ಏರಿದ ಕೆ.ಜಿ ಬೆಳ್ಳುಳ್ಳಿ ಬೆಲೆ | 500ರ ಗಡಿ ದಾಟಿದ ದರ

February 10, 2024
12:05 PM

ಒಂದಾದ ಮೇಲೊಂದರಂತೆ ತರಕಾರಿ ಬೆಲೆ(Vegetable price) ಏರೋದು ಮಾಮೂಲು. ಗ್ರಾಹಕ(Customer) ಮಾತ್ರ ಇದರ ಹೊಡೆತಕ್ಕೆ ನಲುಗಿ ಪರದಾಡುವ ಸ್ಥಿತಿ ಬರುತ್ತದೆ. ಅತ್ತ ರೈತರಿಗೆ(Farmer) ಲಾಭ ಬಂದ್ರೆ ಬಂತು.. ಇಲ್ಲಾಂದ್ರೆ ಇಲ್ಲ. ಕಳೆದ ಕೆಲ ತಿಂಗಳಿಂದ ಟೊಮೇಟೋ,(Tomato) ಈರುಳ್ಳಿ(Onion) ಬೆಲೆ(Price) ಏರಿಳಿತ ಕಾಣುತ್ತಲೇ ಇದೆ. ಇದೀಗ  ಬೆಳ್ಳುಳ್ಳಿ(Garlic) ಸರದಿ. ಬೆಳ್ಳುಳ್ಳಿ ಕೆ.ಜಿಗೆ ನೂರಲ್ಲ, ಇನ್ನೂರಲ್ಲ ಬರೋಬ್ಬರಿ 500ರೂ ತಲುಪಿದೆ.

Advertisement

ರಸಂ, ಸಾಂಬರ್, ಗೋಬಿ, ನಾನ್‍ವೆಜ್ ಹೀಗೆ ಟೇಸ್ಟಿ ಟೇಸ್ಟಿಯಾದ ಅಡುಗೆ ಮಾಡಬೇಕಾದ್ರೂ ಬೆಳ್ಳುಳ್ಳಿ ಬೇಕೇ ಬೇಕು. ಬೆಳ್ಳುಳ್ಳಿ ಹಾಕೋದ್ರಿಂದ ಈ ಅಡುಗೆಗಳ ಟೇಸ್ಟ್ ಹೆಚ್ಚಾಗುತ್ತೆ. ಆದರೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದೆ. ಈ ವರ್ಷ ಸರಿಯಾಗಿ ಮಳೆಯಾಗದ ಕಾರಣ ಬೆಳ್ಳುಳ್ಳಿ (Garlic Rate) ಬೆಲೆ ಸರಿಯಾಗಿ ಬಂದಿಲ್ಲ. ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಬೆಳ್ಳುಳ್ಳಿ ಕೆ.ಜಿಗೆ ಹಾಪ್ ಕಾಮ್ಸ್‍ನಲ್ಲಿ 500ರ ಗಡಿ ದಾಟಿದೆ. ಬಿಡಿಸಿದ ಬೆಳ್ಳುಳ್ಳಿ 540 ರೂ. ಆಗಿದ್ರೆ, ಉಂಡೆ ಬೆಳ್ಳುಳ್ಳಿಗೆ ಕೆ.ಜಿಗೆ 492 ರೂ. ಇದೆ.

ಬೆಳ್ಳುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದರೆ ಈ ವರ್ಷ ಸರಿಯಾದ ಮಳೆಯಾಗಿಲ್ಲ. ಅಕಾಲಿಕ ಮಳೆ, ಹವಾಮಾನ ವೈಪರೀತ್ಯ ಹಿನ್ನೆಲೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇಷ್ಟು ದಿನಗಳ ಕಾಲ ನಾಸಿಕ್, ಪೂನಾದಿಂದ ಬರುತ್ತಿದ್ದ ಬೆಳ್ಳುಳ್ಳಿಯ ರಫ್ತು ಕಡಿಮೆಯಾಗಿದೆ. ರಾಜ್ಯದಲ್ಲಿ ಬೆಳಗಾವಿ ಭಾಗಗಳಿಂದ ಬರೋ ಬೆಳ್ಳುಳ್ಳಿ ಸಹ ಕಡಿಮೆಯಾಗಿದೆ. ಹೀಗಾಗಿ ಬೆಳ್ಳುಳ್ಳಿ ಒಗ್ಗರಣೆ ಘಾಟು ಜೋರಾಗಿದೆ. ಬೆಳ್ಳುಳ್ಳಿ ಹೊಸ ಬೆಳೆ ಬರೋವರೆಗೂ ರೇಟ್ ಕಡಿಮೆಯಾಗೋ ಸಾಧ್ಯತೆಯಿಲ್ಲ. ಇದ್ರಿಂದಾಗಿ ಗೃಹಿಣಿಯರು ಅರ್ಧ ಕೆ.ಜಿ, ಒಂದು ಕೆಜಿ ಕೊಳ್ಳೋ ಕಡೆ 100 ಗ್ರಾಂ, 200 ಗ್ರಾಂ ಕೊಳ್ಳೋ ಹಾಗೆ ಆಗಿದೆ.

  • ಅಂತರ್ಜಾಲ ಮಾಹಿತಿ
The price of garlic has skyrocketed in the market. The price of garlic has not come properly due to the lack of rain this year. There is a shortage in supply. Garlic has crossed the 500 mark at Hop Coms per kg. Minced garlic 540 Rs. 492 per kg for lump garlic. 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 11-07-2025 | ಮುಂದಿನ 10 ದಿನಗಳವರೆಗೂ ಕರಾವಳಿ-ಮಲೆನಾಡು ಭಾಗದಲ್ಲಿ ಸಾಮಾನ್ಯ ಮಳೆ | ಜುಲೈ 16ರಿಂದ ಎಲ್ಲೆಲ್ಲಾ ಮಳೆ ಹೆಚ್ಚಾಗಬಹುದು ?
July 11, 2025
4:50 PM
by: ಸಾಯಿಶೇಖರ್ ಕರಿಕಳ
ಕೇತುವಿನ ಕಾಟ: ಈ ರಾಶಿಗಳಿಗೆ ಆರೋಗ್ಯದಲ್ಲಿ ಎಚ್ಚರಿಕೆ ಬೇಕು..!
July 11, 2025
7:33 AM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ವರದಾ, ತುಂಗಭದ್ರಾ ನದಿ
July 11, 2025
7:14 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group