ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಿಮಪಾತ ಆರಂಭವಾಗಿದೆ. ಕಾಶ್ಮೀರದ ಹಲವು ಭಾಗಗಳಲ್ಲಿ ಎರಡು ದಿನಗಳ ಹಿಂದೆ ಸಾಧಾರಣ ಮಳೆಯಾಗಿತ್ತು. ಅದಾದ ಬಳಿಕ ಅನಂತನಾಗ್, ಕುಲ್ಗಾಮ್ , ಸೋಫಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಂಜು ಬೀಳುತ್ತಿದೆ. ಗುಲ್ಮಾರ್ಗ್, ಸೋನಾಮಾರ್ಗ್ ಮತ್ತು ಪೆಹೆಲ್ಗಾಮ್ ನಲ್ಲಿ ಭಾರೀ ಪ್ರಮಾಣದಲ್ಲಿ ಮಂಜು ಬೀಳುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬಂಡೀಪೋರ ಜಿಲ್ಲೆಯ ಗುರೇಸ್ , ಕುಪ್ವಾರದ ಹಲವು ಪ್ರದೇಶಗಳಲ್ಲೂ ಭಾರೀ ಪ್ರಮಾಣದಲ್ಲಿ ಹಿಮ ಬೀಳುತ್ತಿದ್ದು, ಜನವಸತಿ ಹಾಗೂ ಅರಣ್ಯಗಳ ಮೇಲೆ ಮಂಜಿನ ಹೊದಿಕೆ ಹಾಸಿಕೊಂಡಂತೆ ತೋರುತ್ತಿದೆ. ಮುಂದಿನ ಒಂದೆರಡು ದಿನಗಳಲ್ಲಿ ಕಣಿವೆ ರಾಜ್ಯದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಸಹ ತಿಳಿಸಿದೆ. ………ಮುಂದೆ ಓದಿ……..
ಇದೇ ವೇಳೆ ಮಹಾರಾಷ್ಟ್ರ ಸೇರಿದಂತೆ ಮಧ್ಯಭಾರತ ಹಾಗೂ ಉತ್ತರ ಭಾರತದಲ್ಲಿ ತಾಪಮಾನ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಿನ್ನೆ 41.4 ಡಿಗ್ರಿ ಸೆಲ್ಸಿಯಸ್ , ಗರಿಷ್ಠ ತಾಪಮಾನ ದಾಖಲಾಗಿತ್ತು. ಮುಂದಿನ 2 ದಿನಗಳಲ್ಲಿ ವಿದರ್ಭ ಪ್ರದೇಶದಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ..
ಅಕೋಲಾ, ಚಂದ್ರಾಪುರ, ಯವತ್ನಾಳ್ ಜಿಲ್ಲೆಗಳಲ್ಲಿ ಅರೆಂಜ್ ಅಲರ್ಟ್ ಹಾಗೂ ವಾದ್ರಾ, ನಾಗಪುರ, ಅಮರಾವತಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೋಲ್ಲಾಪುರ ಜಿಲ್ಲೆಯ ಅಶುವಾಡಿ ಮತ್ತು ಅಜ್ರಾ ತಾಲೂಕುಗಳಲ್ಲಿ ದಿಢೀರ್ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ತಂಪೆರಂತಾಗಿದೆ.
ಒಂಬತ್ತು ತಿಂಗಳ ಹಿಂದೆ ಜೂನ್ 5 ರಂದು ISS ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ…
ಮಂಗನಕಾಯಿಲೆ ಸೋಂಕು ಮಲೆನಾಡು ಕಡೆಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲವು ಕಡೆ…
ರೈತರ ಪಂಪ್ ಸೆಟ್ ಗಳಿಗೆ ಪ್ರತಿನಿತ್ಯ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ…
ಅಮೆರಿಕದ ಹಲವು ರಾಜ್ಯಗಳಲ್ಲಿ ಅತ್ಯಂತ ಪ್ರಬಲ ಚಂಡಮಾರುತ ಹಾಗೂ ಸುಳಿಗಾಳಿ ಉಂಟಾಗಿದ್ದು, ಈವರೆಗೆ…
ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಾ. 20 ರವರೆಗೆ ಬಿಸಿ ಗಾಳಿ ಬೀಸುವ…
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ, ಬೆಳ್ತಂಗಡಿ ಸುತ್ತಮುತ್ತ ಭಾಗಗಳಲ್ಲಿ, ಕೊಡಗು ಜಿಲ್ಲೆಯ…