ಸೋಶಿಯಲ್ ಮೀಡಿಯಾದಲ್ಲಿ ಅದರಲ್ಲೂ ವಿಶೇಷವಾಗಿ ಪೇಸ್ ಬುಕ್ ಮೂಲಕ ಈಗ ಫೋಟೊ ಹಾಕಿಕೊಳ್ಳುವ, ಕುಟುಂಬದ ಫೋಟೊ ಹಾಕಿಕೊಳ್ಳುವ ಹೊಸದೊಂದು ಟ್ರೆಂಡ್ ಶುರುವಾಗಿದೆ. ಗ್ರಾಮೀಣ ಭಾಗದಿಂದ ತೊಡಗಿ ನಗರದವರೆಗೆ ಮುಗ್ದವಾಗಿ ಜನರು ಫೋಟೊ ಹಾಕಿ ಅದಕ್ಕೆ ಒಂದಿಷ್ಟು ಲೈಕ್ ಬಂದರೆ ಅದೇ ಖುಷಿ. ಈಗಂತೂ ಹೊಸತು ಹೊಸತು ಟ್ರೆಂಡ್ ಗಳು ಶುರುವಾಗಿದೆ, ಚಾಲೆಂಜ್ ಗಳು ಶುರುವಾಗಿದೆ. ಈಗ ಕುಟುಂಬದ ಫೋಟೊ ಹಾಕುವ ಕಪಲ್ ಚಾಲೆಂಗ್ ಭಾರೀ ಟ್ರೆಂಡ್ ಆಗಿತ್ತು. ಇದೀಗ ಮತ್ತೆ ಅರಂಭವಾಗುತ್ತಿದೆ. ಈ ಸಂದರ್ಭ ಪುಣೆ ಪೊಲೀಸರು ಎಚ್ಚರಿಕೆ ನೀಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಕಪಲ್ ಚಾಲೆಂಜ್ ಮೂಲಕ ಹಾಕಿರುವ ಫೋಟೊಗಳು ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಫೋಟೊಗಳನ್ನು ಎಡಿಟ್ ಮಾಡಿ ಅಸಭ್ಯ ಹಾಗೂ ಇತರ ಉದ್ದೇಶಕ್ಕೆ ಬಳಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.ಈಗಾಗಲೇ ಫೋಟೋಗಳನ್ನು ದುರುಪಯೋಗ ಪಡಿಸಿಕೊಂಡಿರುವ ದೂರುಗಳು ತಮಗೆ ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ. ಇಷ್ಟೇ ಅಲ್ಲ ಖಾಸಗಿ ಫೋಟೊ, ಕುಟುಂಬದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹಾಕುವಾಗ ಎಚ್ಚರಿಕೆ ವಹಿಸುವುದು , ಚಾಲೆಂಜ್ ಗಳನ್ನು ಸ್ವೀಕರಿಸುವಾಗ ಎಚ್ಚರಿಕೆ ಅಗತ್ಯ ಎಂದು ಪೊಲೀಸರು ಹೇಳಿದ್ದಾರೆ.
ಈ ಚಾಲೆಂಜ್ ಮೂಲಕ ಎಲ್ಲಾ ಫೋಟೊಗಳು ಒಂದೇ ಟ್ಯಾಗ್ ಅಡಿಯಲ್ಲಿ ಲಭ್ಯವಾಗುತ್ತದೆ. ಇದು ಫೋಟೊ ಕದಿಯಲು ಸುಲಭವಾಗುತ್ತದೆ. ಇದಕ್ಕಾಗಿ ಟ್ಯಾಗ್ ಉಪಯೋಗ ಮಾಡಿ ನೀಡುವ ಚಾಲೆಂಜ್ ಗಳಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಜಾಗೃತೆ ಇರಬೇಕು ಎಂದೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಅಡಿಕೆ ಬೆಳೆಗೆ ಉತ್ತಮ ಧಾರಣೆ ಲಭಿಸುವ ನಿರೀಕ್ಷೆ ಇದೆ.…
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಯುವ ಕಲಾವಿದ ಮಿಥುನ್ ಕುಮಾರ್ ಸೋನ…
ಮುಂದಿನ 7 ದಿನಗಳವರೆಗೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಉತ್ತರ ಒಳನಾಡಿನ…
ಪ್ರಸ್ತುತ 2024-25 ನೇ ಸಾಲಿನಿಂದ ಸ್ಕ್ಯಾನ್ ಪ್ರತಿ, ಮರು ಎಣಿಕೆಗೆ ಮತ್ತು ಮರು…
2026 ರ ವೇಳೆಗೆ ಭಾರತವನ್ನು ನಕ್ಸಲ್ ಮುಕ್ತ ಗೊಳಿಸಲಾಗುವುದು ಎಂದು ಕೇಂದ್ರ ಸಚಿವ…
ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ವೇದ ಮಂತ್ರಗಳ ಪಠಣ…