Advertisement
MIRROR FOCUS

ಮ್ಯಾನ್ಮಾರ್‌ನಿಂದ ಅಡಿಕೆ ಕಳ್ಳಸಾಗಣಿಕೆ | 100 ದಿನಗಳಲ್ಲಿ 31.73 ಕೋಟಿ ಮೌಲ್ಯದ ಅಡಿಕೆ ವಶ..! |

Share

ಅಡಿಕೆ ಕಳ್ಳಸಾಗಾಣಿಕೆ ನಡೆಯುತ್ತಲೇ ಇದೆ. ಕಳೆದ 100 ದಿನದಲ್ಲಿ 31.73 ಕೋಟಿ ರೂಪಾಯಿ ಮೌಲ್ಯದ 5.44 ಲಕ್ಷ ಕೆಜಿ ಅಡಿಕೆಯನ್ನು ಮಿಜೋರಾಂನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಅಡಿಕೆ ಕಳ್ಳಸಾಗಾಣಿಕೆಯ ಮೂಲ, ಅಡಿಕೆ ಆಮದು ಮಾಡುವ ಮೂಲ ಮಾತ್ರಾ ಪತ್ತೆಯಾಗಿಲ್ಲ…!.

Advertisement
Advertisement

ಮಿಜೋರಾಂ ಪೊಲೀಸರು ಮತ್ತು ಅಸ್ಸಾಂ ರೈಫಲ್ಸ್ ಕಳೆದ 100 ದಿನಗಳಲ್ಲಿ ಮ್ಯಾನ್ಮಾರ್‌ನಿಂದ ಕಳ್ಳಸಾಗಣೆಯಾದ ನಂತರ 31.73 ಕೋಟಿ ರೂಪಾಯಿ ಮೌಲ್ಯದ 5.44 ಲಕ್ಷ ಕೆಜಿ ಅಡಿಕೆಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.ಮಿಜೋರಾಂ ರಾಜ್ಯ ಸರ್ಕಾರದ ನಿರ್ದೇಶನಗಳನ್ನು ಅನುಸರಿಸಿ,  ಅಡಿಕೆ ಅಕ್ರಮ ಸಾಗಣೆ ತಡೆಗೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.ಇದರ ಪರಿಣಾಮವಾಗಿ ಕಳೆದ 100 ದಿನಗಳಲ್ಲಿ (ಜನವರಿ 1 ರಿಂದ ಏಪ್ರಿಲ್ 10 ರವರೆಗೆ) ಭಾರೀ ಪ್ರಮಾಣದ ಅಡಿಕೆ ವಶಕ್ಕೆ ತೆಗೆದುಕೊಳ್ಳಲಾಗಿದೆ.ಅಡಿಕೆ ಕಳ್ಳಸಾಗಣೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 19 ಎಫ್‌ಐಆರ್‌ಗಳನ್ನು ದಾಖಲಿಸಿ 61 ಜನರನ್ನು ಬಂಧಿಸಿದ್ದಾರೆ. ಮ್ಯಾನ್ಮಾರ್ ಮತ್ತು ಅಸ್ಸಾಂ ಸರ್ಕಾರದ  ನಿರ್ಬಂಧಗಳಿಂದ ದೊಡ್ಡ ಪ್ರಮಾಣದ ಕಳ್ಳಸಾಗಣೆ ತಡೆಯಾಗಿದೆ. ಆದರೆ ಈಶಾನ್ಯ ರಾಜ್ಯಗಳಲ್ಲಿ, ವಿಶೇಷವಾಗಿ ಮಿಜೋರಾಂ ಮತ್ತು ತ್ರಿಪುರಾದಲ್ಲಿ ಅಡಿಕೆ ರೈತರ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲಿನ ರೈತರಿಗೂ ಅಡಿಕೆ ಸಾಗಾಣಿಕೆ ಕಷ್ಟವಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯ ಹೆಚ್ಚುತ್ತಿದೆ. ತ್ರಿಪುರಾದ ಅಡಿಕೆ ಬೆಳೆಗಾರರು ಈ ಹಿಂದೆ ಅಸ್ಸಾಂ ಸರ್ಕಾರವು ತಮ್ಮ ಉತ್ಪನ್ನಗಳ ಮೇಲೆ ಹೇರಿದ ಸಾರಿಗೆ ನಿರ್ಬಂಧಗಳ ವಿರುದ್ಧ ಆಂದೋಲನಗಳನ್ನು ಆಯೋಜಿಸಿದ್ದರು. ತ್ರಿಪುರಾದ ಜಾಂಪುಯಿ  ಮಿಜೋರಾಂನ ಪಕ್ಕದಲ್ಲಿದೆ. ಇದು ಕಿತ್ತಳೆಗೆ ಹೆಸರುವಾಸಿಯಾಗಿದೆ, ಇಂದು ದೊಡ್ಡ ಪ್ರಮಾಣದ ಅಡಿಕೆ ಉತ್ಪಾದನೆಗೆ ಕೂಡಾ ಹೆಸರುವಾಸಿಯಾಗಿದೆ.

Advertisement

ಕಾಂಗ್ರೆಸ್ ನಾಯಕಿ ಮತ್ತು ಶಾಸಕಿ ಲಾಲ್ರಿಂಡಿಕಾ ರಾಲ್ಟೆ ಅವರು ಇತ್ತೀಚೆಗೆ ಬರ್ಮಾ ಅಡಿಕೆ ಕಳ್ಳಸಾಗಣೆಯಿಂದಾಗಿ ಮಿಜೋರಾಂನಲ್ಲಿ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆಯನ್ನು ಕೋರಿದರು. ಮಿಜೋರಾಂನ 518 ಕಿಮೀ ಗಡಿಯ ಮೂಲಕ ನೆರೆಯ ಮ್ಯಾನ್ಮಾರ್ ಮತ್ತು ಇತರೆಡೆಗಳಿಂದ  ಅಡಿಕೆಯನ್ನು ವ್ಯಾಪಕವಾಗಿ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗಿದೆ ಎಂದು ರಾಲ್ಟೆ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭಾರತದಲ್ಲಿ ಏರಿದ ತಾಪಮಾನ : ಅತ್ತ ತಾಂಜಾನಿಯಾದಲ್ಲಿ ಭಾರೀ ಮಳೆ, ಪ್ರವಾಹ : 155 ಮಂದಿ ಸಾವು

ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜಾನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ…

29 mins ago

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು : ದೂರ ಸಾಗಿದ ಮಳೆ : ಬಿಸಿ ಗಾಳಿಯ ಮುನ್ಸೂಚನೆ

ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…

44 mins ago

ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |

ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…

1 hour ago

ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |

ಮಳೆಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ ಪರ್ಜನ್ಯ ಜ‌ಪ ನೆರವೇರಿತು.

3 hours ago

ವಾರದ ಅತಿಥಿ | ರಾಜಕಾರಣದಲ್ಲಿ “ನೈತಿಕ ಮೌಲ್ಯ” ತುಂಬಬೇಕು | ಸಮಾಜದಲ್ಲಿ”ಅನೇಕಾಂತವಾದ” ಬೆಳೆಯಬೇಕು |

ರಾಜಕಾರಣದಲ್ಲಿ ನೈತಿಕ ಮೌಲ್ಯ ತುಂಬಬೇಕಾದ್ದು ಏಕೆ ? ಸಮಾಜದಲ್ಲಿ ಸಾಮರಸ್ಯ ಮೂಡಲು ಏನು…

4 hours ago

ಮೇ.1 | ಮಳೆಗಾಗಿ ನಡೆಯಲಿದೆ ಪಂಜದಲ್ಲಿ ಪ್ರಾರ್ಥನೆ

ಮಳೆಗಾಗಿ ಸಾಮೂಹಿಕ ಪ್ರಾರ್ಥನೆ, ವಿಶೇಷ ಪೂಜೆ ನಡೆಯಲಿದೆ.

5 hours ago