ಸುಳ್ಯ:ಎಸ್ ಕೆ ಎಸ್ ಎಸ್ ಎಫ್ ಟ್ರೆಂಡ್ ಸುಳ್ಯ ವಲಯ ವತಿಯಿಂದ ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ಉಚಿತ ಆನ್ ಲೈನ್ ಸೇವೆಯು ಮೂರು ದಿನಗಳ ಕಾಲ ನಡೆಯಿತು. ಕಾರ್ಯಕ್ರಮ ವನ್ನು ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಉಪಾಧ್ಯಕ್ಷ ಅಬ್ದುಲ್ ರಝಾಕ್ ಮುಸ್ಲಿಯಾರ್ ಉದ್ಘಾಟಿಸಿದರು. ಸುಳ್ಯ ವಲಯ ಟ್ರೆಂಡ್ ವೈಸ್ ಚೆಯರ್ಮೇನ್ ಶಮೀಮ್ ಅರ್ಶದಿ ಪಾಜಪಳ್ಳ ನೆರವೇರಿಸಿದರು.
ಮೂರು ದಿನಗಳಲ್ಲಿ ಸುಮಾರು ಮುನ್ನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಟ್ರೆಂಡ್ ಸುಳ್ಯ ವಲಯ ಚೆಯರ್ ಮೆನ್ ಅಬ್ದುಲ್ ಖಾದರ್ ಮೊಟ್ಟೆಂಗಾರ್ ವಹಿಸಿದ್ದರು. ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ ಝಕರಿಯಾ ಉಸ್ತಾದ್ ಕಲ್ಲುಗುಂಡಿ, ಶಹಿದ್ ಪಾರೆ, ಹಿಂದೂಸ್ತಾನ್ ಬಿಲ್ಡರ್ಸ್ ಪರವಾಗಿ ಇಬ್ರಾಹಿಂ ಶಿಲ್ಪಅವರನ್ನು ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಕಾರ್ಯದರ್ಶಿ ಸಿದ್ಧಿಕ್ ಅಡ್ಕ ಶಾಲು ಹೊದಿಸಿ ಸನ್ಮಾನಿಸಿದರು. ಸಮಾರಂಭದಲ್ಲಿ ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಷ್ಟರ್ ಅಧ್ಯಕ್ಷ ಅಬ್ದುಲ್ ರಝಾಕ್ ಕರಾವಳಿ, ಸುಪ್ರೀಂ ಅಹ್ಮದ್ ಹಾಜಿ , ಅಕ್ಬರ್ ಕರಾವಳಿ, ಅಹಮ್ಮದ್ ಪಾರೆ ಮತ್ತಿತರರು ಉಪಸ್ಥಿತರಿದ್ದರು. ಎಸ್ ಕೆ ಎಸ್ ಎಸ್ ಎಫ್ ಟ್ರೆಂಡ್ ನಿರ್ದೇಶಕರಾದ ರಝ್ಝಾಕ್ ಅಡ್ಕ ಸ್ವಾಗತಿಸಿ , ಟ್ರೆಂಡ್ ಕನ್ವೀನರ್ ಕಾದರ್ ಕೆ ಎಂ ವಂದಿಸಿ , ವೈಸ್ ಕನ್ವೀನರ್ ಇಲ್ಯಾಸ್ ಐವರ್ನಾಡು ನಿರೂಪಿಸಿದರು