ಸೋಶಿಯಲ್‌ ಮೀಡಿಯಾದ ಚಾಲೆಂಜ್‌ ನಮಗೇ ಚಾಲೆಂಜ್‌ ಯಾಕೆ ಗೊತ್ತಾ ?

September 27, 2020
11:02 AM
ಸೋಶಿಯಲ್‌ ಮೀಡಿಯಾದಲ್ಲಿ ಈಗ ಚಾಲೆಂಜ್‌ ಯುಗ. ಒಬ್ಬೊಬ್ಬರದು ಒಂದೊಂದು ಚಾಲೆಂಜ್.‌ ಇದರ ಪರಿಣಾಮ ಏನು ಗೊತ್ತಾ ? ಪುಣೆ ಪೊಲೀಸರು ಅಧಿಕೃತವಾಗಿ ಈ ಬಗ್ಗೆ ಹೇಳಿದ್ದಾರೆ. ಇಂತಹ ಚಾಲೆಂಜ್‌ ಬದುಕಿಗೇ ಚಾಲೆಂಜ್‌ ಆಗುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.

Advertisement
Advertisement

ಸೋಶಿಯಲ್‌ ಮೀಡಿಯಾದಲ್ಲಿ  ಅದರಲ್ಲೂ ವಿಶೇಷವಾಗಿ ಪೇಸ್‌ ಬುಕ್‌ ಮೂಲಕ ಈಗ ಫೋಟೊ ಹಾಕಿಕೊಳ್ಳುವ, ಕುಟುಂಬದ ಫೋಟೊ ಹಾಕಿಕೊಳ್ಳುವ  ಹೊಸದೊಂದು ಟ್ರೆಂಡ್‌ ಶುರುವಾಗಿದೆ. ಗ್ರಾಮೀಣ ಭಾಗದಿಂದ ತೊಡಗಿ ನಗರದವರೆಗೆ ಮುಗ್ದವಾಗಿ ಜನರು ಫೋಟೊ  ಹಾಕಿ  ಅದಕ್ಕೆ ಒಂದಿಷ್ಟು ಲೈಕ್ ಬಂದರೆ ಅದೇ ಖುಷಿ. ಈಗಂತೂ ಹೊಸತು ಹೊಸತು ಟ್ರೆಂಡ್‌ ಗಳು ಶುರುವಾಗಿದೆ, ಚಾಲೆಂಜ್‌ ಗಳು ಶುರುವಾಗಿದೆ. ಈಗ ಕುಟುಂಬದ ಫೋಟೊ ಹಾಕುವ ಕಪಲ್‌ ಚಾಲೆಂಗ್‌ ಭಾರೀ ಟ್ರೆಂಡ್‌ ಆಗಿತ್ತು. ಇದೀಗ ಮತ್ತೆ ಅರಂಭವಾಗುತ್ತಿದೆ. ಈ ಸಂದರ್ಭ ಪುಣೆ ಪೊಲೀಸರು ಎಚ್ಚರಿಕೆ ನೀಡಿದ್ದು ಸೋಶಿಯಲ್‌ ಮೀಡಿಯಾದಲ್ಲಿ  ಕಪಲ್‌ ಚಾಲೆಂಜ್‌ ಮೂಲಕ ಹಾಕಿರುವ ಫೋಟೊಗಳು ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

 

ಫೋಟೊಗಳನ್ನು  ಎಡಿಟ್‌ ಮಾಡಿ ಅಸಭ್ಯ ಹಾಗೂ ಇತರ ಉದ್ದೇಶಕ್ಕೆ ಬಳಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.ಈಗಾಗಲೇ  ಫೋಟೋಗಳನ್ನು ದುರುಪಯೋಗ ಪಡಿಸಿಕೊಂಡಿರುವ ದೂರು​ಗಳು ತಮಗೆ ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ. ಇಷ್ಟೇ ಅಲ್ಲ ಖಾಸಗಿ ಫೋಟೊ, ಕುಟುಂಬದ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ  ಹಾಕುವಾಗ ಎಚ್ಚರಿಕೆ ವಹಿಸುವುದು , ಚಾಲೆಂಜ್‌ ಗಳನ್ನು  ಸ್ವೀಕರಿಸುವಾಗ ಎಚ್ಚರಿಕೆ ಅಗತ್ಯ ಎಂದು ಪೊಲೀಸರು ಹೇಳಿದ್ದಾರೆ.

Advertisement

ಈ ಚಾಲೆಂಜ್‌ ಮೂಲಕ ಎಲ್ಲಾ ಫೋಟೊಗಳು ಒಂದೇ ಟ್ಯಾಗ್‌ ಅಡಿಯಲ್ಲಿ ಲಭ್ಯವಾಗುತ್ತದೆ. ಇದು ಫೋಟೊ ಕದಿಯಲು ಸುಲಭವಾಗುತ್ತದೆ. ಇದಕ್ಕಾಗಿ ಟ್ಯಾಗ್‌ ಉಪಯೋಗ ಮಾಡಿ ನೀಡುವ ಚಾಲೆಂಜ್‌ ಗಳಲ್ಲಿ  ತೊಡಗಿಸಿಕೊಳ್ಳುವುದರಲ್ಲಿ  ಜಾಗೃತೆ ಇರಬೇಕು ಎಂದೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಂಬಿಕಾ ವಸತಿನಿಲಯಕ್ಕೆ ಎಫ್‍ಎಫ್‍ಎಸ್‍ಎಐ ಪ್ರಮಾಣಪತ್ರ
February 22, 2024
9:01 PM
by: ದ ರೂರಲ್ ಮಿರರ್.ಕಾಂ
ದೆಹಲಿ ವಾಯುಮಾಲಿನ್ಯದ ರೀತಿ ಬಂದರು ನಗರಿ ಮಂಗಳೂರು ಆಗಲಿದೆಯಾ..? | ಅರಣ್ಯ ನಾಶದಿಂದ ಬಂದರು ನಗರಿಯಲ್ಲಿ ಕುಗ್ಗುತ್ತಿದೆ ಆಮ್ಲಜನಕದ ಪ್ರಮಾಣ..! |
November 22, 2023
1:07 PM
by: The Rural Mirror ಸುದ್ದಿಜಾಲ
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ರಾತ್ರಿ 10 ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ
November 4, 2023
10:08 PM
by: ದ ರೂರಲ್ ಮಿರರ್.ಕಾಂ
#WeatherMirror| ಕೂಲ್‌ ಸಿಟಿ ಆಗುತ್ತಿದೆ ಹಾಟ್‌ ಸಿಟಿ…. ! | ಏರುತ್ತಿದೆ ಬೆಂಗಳೂರು ತಾಪಮಾನ | ಎಚ್ಚರಿಸುತ್ತಿದೆ ಹವಾಮಾನ |
August 16, 2023
3:58 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group