ಕಾಶ್ಮೀರದಲ್ಲಿ ಹಿಮಪಾತ ಆರಂಭ | ಮಧ್ಯಭಾರತ ಹಾಗೂ  ಉತ್ತರ ಭಾರತದಲ್ಲಿ  ತಾಪಮಾನ ಗಣನೀಯ ಪ್ರಮಾಣದಲ್ಲಿ  ಏರಿಕೆ

March 18, 2025
7:32 PM

ಕಣಿವೆ ರಾಜ್ಯ  ಕಾಶ್ಮೀರದಲ್ಲಿ  ಹಿಮಪಾತ  ಆರಂಭವಾಗಿದೆ.   ಕಾಶ್ಮೀರದ  ಹಲವು ಭಾಗಗಳಲ್ಲಿ ಎರಡು ದಿನಗಳ ಹಿಂದೆ  ಸಾಧಾರಣ  ಮಳೆಯಾಗಿತ್ತು. ಅದಾದ ಬಳಿಕ ಅನಂತನಾಗ್, ಕುಲ್ಗಾಮ್ , ಸೋಫಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ  ಭಾರೀ ಪ್ರಮಾಣದಲ್ಲಿ  ಮಂಜು ಬೀಳುತ್ತಿದೆ.  ಗುಲ್ಮಾರ್ಗ್, ಸೋನಾಮಾರ್ಗ್  ಮತ್ತು ಪೆಹೆಲ್ಗಾಮ್ ನಲ್ಲಿ  ಭಾರೀ ಪ್ರಮಾಣದಲ್ಲಿ  ಮಂಜು  ಬೀಳುತ್ತಿದ್ದು,  ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬಂಡೀಪೋರ  ಜಿಲ್ಲೆಯ  ಗುರೇಸ್ , ಕುಪ್ವಾರದ  ಹಲವು ಪ್ರದೇಶಗಳಲ್ಲೂ  ಭಾರೀ ಪ್ರಮಾಣದಲ್ಲಿ  ಹಿಮ ಬೀಳುತ್ತಿದ್ದು,  ಜನವಸತಿ ಹಾಗೂ  ಅರಣ್ಯಗಳ ಮೇಲೆ  ಮಂಜಿನ ಹೊದಿಕೆ ಹಾಸಿಕೊಂಡಂತೆ  ತೋರುತ್ತಿದೆ. ಮುಂದಿನ ಒಂದೆರಡು ದಿನಗಳಲ್ಲಿ   ಕಣಿವೆ ರಾಜ್ಯದಲ್ಲಿ   ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು  ಹವಾಮಾನ ಇಲಾಖೆ  ಸಹ ತಿಳಿಸಿದೆ. ………ಮುಂದೆ ಓದಿ……..

ಇದೇ ವೇಳೆ ಮಹಾರಾಷ್ಟ್ರ ಸೇರಿದಂತೆ  ಮಧ್ಯಭಾರತ ಹಾಗೂ  ಉತ್ತರ ಭಾರತದಲ್ಲಿ  ತಾಪಮಾನ ಗಣನೀಯ ಪ್ರಮಾಣದಲ್ಲಿ  ಏರಿಕೆಯಾಗುತ್ತಿದೆ.  ಮಹಾರಾಷ್ಟ್ರದ  ಚಂದ್ರಾಪುರದಲ್ಲಿ  ನಿನ್ನೆ  41.4 ಡಿಗ್ರಿ ಸೆಲ್ಸಿಯಸ್ , ಗರಿಷ್ಠ ತಾಪಮಾನ ದಾಖಲಾಗಿತ್ತು.  ಮುಂದಿನ 2 ದಿನಗಳಲ್ಲಿ  ವಿದರ್ಭ ಪ್ರದೇಶದಲ್ಲಿ  ಬಿಸಿ ಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ..

ಅಕೋಲಾ, ಚಂದ್ರಾಪುರ, ಯವತ್ನಾಳ್ ಜಿಲ್ಲೆಗಳಲ್ಲಿ ಅರೆಂಜ್ ಅಲರ್ಟ್  ಹಾಗೂ  ವಾದ್ರಾ, ನಾಗಪುರ, ಅಮರಾವತಿ ಜಿಲ್ಲೆಗಳಲ್ಲಿ  ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೋಲ್ಲಾಪುರ ಜಿಲ್ಲೆಯ ಅಶುವಾಡಿ ಮತ್ತು ಅಜ್ರಾ ತಾಲೂಕುಗಳಲ್ಲಿ  ದಿಢೀರ್ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ  ತಂಪೆರಂತಾಗಿದೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನಭೋಮಂಡಲಕ್ಕೆ ಇಣುಕುನೋಟ | ಗಗನಯಾತ್ರಿಗಳನ್ನು ಸ್ವಾಗತಿಸೋಣ…|
March 18, 2025
9:52 PM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಚಿಕ್ಕಮಗಳೂರು ಜಿಲ್ಲೆ | ಮಂಗನ ಕಾಯಿಲೆ ಸೋಂಕಿಗೆ ವೃದ್ಧೆ ಬಲಿ | ಮಂಗನಕಾಯಿಲೆ ಬಗ್ಗೆ ಇರಲಿ ಎಚ್ಚರ |
March 18, 2025
8:31 PM
by: The Rural Mirror ಸುದ್ದಿಜಾಲ
ಸ್ಥಳೀಯ ಮಟ್ಟದಲ್ಲಿ ಸೌರ ವಿದ್ಯುತ್ ಉತ್ಪಾದಿಸಿ ರೈತರ ಪಂಪ್ ಸೆಟ್ ಗಳಿಗೆ ಪೂರೈಸಲು ಚಿಂತನೆ | ಸದ್ಯ ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ |
March 18, 2025
8:13 PM
by: The Rural Mirror ಸುದ್ದಿಜಾಲ
ಅಮೆರಿಕದ ಹಲವು ರಾಜ್ಯಗಳಲ್ಲಿ ಚಂಡಮಾರುತ-ಸುಳಿಗಾಳಿ; ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ
March 18, 2025
7:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror