ಗುಜರಾತಿನ ಮುಂದ್ರಾ ಬಂದರು ಮೂಲಕ ಅಡಿಕೆ ಕಳ್ಳಸಾಗಾಣಿಕೆಯ ಮೂಲಕ ಆಮದು ಮಾಡುವ ಪ್ರಯತ್ನವನ್ನು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ಅಧಿಕಾರಿಗಳ ತಂಡ ಪತ್ತೆ ಮಾಡಿದೆ. ಸುಮಾರು 81.85 ಮೆಟ್ರಿಕ್ ಟನ್ ಅಡಿಕೆಯನ್ನು ವಶಪಡಿಸಿಕೊಂಡಿದೆ.
Advertisement
ಆಮದು ಸರಕನ್ನು ತಪ್ಪಾಗಿ ಘೋಷಣೆ ಮಾಡಿ ಅಡಿಕೆಯನ್ನು ಭಾರತಕ್ಕೆ ಕಳ್ಳಸಾಗಾಣಿಕೆ ಮೂಲಕ ತರಲಾಗಿತ್ತು.ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿತ್ತು.ಯುಎಇಯ ಜೆಬೆಲ್ ಅಲಿ ಬಂದರಿನಿಂದ ಕಂಟೈನರ್‌ಗಳಲ್ಲಿ ಸರಕುಗಳು ಮುಂದ್ರಾ ಬಂದರಿಗೆ ಬಂದಿತ್ತು.7.1 ಕೋಟಿ ಮೌಲ್ಯದ 81.85 ಮೆಟ್ರಿಕ್ ಟನ್ ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯನ್ನು ಕಸ್ಟಮ್ಸ್ ಕಾಯ್ದೆಯಡಿ ಬಂಧಿಸಲಾಗಿದೆ. ಅಡಿಕೆ ಆಮದು ಮೇಲೆ 110% ತೆರಿಗೆ ವಿಧಿಸಲಾಗುತ್ತಿದೆ.ವಿದೇಶಿ ಮುಕ್ತ ವ್ಯಾಪಾರ ನೀತಿಯ ಅಡಿಯಲ್ಲಿ ಅಡಿಕೆ ಆಮದು ಕೂಡಾ ನಿಷೇಧಿಸಿದೆ. ಹೀಗಾಗಿ ಈಗ ಅಡಿಕೆ ಆಮದು ಮೇಲೆ ಬಿಗುವಾದ ಕ್ರಮ ಕೈಗೊಳ್ಳಲಾಗುತ್ತಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement