ಸಾಮಾಜಿಕ ಜಾಲತಾಣಗಳ ಬಳಕೆ ಈಚೆಗೆ ಹೆಚ್ಚಾಗಿದೆ. ಅದರಲ್ಲೂ ಪೇಸ್‌ಬುಕ್, ಟ್ವಿಟ್ಟರ್,ಇನ್‌ಸ್ಟಾಗ್ರಾಂ ಬಳಕೆಯಲ್ಲಿ ಯುವಜನತೆ ಮುಂದಿದ್ದಾರೆ. ಇಂದಿನ ಬಹುತೇಕ ಚರ್ಚೆಗಳೂ ಸಾಮಾಜಿಕ ಜಾಲತಾಣಗಳ ಮೂಲಕ ನಡೆದು ಬಹಿರಂಗ ಚರ್ಚೆಗೆ ಕಾರಣವಾಗುತ್ತಿದೆ. ಅದರಲ್ಲೂ ದ್ವೇಷ ಭಾಷಣ, ಚರ್ಚೆ, ಅತ್ಯಂತ ಕೆಟ್ಟ ಪದಪ್ರಯೋಗಗಳೂ ಇಲ್ಲೇ ಆಗುತ್ತವೆ. ಮೆಟಾ ಬಿಡುಗಡೆ ಮಾಡಿರುವ ವರದಿ ಪ್ರಕಾರ ಎಪ್ರಿಲ್‌ನಲ್ಲಿ ಫೇಸ್‌ಬುಕ್ 53,200 ದ್ವೇಷ ಭಾಷಣಗಳನ್ನು ಪತ್ತೆಹಚ್ಚಿದೆ ಹಾಗೂ ಕ್ರಮ ಕೈಗೊಂಡಿದೆ.
ಮೆಟಾ ಬಿಡುಗಡೆ ಮಾಡಿರುವ ವರದಿ ಪ್ರಕಾರ ಈಚೆಗೆ ಫೇಸ್‌ಬುಕ್ ಬಳಕೆ ಹೆಚ್ಚಾಗಿದೆ. ಅದರ ಜೊತೆಗೆ ಸುಮಾರು 37.82 ರಷ್ಟು ಫೇಸ್‌ಬುಕ್ ನಲ್ಲಿ ಹಾಗೂ ಶೇಕಡಾ 86 ರಷ್ಟು ಇನ್‌ಸ್ಟಾಗ್ರಾಮ್‌ನಲ್ಲಿ ಹಿಂಸಾತ್ಮಕ ಮತ್ತು ಪ್ರಚೋದಿಸುವ ವಿಷಯಗಳು ನಡೆದಿದೆ. ಮೇ 31 ರಂದು ಬಿಡುಗಡೆಯಾದ ವರದಿಯ ಪ್ರಕಾರ, ಫೇಸ್‌ಬುಕ್ ಏಪ್ರಿಲ್‌ನಲ್ಲಿ 53,200 ದ್ವೇಷ ಭಾಷಣಗಳನ್ನು ಪತ್ತೆಹಚ್ಚಿದೆ, ಇದು ಮಾರ್ಚ್‌ನಲ್ಲಿ ಪತ್ತೆಯಾದ 38,600 ಕ್ಕೆ ಹೋಲಿಸಿದರೆ 37.82 ಶೇಕಡಾ ಹೆಚ್ಚಾಗಿದೆ.
ಮಾರ್ಚ್‌ನಲ್ಲಿ ಇನ್ಸ್ಟಾಗ್ರಾಮ್ ನಲ್ಲಿ 41,300 ಹಿಂಸಾಚಾರ ಮತ್ತು ಪ್ರಚೋದನೆ-ಸಂಬಂಧಿತ ವಿಷಯ ವರದಿಯಾಗಿತ್ತು. ಏಪ್ರಿಲ್‌ನಲ್ಲಿ 77,000 ಪ್ರಕರಣ ವರದಿಯಾಗಿದೆ.
ಅದರ ಜೊತೆಗೆ ಆತ್ಮಹತ್ಯೆ ಮತ್ತು ಗಾಯಗಳ ವರದಿಯೂ ಏರಿಕೆ ಕಂಡಿದ್ದು 7.15 ಲಕ್ಷ ಪ್ರಕರಣ ವರದಿಯಾಗಿದೆ.ಅಪಾಯಕಾರಿ ಸಂಘಟನೆ ಹಾಗೂ ವ್ಯಕ್ತಿಗಳಿಗೆ ಸಂಬಂಧಿಸಿ 85 ಸಾವಿರ ಪ್ರಕರಣ ದಾಖಲಾಗಿದೆ. ಅಪಾಯಕಾರಿ ಸಂಘಟನೆ ಹಾಗೂ ಸಂಸ್ಥೆಗಳು, ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿ 1.13 ಲಕ್ಷ ಪ್ರಕರಣವನ್ನು ಪೇಸ್ ಬುಕ್ ಪತ್ತೆ ಮಾಡಿದೆ. ಇದರ ಜೊತೆಗೆ ಲೈಂಗಿಕ ಪ್ರಕರಣ, ಮಕ್ಕಳಿಗೆ ಕಿರುಕುಳ, ಮಕ್ಕಳ ದುರ್ಬಳಕೆ ಇತ್ಯಾದಿ ಪ್ರಕರಣಗಳು ಹೆಚ್ಚಾಗಿ ನಡೆದಿದ್ದು ಅಂತಹ ಘಟನೆಗಳನ್ನು ಪತ್ತೆ ಮಾಡಿದ ಪೇಸ್ ಬುಕ್ ತಕ್ಷಣವೇ ಕ್ರಮ ಕೈಗೊಂಡಿದೆ ಎಂದು ವರದಿ ಮಾಡಿದೆ.