ಹಸಿರು ಹಾವಿನ ಅಪರೂಪದ ಚಿತ್ರವನ್ನು ಹಿರಿಯ ಪತ್ರಕರ್ತ ಶಿವಸುಬ್ರಹ್ಮಣ್ಯ ಕಲ್ಮಡ್ಕ ಅವರು ಸೆರೆಹಿಡಿದಿದ್ದಾರೆ. ನಮ್ಮ ತೋಟಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣುವ ಹಸಿರುವ ಹಾವು ಎಲ್ಲರಿಗೂ ಮಾಮೂಲಿಯೇ. ಆದರೆ ಆ ಹಾವುಗಳು ತನ್ನ ವೈರಿಯನ್ನು ಹಿಮ್ಮೆಟ್ಟಿಸಲು ಭಯಪಡಿಸುತ್ತವೆ. ಅಂತಹ ಸಂದರ್ಭದ ಒಂದು ಅಪರೂಪ ಕ್ಷಣದ ಫೋಟೊವನ್ನು ಶಿವಸುಬ್ರಹ್ಮಣ್ಯ ಅವರು ಸೆರೆಹಿಡಿದ್ದಾರೆ.
This slideshow requires JavaScript.
ಈ ಹಾವಿನ ಚಿತ್ರ ತೆಗೆದಿರುವ ಬಗ್ಗೆ ಶಿವಸುಬ್ರಹ್ಮಣ್ಯ ಕಲ್ಮಡ್ಕ ಹೀಗೆ ಹೇಳಿದ್ದಾರೆ,
ನನ್ನ ತೋಟದಲ್ಲಿ ಅದೆಷ್ಟೋ ಬಾರಿ ಹಸಿರು ಹಾವನ್ನು ನೋಡಿದ್ದರೂ ಫೊಟೋ ತೆಗೆಯಲಾಗಲಿಲ್ಲ. ಕ್ಣಣದಲ್ಲೇ ಮಾಯವಾಗುತ್ತಿತ್ತು. ಪಶ್ಚಿಮ ಘಟ್ಟದಲ್ಲಿ ಮಿಸ್ ಆಗಿದ್ದು, ಈಗ ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಜಲಾಶಯದ ದಂಡೆಯಲ್ಲೇ ಸಿಕ್ಕಿತು. ವಿಷಕಾರಿ ಹಾವು ಇದಲ್ಲ. ಧೈರ‌್ಯದಿಂದಲೇ ಹತ್ತಿರ ಹೋಗಿ ಕ್ಲಿಕ್ ಮಾಡುತ್ತಿದ್ದಂತೆ ಹಾವಿಗೆ ಸಿಟ್ಟು ಬಂದು, ರಕ್ಷಣಾತ್ಮಕವಾಗಿ , ವೈರಿಯನ್ನು ಹೆದರಿಸುವ ಭಂಗಿಯಲ್ಲಿ ಕೆಲವು ಸೆಕೆಂಡ್ ಗಳ ಕಾಲ ನಿಂತಿತು. ನೀಲಾಕಾಶದ ಹಿನ್ನೋಟದಲ್ಲಿ ಹಾವು ಯಾವುದೋ ಅನಿಮೇಷನ್ ಸಿನಿಮಾದಲ್ಲಿ ಇದ್ದಂತೆ ಕಾಣುತ್ತಿದೆ.
This slideshow requires JavaScript.