞಾನಿ( ತರಕಾರಿ ಬೆಳೆಗಳು),ಡಾ. ಎಚ್. ಪಿ. ಸುಮಂಗಲ ಪ್ರಧಾನ ವಿಜ್ಞಾನಿಗಳು ( ಹೂವಿನ ಬೆಳೆಗಳು), ಡಾ. ಆರ್. ಸೆಂಥಿಲ್ ಕುಮಾರ್ ( ಪ್ರಧಾನ ವಿಜ್ಞಾನಿ, ಸಾಮಾಜಿಕ ವಿಜ್ಞಾನ ಮತ್ತು ತರಬೇತಿ ವಿಭಾಗ) ಇವರುಗಳ ನೇತೃತ್ವದಲ್ಲಿ ತರಬೇತಿಯನ್ನು ಆಯೋಜಿಸಲಾಗಿತ್ತು.

ಐಸಿಎಆರ್-ಐಐಎಚ್ಆರ್ ಹಣ್ಣಿನ ಬೆಳೆಗಳ ತಂತ್ರಜ್ಞಾನಗಳು, ತರಕಾರಿ ಬೆಳೆಗಳ ತಂತ್ರಜ್ಞಾನಗಳು, ಹೂವಿನ ಬೆಳೆಗಳ ತಂತ್ರಜ್ಞಾನಗಳು, ಸುಗ್ಗಿಯ ನಂತರದ ತಂತ್ರಜ್ಞಾನಗಳು ಮತ್ತು ಯಂತ್ರೋಪಕರಣಗಳು, ಬೆಳೆ ಸಂರಕ್ಷಣಾ ತಂತ್ರಜ್ಞಾನಗಳ ಕುರಿತು ತರಬೇತಿ ನೀಡಲಾಯಿತು. ಉದ್ದಿಮೆ ಪ್ರಾರಂಭ ಮಾಡುವ ಮಾಹಿತಿಯನ್ನು ನೀಡುವುದಕ್ಕಾಗಿ ಇಂಡೋ – ಅಮೇರಿಕನ್ ಹೈಬ್ರಿಡ್ ಸಂಸ್ಥೆಗೆ ಭೇಟಿ ನೀಡಿ ಮಾಹಿತಿ ಪಡೆಯಲಾಯಿತು.

ತರಬೇತಿಯ ಅವಧಿಯಲ್ಲಿ ಡಾ. ಸುಮಂಗಲ ಅವರು ಜೊತೆಗೆ ಇದ್ದು ಕೃಷಿ ಸಖಿಯರಿಗೆ ತರಬೇತಿ ಯಶಸ್ವಿಯಾಗಿ ಕೊಡಿಸುವಲ್ಲಿ ಸಹಕಾರ ನೀಡಿದ್ದಾರೆ ಮತ್ತು ಮುಂದೆ ಪಡೆದುಕೊಂಡ ತರಬೇತಿಯನ್ನು ಕಾರ್ಯಗತಗೊಳಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಸಹಕಾರ ಬೇಕಾದ್ದಲ್ಲಿ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.

ತರಬೇತಿಯಲ್ಲಿ ಭಾಗವಹಿಸಿರುವ ಕೃಷಿ ಸಖಿಯರಿಗೆ ಪ್ರಮಾಣ ಪತ್ರ, ಸೀಡ್ಸ್ ಕಿಟ್, ತಾಂತ್ರಿಕ ಕೈಪಿಡಿ ನೀಡಲಾಯಿತು. ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಡಾ. ಟಿ.ಜೆ ರಮೇಶ ಅವರು ತರಬೇತಿ ಪಡೆಯಲು ಮಾರ್ಗದರ್ಶನ ನೀಡಿ ಸಹಕರಿಸಿದರು. ಸುಳ್ಯದ ಟಿ.ಪಿ.ಎಂ ಶ್ವೇತಾ, ಹೃತಿಕ್ ಕೃಷಿ ಜೀವನೋಪಾಯ, ಸಂಪಾಜೆ ಕೃಷಿ ಸಖಿ ಮೋಹಿನಿ(ನಿಶಾ) ಸಹಕಾರ ನೀಡಿರುತ್ತಾರೆ. ಡಾ.ವಿ. ಶಂಕರ್, ಡಾಕ್ಟರ್ ಎಚ್. ಪಿ. ಸುಮಂಗಲ, ಡಾ.ಆರ್.ಸೆಂಥಿಲ್ ಕುಮಾರ್ ಅವರು ತರಬೇತಿ ಕಾರ್ಯಕ್ರಮದ ಸಂಯೋಜನೆ ಮಾಡಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ
ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ
September 12, 2026
7:30 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?
September 12, 2026
7:08 AM
by: ದ ರೂರಲ್ ಮಿರರ್.ಕಾಂ
ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?
September 11, 2026
8:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror