ಚಳಿಗಾಲ(Winter) ಶುರುವಾಗಿದೆ. ಬೆಳಗೆದ್ದಾಗ ಮೈಯೆಲ್ಲಾ ಗಡಗಡ, ಒಡೆದ ತುಟಿಗಳು(Lips), ಚರ್ಮದ(Skin) ಕಿರಿಕಿರಿ. . ಹಾಗಿದ್ದರೆ ಚಳಿಗಾಲದಲ್ಲಿ ನಮ್ಮ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ.
ಪುರುಷೋ ಅಯಂ ಲೋಕಸಂಮಿತಃ’ ಒಬ್ಬ ಮನುಷ್ಯನು ಪಂಚಮಹಾಭೂತಾದಿ ಗಳಿಂದ ಮಾಡಿದ ಈ ಲೋಕವನ್ನು ಪ್ರತಿಬಿಂಬಿ ಸುತ್ತಾನೆ. ಹಾಗಾಗಿ ಸೂಕ್ಷ್ಮವಾಗಿ ಗಮನಿಸಿದಾಗ ಋತುವಿಗೆ ಅನುಗುಣವಾಗಿ ನಮ್ಮ ದೇಹದಲ್ಲಿಯೂ ಬದಲಾವಣೆಯನ್ನು ಕಾಣಬಹುದು. ಉದಾಹರಣೆಗೆ ಬೇಸಿಗೆ ಕಾಲದಲ್ಲಿ ದೇಹದ ಶಕ್ತಿ ಕುಂದುವುದರಿಂದ ಸುಲಭವಾಗಿ ಆಯಾಸವಾಗುವುದು, ಶೀತ ಕಾಲದಲ್ಲಿ ತ್ವಚೆ, ಹಿಮ್ಮಡಿ, ತುಟಿಗಳು ಒಡೆಯುವುದು ಇತ್ಯಾ ದಿಗಳು, ಹಾಗಿದ್ದ ಮೇಲೆ ಏನು ಪ್ರಭಾವ ಬೀರಬಹುದು? ವಿಶೇಷವಾಗಿ ನಮ್ಮ ತ್ವಚೆಯ ಮೇಲೆ ಈ ಚಳಿಗಾಲದ ಪರಿಣಾಮ ಏನು? ಹಾಗೂ ಅದರ ಉಪಚಾರಗಳನ್ನು ತಿಳಿಯುವ ಮೊದಲು ಈ ಕಾಲಗಳ ಬಗ್ಗೆ ಒಂದು ಕಿರುಪರಿಚಯ ಮಾಡಿಕೊಳ್ಳೋಣ.
ಕಾಲದ ಪರಿಣಾಮ ನಿಮಗೆ ತಿಳಿದೇ ಇರುವ ಹಾಗೇ ಕಾಲವನ್ನು ಉತ್ತರಾಯಣ ಮತ್ತು ದಕ್ಷಿಣಾಯಣವಾಗಿಯೂ ಅಥವಾ ಸರಳವಾಗಿ ಬೇಸಿಗೆ ಕಾಲ, ಮಳೆಗಾಲ ಹಾಗೂ ಚಳಿಗಾಲವಾಗಿಯೂ ವಿಂಗಡಿಸ ಬಹುದು. ಈ ಕಾಲಗಳ ಪರಿಣಾಮವಾಗಿ ನಮ್ಮ ದೇಹಗಳಲ್ಲಿನ ವಾತ, ಪಿತ್ತ, ಕಫಗಳ ಏರು-ಪೇರು ಸರ್ವೆ ಸಾಮಾನ್ಯ. ಹಾಗಾಗಿಯೇ ಕಾಲ ಬದಲಾದಂತೆ ಕೆಮ್ಮು, ನೆಗಡಿ, ಜ್ವರ,ಹಸಿವೆಯಲ್ಲಿ ವ್ಯತ್ಯಾಸವನ್ನು ಕಾಣಬಹುದಾಗಿದೆ.
ಈಗ ಚಳಿಗಾಲದ ಬಗ್ಗೆ ಹೇಳುವುದಾದರೆ, ಚಳಿಗಾಲವು ನವೆಂಬರ್ ಮಧ್ಯದಲ್ಲಿ ಶುರುವಾಗಿ; ಮಾರ್ಚ್ ಮಧ್ಯಕ್ಕೆ ಅಂತ್ಯ ಕಾಣುತ್ತದೆ (ಹೇಮಂತ-ಶಿಶಿರ ಋತು/ಮಾರ್ಗಶಿರ- ಪೌಷ, ಮಾಘ-ಫಾಲ್ಗುಣ ಮಾಸಗಳು). ಈ ಕಾಲದಲ್ಲಿ ಪ್ರಕೃತಿಯಲ್ಲಿ ಆಗುವ ಬದಲಾವಣೆ ಎಂದರೆ ಮಂದವಾಗುವ ಸೂರ್ಯನ ಕಿರಣಗಳಿಂದಾಗಿ ವಾತಾವರಣದಲ್ಲಿನ ಶೀತ ಕ್ರಮೇಣ ವೃದ್ಧಿಸುವುದು,ಗಾಳಿಯಲ್ಲಿನ ರುಕ್ಷತೆ ( Dryness) ಹೆಚ್ಚುವುದು. ಇದರಿಂದಾಗಿ ಸಾಮಾನ್ಯವಾಗಿ ದೇಹದಲ್ಲಿ ಆಗುವ ಬದಲಾವಣೆಯಂದರೆ ದೇಹದ ಅಗ್ನಿ ವೃದ್ಧಿಸಿ ಅದರಿಂದ ಜೀರ್ಣಶಕ್ತಿ ಹೆಚ್ಚಾಗಿ, ಪದೇ ಪದೇ ಹಸಿವಿನ ಅನುಭವವಾಗುತ್ತದೆ. ಶರೀರದ ಯಾವುದೇ ರೀತಿಯ ನೋವುಗಳು ಅಧಿಕವಾಗುವುದು, ಒರಟಾಗುವಿಕೆ ಕೂದಲುಗಳ ಕೂದಲ ಹಾಗೂ ಉದರುವಿಕೆಯ ಪ್ರಮಾಣದಲ್ಲಿ ಹೆಚ್ಚಳ. ಚರ್ಮವು ದೇಹದ ದರ್ಪಣವಿದ್ದಂತೆ; ಹಾಗಂದ ಮೇಲೆ ಈ ಹೇಮಂತ-ಶಿಶಿರನ ಪ್ರಭಾವ ತ್ವಚೆಯ ಮೇಲಾದೀತೆ? ತ್ವಚೆಯ(Dry Skin) ಹೆಚ್ಚಳ, ಹಿಮ್ಮಡಿ-ತುಟಿಗಳ ಒಡೆತ, ಕಾಂತಿಹೀನವಾದ ಮುಖ ಹಾಗೂ ಕೆಲವರಲ್ಲಿ ತ್ವಚೆಯ ಬಿರುಕಿನಿಂದಾಗಿ ಸಣ್ಣ ಪ್ರಮಾಣದ ಚುಚ್ಚುವ ರೀತಿಯ ನೋವಿನ ಅನುಭವ ಇವೆಲ್ಲಾ ನಮ್ಮ ತ್ವಚೆಯ ಮೇಲೆ ಚಳಿಗಾಲದ ಪ್ರಭಾವಕ್ಕೆ ಹಿಡಿದ ಕೈಗನ್ನಡಿ.
ಋತುವಿಗನುಸಾರ ಹಬ್ಬ ಆಚರಿಸಿ: ಹಾಗೆಯೇ ನಾವು ಆಚರಿಸುವ ಪ್ರತಿ ಹಬ್ಬಗಳು ಕೂಡ ಋತುವಿಗನುಸಾರವಾಗಿ ವೈಜ್ಞಾನಿಕ ವಾಗಿಯೂ ಇದೆ. ಉದಾಹರಣೆಗೆ ಚಳಿಗಾಲದಲ್ಲಿ ಬರುವ ಹಬ್ಬವನ್ನೇ ನೋಡಿ. ಸಂಕ್ರಾಂತಿಯ ಎಳ್ಳು- ಬೆಲ್ಲ ಮಿಶ್ರಣ ಸೇವಿಸುವ ವಾಡಿಕೆಯೆ ನೋಡಿ, ಎಳ್ಳು ದೇಹಕ್ಕೆ ಜಿಡ್ಡಿನಂಶವನ್ನು ತುಂಬಿ ರುಕ್ಷತೆಯನ್ನು ನಿವಾರಿಸಿದರೆ ಸಿಹಿ ಬೆಲ್ಲವು ನಮ್ಮ ದೇಹದಲ್ಲಿನ ವಾತ ದೋಷವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ. ಹಾಗಿದ್ದ ಮೇಲೆ ಈ ಚಳಿಗಾಲದಲ್ಲಿ ನೀವು ಕನ್ನಡಿ ನೋಡಿದಾಗ ನಿಮ್ಮ ತ್ವಚೆಯ ಕಾಂತಿ ನೋಡಿ ನಿಮ್ಮ ತುಟಿಗಳು ಮುಗುಳ್ಳಗೆಯನ್ನು ಬೀರಲಿ; ಒಡೆದ ನೋವನ್ನಲ್ಲ ಎಂದು ಹಾರೈಸುತ್ತೇನೆ.
ಹಣ್ಣು-ತರಕಾರಿ ಸೇವಿಸಿ:ಚಳಿಗಾಲದಲ್ಲಿ ಚರ್ಮ ಸೌಂದರ್ಯಕ್ಕೆ ಹೆಚ್ಚಿನ ಗಮನಕೊ ಡಬೇಕಾಗುತ್ತದೆ. ಈಗಾಗಲೇ ಚರ್ಮದ ಸಮಸ್ಯೆ ಇರುವ ವರು ಸಿಹಿ ಪದಾರ್ಥಗಳನ್ನು ಮತ್ತು ಕರಿದ ಪದಾರ್ಥಗಳಿಂದ ದೂರವಿದ್ದರೆ ಒಳ್ಳೆಯದು. ಆಹಾರ ಸೇವನೆಯಲ್ಲಿ ಹಣ್ಣು ಹಂಪಲುಗಳು, ತರಕಾರಿಗಳಿಗೆ ಆದ್ಯತೆ ಹೆಚ್ಚಿರಲಿ. ಆಗ ಚರ್ಮದಲ್ಲಿ ತೇವಾಂಶ ಇರುತ್ತದೆ. ಎಣ್ಣೆ ಮಸಾಜ್ ಮಾಡಿ ಸ್ಥಾನ ಮಾಡುವಾಗಲೂ ಸಾಬೂನು ಬದಲು ಕಡಲೆ ಹಿಟ್ಟು, ಹಾಲಿನ ಕೆನೆಯಿಂದ ಮೈ ಉಜ್ಜುವುದರಿಂದ ಚರ್ಮ ಒರಟಾಗುವುದು, ಒಡೆಯುವುದು ತಪ್ಪುತ್ತದೆ. ಮೈಕಾಂತಿ ಹೆಚ್ಚುತ್ತದೆ. ಪಾದಗಳು ಹೆಚ್ಚು ಒಡೆಯುತ್ತಿದ್ದರೆ ಕ್ಯಾನ್‌ವಾಸ್ ಶೂಗಳನ್ನು ಬಳಸಿದರೆ ಒಳ್ಳೆಯದು.
ಚರ್ಮ ರಕ್ಷಣೆಗೆ ಇಲ್ಲಿದೆ 11 ಉಪಯುಕ್ತ ಟಿಪ್ಸ್:
•ದೇಹದ ಉಷ್ಣಾಂಶ ಕಾಯ್ದುಕೊಳ್ಳುವಿಕೆ •ಕಾಲಕ್ಕೆ ತಕ್ಕ ಉಡುಗೆ ತೊಡುಗೆ ಅಂದರೆ ಬೆಚ್ಚಗಿನ ಉಡುಪುಗಳ ಧಾರಣೆ. •ಬಿಸಿಯಾದ ಹಾಗೂ ಮಧುರ- ಅಮ್ಮ- ಲವಣ ರಸಪ್ರಧಾನವುಳ್ಳ ಆಹಾರಸೇವನೆ. •ಆಹಾರದಲ್ಲಿ ನಿಯಮಿತವಾಗಿ ತುಪ್ಪ-ಬೆಣ್ಣೆ-ಮೊಸರಿನ ಬಳಕೆ. •ಅಭ್ಯಂಗ ಸಾಧ್ಯವಾದಲ್ಲಿ ದಿನ ನಿತ್ಯ ಉಗುರು ಬೆಚ್ಚಗಿನ ಎಳ್ಳೆಣ್ಣೆಯನ್ನು ಮೈಯಿಗೆ ಹಗುರವಾಗಿ ಸವರಿ ఒంದು నిಮಿಷ ಬಿಟ್ಟು ಬಿಸಿನೀರಿನಿಂದ ಸ್ನಾನಮಾಡುವುದು. ಸಾಧ್ಯವಾಗದಿದ್ದಲ್ಲಿ ವಾರಕ್ಕೊಮ್ಮೆ ಈ ರೀತಿ ಮಾಡುವುದರಿಂದ ಚರ್ಮದ ರುಕ್ಷತೆ ಕಮ್ಮಿಯಾಗಿ ಚರ್ಮವು ಕಾಂತಿಯುಕ್ತವಾಗುತ್ತದೆ. •ನಿಯಮಿತವಾಗಿ ವ್ಯಾಯಮ ಮಾಡಿ. •ಮುಖ ಲೇಪಗಳು – ರುಕ್ಷತೆಯಿಂದ ಕಾಂತಿ ಹೀನವಾದ ತ್ವಚೆಗೆ ಮರುಜೀವ ನೀಡಲು ಹಾಲಿನ ಕೆನೆಗೆ ಚಿಟಿಕೆ ಅರಿಶಿಣ ಹಾಕಿ ಮುಖಕ್ಕೆ ಮಸಾಜ್ ಮಾಡುವುದು. •ಯಷ್ಟಿ ಮಧು ತೈಲದಿಂದ ಮುಖಕ್ಕೆ ನಿಯಮಿತವಾಗಿ ಮಸಾಜ್ ಮಾಡಿ, ಉಗುರು ಬೆಚ್ಚನೆ ನೀರಿನಿಂದ ಮುಖ ತೊಳೆಯುವುದು. •ಒಡೆದ ತುಟಿಗಳಿಗೆ ದಿನಕ್ಕೆರಡು ಬಾರಿ ಬೆಣ್ಣೆ ಅಥವಾ ತುಪ್ಪ ಸವರುವುದು. •ಒಡೆದ ಹಿಮ್ಮಡಿಗಳನ್ನು ಒಂದೈದು ನಿಮಿಷ ಬಿಸಿ ನೀರಿನಲ್ಲಿರಿಸಿ ತೆಗೆದು; ನೀರಿನಂಶವಿಲ್ಲದಂತೆ ಒರೆಸಿ ಜೇನಿನ ಮೇಣ ಹಚ್ಚುವುದು. •ಈ ಋತುವಿನಲ್ಲಿ ಬರುವ ಹಬ್ಬಗಳ ನಿಯಮ ಪಾಲನೆ ಮಾಡುವುದು.
Winter has started. In the morning, my whole body is shaking, chapped lips, skin irritation. . So how to maintain our skin health in winter?